ಬಿಹಾರ : IAS officer rebukes girl :ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ನೀಡುವ ಯೋಜನೆಯು ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಪಾಡ್ನಾದಲ್ಲಿ ಬಡ ವಿದ್ಯಾರ್ಥಿನಿಯೊಬ್ಬಳು ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ನೀಡಬೇಕು ಎಂದು ಕೇಳಿದ್ದಕ್ಕೆ ಹಿರಿಯ ಐಎಎಸ್ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹರ್ಜೋತ್ ಕೌರ್ ಬುಮ್ರಾ ಬಾಲಕಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಎನ್ಜಿಓಗಳ ಸಹಭಾಗಿತ್ವದಲ್ಲಿ ಡಬ್ಲುಟಿಸಿ ಆಯೋಜಿಸಿದ್ದ ಸಶಕ್ತ್ ಬೇಟಿ, ಸಮೃದ್ಧ ಬಿಹಾರ್ ಎಂಬ ಕಾರ್ಯಕ್ರಮದ ಅಡಿಯಲ್ಲಿ ಬಿಹಾರದಲ್ಲಿ ಬಾಲಕಿಯರ ಮೌಲ್ಯವನ್ನು ಹೆಚ್ಚಿಸುವಂತ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯೊಬ್ಬರು ಸರ್ಕಾರವು ನಮಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು 20 ರಿಂದ 30 ರೂಪಾಯಿಗಳಿಗೆ ನೀಡಬಹುದೇ..? ಎಂದು ಪ್ರಶ್ನೆ ಮಾಡಿದ್ದಳು.
ನಿಮ್ಮ ಇಂತಹ ಬೇಡಿಕೆಗಳಿಗೆ ಕೊನೆ ಎಂಬುದು ಇದೆಯೇ..? ಇಂದು ಪ್ಯಾಡ್, ನಾಳೆ ಜೀನ್ಸ್ ಹಾಗೂ ಸುಂದರವಾದ ಶೂಗಳನ್ನು ನೀವು ಸರ್ಕಾರದ ಬಳಿಯೇ ಕೇಳಬಹುದು. ಕೊನೆಗೆ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಸರ್ಕಾರವೇ ನಿಮಗೆ ಕಾಂಡೋಮ್ಗಳನ್ನೂ ಉಚಿತವಾಗಿ ನೀಡಬೇಕು ಎಂದು ನೀವು ಕೇಳಬಹುದು. ಇದರಿಂದ ಮುಜುಗರಕ್ಕೊಳಗಾದ ಬಾಲಕಿಯು ಮುಂದಿನ ಚುನಾವಣೆಯಲ್ಲಿ ಈ ಸರ್ಕಾರಕ್ಕೆ ನಾವು ಮತ ಹಾಕುವುದಿಲ್ಲ ಎಂದು ಹೇಳಿದಾಗ ಅಧಿಕಾರಿಯು ಇದಕ್ಕೆ ಇನ್ನೂ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕಿಯು ಮತ ಚಲಾವಣೆಯ ಮಾತುಗಳನ್ನು ಎತ್ತುತ್ತಿದ್ದಂತೆಯೇ ಇನ್ನೂ ಖಾರವಾಗಿ ಪ್ರತಿಕ್ರಿಯಿಸಿದ ಅಧಿಕಾರಿ ಹರ್ಜೋತ್ ಕೌರ್, ಆಯ್ತು ಮತ ಹಾಕಬೇಡಿ. ಇದು ನಿಮ್ಮ ಮೂರ್ಖತನಕ್ಕೆ ನಾವೇನು ಹೇಳಲು ಸಾಧ್ಯವಿಲ್ಲ. ನೀವು ಮತ ಹಾಕುವ ಅಗತ್ಯ ಕೂಡ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಮಹಿಳಾ ಅಧಿಕಾರಿಯ ಈ ರೀತಿಯ ವರ್ತನೆಗೆ ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ಆಘಾತ ವ್ಯಕ್ತಪಡಿಸಿದ್ದಾರೆ.
ಐಎಎಸ್ ಅಧಿಕಾರಿ ಹೆಣ್ಣುಮಕ್ಕಳ ನೈತಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಮಾಡಬೇಕು. ಆದರೆ ಈ ಸರ್ಕಾರಿ ಅಧಿಕಾರಿ ಬಾಲಕಿಯ ಆತ್ಮವಿಶ್ವಾಸವನ್ನು ನಿರುತ್ಸಾಹಗೊಳಿಸಲು ಯತ್ನಿಸಿದ್ದಾರೆ, ಇದು ಸರಿಯಲ್ಲ. ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದನ್ನು ಅಧಿಕಾರಿ ನಿಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ಹೇಳಿದ್ದಾರೆ.
ಜನರ ಬೇಡಿಕೆಯನ್ನು ನೀವೇ ಹತ್ತಿಕ್ಕಿದರೆ, ಸರ್ಕಾರದಿಂದ ಈ ಪ್ರಶ್ನೆಗಳನ್ನು ಯಾರು ಕೇಳುತ್ತಾರೆ..? ಈ ಬಗ್ಗೆ ನಾನು ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಚರ್ಚೆ ನಡೆಸುತ್ತೇನೆ. ಸರ್ಕಾರ ಈಗಾಗಲೇ ಮಹಿಳಾ ವರ್ಗದವರಿಗೆ ರಾಜ್ಯ ಪಂಚಾಯತ್ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವಂತಹ ಸಾಕಷ್ಟು ಕೆಲಸ ಮಾಡಿದೆ ಎಂದು ಸಾಹ್ನಿ ಹೇಳಿದ್ದಾರೆ .
ಇದನ್ನು ಓದಿ : Rest of India Team : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ
ಇದನ್ನೂ ಓದಿ : election year : ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕಕರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್
Want condoms too? IAS officer rebukes girl seeking pads