ಸೋಮವಾರ, ಜೂನ್ 16, 2025
Homedistrict NewsMysore Palace :ಸಾರ್ವಜನಿಕರ ಗಮನಕ್ಕೆ : ಈ ದಿನದಂದು ಮೈಸೂರು ಅರಮನೆ ದರ್ಶನಕ್ಕೆ ಇರಲಿದೆ ನಿರ್ಬಂಧ

Mysore Palace :ಸಾರ್ವಜನಿಕರ ಗಮನಕ್ಕೆ : ಈ ದಿನದಂದು ಮೈಸೂರು ಅರಮನೆ ದರ್ಶನಕ್ಕೆ ಇರಲಿದೆ ನಿರ್ಬಂಧ

- Advertisement -

ಮೈಸೂರು : Mysore Palace : ಅರಮನೆ ನಗರಿ ಮೈಸೂರಿನಲ್ಲಿ ನಾಡಹಬ್ಬ ಆರಂಭಗೊಳ್ಳಲು ಇನ್ನೇನು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದೆ. ಉಸ್ತುವಾರಿ ಸಚಿವ ಎಸ್​,ಟಿ ಸೋಮಶೇಖರ್​ , ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸೇರಿದಂತೆ ಬಿಜೆಪಿ ನಾಯಕರು ದಸರಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್​ ಕಾರಣದಿಂದಾಗಿ ಮೈಸೂರು ದಸರಾ ಜಂಬೂ ಸವಾರಿ ಕಾರ್ಯಕ್ರಮಗಳಿಗೆ ಆಚರಣೆಗೊಂಡಿರಲಿಲ್ಲ.ಹೀಗಾಗಿ ಈ ಬಾರಿ ಎಂದಿನಂತೆ ಅತ್ಯಂತ ವಿಜೃಂಭಣೆಯಿಂದ ಮೈಸೂರು ದಸರಾವನ್ನು ಆಯೋಜಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.


ನಾಡಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ಅರಮನೆ ದರ್ಶನಕ್ಕೆ ಸಾರ್ವಜನಿಕರಿಗೆ ನಿರ್ಬಂಧವನ್ನು ಹೇರಲಾಗಿದೆ. ಅಂಬಾ ವಿಲಾಸ ಅರಮನೆಯು ಈ ಬಾರಿಯ ನಾಡಹಬ್ಬಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸೆಪ್ಟೆಂಬರ್​ 26ರಂದು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್​​ನ ಪೂಜಾ ಕಾರ್ಯವನ್ನು ರಾಜವಂಶಸ್ಥರು ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 1:30ರವರೆಗೆ ಸಾರ್ವಜನಿಕರಿಗೆ ಮೈಸೂರು ಅರಮನೆಯ ದರ್ಶನವನ್ನು ಪಡೆಯಲು ನಿರ್ಬಂಧ ಹೇರಲಾಗಿದೆ.


ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದೇ ರೀತಿ ಖಾಸಗಿ ದರ್ಬಾರ್​ ಕೂಡ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಖಾಸಗಿ ದರ್ಬಾರ್​​​ ದಸರಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಜ್ರಖಚಿತ ಸಿಂಹಾಸನವನ್ನು ಜೋಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕಾಗಿ ಮೈಸೂರಿನ ಗೆಜ್ಜಗಳ್ಳಿ ಗ್ರಾಮದಿಂದ ನುರಿತ ಸಿಂಹಾಸನ ಜೋಡಣೆ ಮಾಡುವವರು ಆಗಮಿಸಲಿದ್ದಾರೆ.


ಅಕ್ಟೋಬರ್​ ನಾಲ್ಕರಂದೂ ಸಹ ಸಾರ್ವಜನಿಕರಿಗೆ ಮೈಸೂರು ಅರಮನೆ ದರ್ಶನಕ್ಕೆ ನಿರ್ಬಂಧ ಇರಲಿದೆ. ಈ ದಿನದಂದು ರಾಜವಂಶಸ್ಥ ಯದುವೀರ್​ ಒಡೆಯುರ್​ ಆಯುಧ ಪೂಜೆಯನ್ನು ಅರಮನೆಯಲ್ಲಿ ನೆರವೇರಿಸಲಿದ್ದಾರೆ. ಇದಾಗಿ ಮಾರನೇ ದಿನ ಅಂದರೆ ಅಕ್ಟೋಬರ್​ ಐದರಂದು ಯದುವೀರ್​ ಒಡೆಯರ್​​ ವಿಜಯದಶಮಿ ಪೂಜೆಯನ್ನು ಅಂಬಾವಿಲಾಸ ಅರಮನೆಯಲ್ಲಿ ನೆರವೇರಿಸಲಿದ್ದಾರೆ. ಅಕ್ಟೋಬರ್​ 20ರಂದು ಸಿಂಹಾಸನ ವಿಸರ್ಜನೆ ಕಾರ್ಯಕ್ರಮ ಇರಲಿದ್ದು ಈ ದಿನ ಕೂಡ ಸಾರ್ವಜನಿಕರು ಅರಮನೆ ಪ್ರವೇಶ ಮಾಡುವಂತಿಲ್ಲ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಸಾರ್ವಜನಿಕರಿಗೆ ಅಂಬಾ ವಿಲಾಸ ಅರಮನೆ ಪ್ರವೇಶಕ್ಕೆ ನಿರ್ಬಂಧ ಇರಲಿದೆ.

ಇದನ್ನು ಓದಿ : Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

ಇದನ್ನೂ ಓದಿ : India Vs Australia T20 : ಮೊಹಾಲಿಯಲ್ಲಿ ನಾಳೆ ಮೊದಲ ಪಂದ್ಯ; ಹೀಗಿದೆ ಭಾರತದ ಪ್ಲೇಯಿಂಗ್ XI

Visiting Mysore Palace will be restricted on these days

RELATED ARTICLES

Most Popular