KL Rahul: ಟಫ್ ಪಿಚ್‌ನಲ್ಲಿ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ರೂ ರಾಹುಲ್ ಮೇಲೆ ಟೀಕಾಸ್ತ್ರ, ಟ್ರೋಲ್‌ಗಳ ಸುರಿಮಳೆ

ತಿರುವನಂತಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (KL Rahul)ಅವರ ಪಾತ್ರ ದೊಡ್ಡದು (India Vs South Africa T20 Series). 51 ರನ್’ಗಳಿಗಾಗಿ 56 ಎಸೆತಗಳನ್ನೆದುರಿಸಿದರೂ ರಾಹುಲ್ ಬಾರಿಸಿದ ಆ 51 ರನ್’ಗಳೇ ಭಾರತದ ಗೆಲುವನ್ನು ಖಚಿತ ಪಡಿಸಿದ್ದು. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 106 ರನ್ ಕಲೆ ಹಾಕಿತ್ತು. ಮೇಲ್ನೋಟಕ್ಕೆ ಭಾರತಕ್ಕಿದು ಸುಲಭ ಸವಾಲಿನಂತೆ ಕಂಡು ಬಂದ್ರೂ ಒಳಗಿನ ಸತ್ಯ ಬೇರೆಯೇ ಇತ್ತು. ಆ ಸತ್ಯವನ್ನು ಅರಿತುಕೊಳ್ಳದೆ ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್, ಟೀಕೆ ಮಾಡಲಾಗುತ್ತಿದೆ.

https://twitter.com/VIROoT_Kohli/status/1575345413833506818?s=20&t=naWLgUD7Jz6NhcFrVelpgA

(India Vs South Africa T20 Series)107 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ನಾಯಕ ರೋಹಿತ್ ಶರ್ಮಾರನ್ನು ಶೂನ್ಯಕ್ಕೆ ಕಳೆದುಕೊಂಡ್ರೆ, ಪ್ರೀಮಿಯರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಔಟಾಗಿದ್ರು. ಭಾರತ 17 ರನ್ನಿಗೆ 2 ವಿಕೆಟ್ ಕಳೆದುಕೊಂಡಾಗ ಮತ್ತೊಂದು ವಿಕೆಟ್ ಪತನವಾಗಿದ್ದರೂ ಭಾರತಕ್ಕೆ ದೊಡ್ಡ ಸಂಕಷ್ಟ ಎದುರಾಗುತ್ತಿತ್ತು. ಆದರೆ ಪವರ್ ಪ್ಲೇನಲ್ಲಿ ದಕ್ಷಿಣ ಆಫ್ರಿಕಾದ ಮಾರಕ ದಾಳಿಗೆ ಸಡ್ಡು ಹೊಡೆದು ನಿಂತ ಕೆ.ಎಲ್ ರಾಹುಲ್ (KL Rahul)ಮತ್ತೆ ವಿಕೆಟ್ ಪತನವಾಗದಂತೆ ತಡೆದರು. ಬ್ಯಾಟಿಂಗ್‌ಗೆ ಅತ್ಯಂತ ಕಠಿಣವಾಗಿದ್ದ ಪಿಚ್‌ನಲ್ಲಿ ಹರಿಣ ಪಡೆಯ ವೇಗಿಗಳ ಉರಿ ದಾಳಿಗೆ ರಾಹುಲ್ ಸಡ್ಡು ಹೊಡೆದು ನಿಂತರು. ಪವರ್ ಪ್ಲೇನಲ್ಲಿ ಭಾರತದ ರನ್ ವೇಗಕ್ಕೆ ಬ್ರೇಕ್ ಬಿದ್ದರೂ ವಿಕೆಟ್’ಗಳು ಉರುಳದಂತೆ ತಡೆಯುವ ಮೂಲಕ ಭಾರತದ ಗೆಲುವಿನಲ್ಲಿ ರಾಹುಲ್ ನಿರ್ಣಾಯಕ ಪಾತ್ರ ವಹಿಸಿದರು.

ಆದರೂ ರಾಹುಲ್ ಅವರ ಆಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾಗುತ್ತಿದೆ, ರಾಹುಲ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಇದರ ವಿರುದ್ಧ ಕಿಡಿ ಕಾರಿರುವ ಭಾರತ ತಂಡದ ಮಾಜಿ ಟೆಸ್ಟ್ ಕ್ರಿಕೆಟರ್, ಹಾಲಿ ಕ್ರಿಕೆಟ್ ಕಾಮೆಂಟೇಟರ್ ಆಗಿರುವ ಆಕಾಶ್ ಚೋಪ್ರಾ (Akash Chopra), “ರಾಹುಲ್ ಬಗ್ಗೆ ಮಾಡಲಾಗುತ್ತಿರುವ ಟೀಕೆ ಸರಿಯಾದ ದಾರಿಯಲ್ಲಿಲ್ಲ ಎಂದು ಭಾವಿಸುತ್ತೇನೆ. ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ ಕೇವಲ 106 ರನ್ ಗಳಿಸುವಂತಾಗಲು ಮತ್ತು ಭಾರತ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದ್ದರ ಹಿಂದೆ ಒಂದು ಕಾರಣವಿದೆ. ಬ್ಯಾಟಿಂಗ್ ಕಠಿಣವಾಗಿದ್ದ ಪಿಚ್‌ನಲ್ಲಿ ರಾಹುಲ್ ಟಾಪ್ ಕ್ವಾಲಿಟಿ ಆಟವಾಡಿದರು” ಎಂದು ಕನ್ನಡಿಗ ಆಟಕ್ಕೆ ಪ್ರಶಂಸ್ತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಿಕ್ಸ್ ಹಿಟ್ಟಿಂಗ್‌ನಲ್ಲಿ ಪಾಕಿಸ್ತಾನದ ರಿಜ್ವಾನ್ ರೆಕಾರ್ಡ್ ಪೀಸ್ ಪೀಸ್.. ಹೊಸ ವಿಶ್ವದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು

ಇದನ್ನೂ ಓದಿ : ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಒಬ್ಬನೇ ಕನ್ನಡಿಗ

ರಾಹುಲ್ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ರೆ, ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಕೇವಲ 33 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದರು. ಭಾರತ 17 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ರಾಹುಲ್-ಸೂರ್ಯ ಜೋಡಿ ಮುರಿಯದ 3ನೇ ವಿಕೆಟ್‌ಗೆ 93 ರನ್ ಸೇರಿಸಿ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿತ್ತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ಅಕ್ಟೋಬರ್ 2ರಂದು ಗುವಾಹಟಿಯಲ್ಲಿ ನಡೆಯಲಿದೆ.

Despite winning Team India on a tough pitch, Rahul was criticized and trolled.

Comments are closed.