PFI:ಪಿಎಫ್​​ಐನ ಟ್ವಿಟರ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ ಖಾತೆಗಳು ಬಂದ್​: ಪಿಎಫ್​ಐ ಮುಖಂಡರ ಸೋಶಿಯಲ್​ ಮೀಡಿಯಾ ಖಾತೆಗೂ ಲಗಾಮು

ದೆಹಲಿ : PFI : ದೇಶದ್ರೋಹಿ ಚಟುವಟಿಕೆಗಳನ್ನು ನಡೆಸಲು ಪಾಪ್ಯೂಲರ್​ ಫ್ರಂಟ್​ ಆಫ್​ ಇಂಡಿಯಾ ಹೊಂಚು ಹಾಕುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆಯೇ ದೇಶಾದ್ಯಂತ ಕೇಂದ್ರ ಸರ್ಕಾರ ಐದು ವರ್ಷಗಳ ಪಿಎಫ್​ಐಯನ್ನು ನಿಷೇಧಿಸಿದ್ದು ಈ ಘೋಷಣೆ ನಡೆದು ಒಂದು ದಿನಗಳ ನಂತರ ಟ್ವಿಟರ್​ ಖಾತೆಯನ್ನು ತಡೆ ಹಿಡಿಯಲಾಗಿದೆ. ಇದರ ಜೊತೆತಲ್ಲಿ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ ಅಧಿಕೃತ ಖಾತೆಗಳೂ ಬಂದ್​ ಆಗಿದೆ.


ಪಿಎಫ್​ಐ ಟ್ವಿಟರ್​ ಖಾತೆಯಲ್ಲಿ 80 ಸಾವಿರಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದೆ. ಪಿಎಫ್​​ಐ ಬ್ಯಾನ್​ ಆದ ಒಂದು ದಿನಗಳ ಬಳಿಕ ಇದೀಗ ಪಿಎಫ್​​ಐ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆಗಳಿಗೆ ಲಗಾಮು ಹಾಕಲಾಗಿದೆ. ಇದರ ಜೊತೆಯಲ್ಲಿ ಪಿಎಫ್​​ಐ ಅಧ್ಯಕ್ಷ ಒಎಂಎ ಸಲಾಂ ಹಾಗೂ ಪ್ರಧಾನ ಕಾರ್ಯದರ್ಶಿ ಅನಿಸ್​​ ಅಹ್ಮದ್​​​ ಖಾತೆಗಳನ್ನೂ ತಡೆ ಹಿಡಿಯಲಾಗಿದೆ.


ಪಾಪ್ಯೂಲರ್​ ಫ್ರಂಟ್​ ಆಫ್​ ಇಂಡಿಯಾ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ದೇಶದಲ್ಲಿ ಅನೇಕ ಯುವಕರ ಸಾವಿನ ಹಿಂದೆಯೂ ಪಿಎಫ್​ಐ ಕೈವಾಡವಿದ್ದು ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಅಡಿಯಲ್ಲಿ ಗೃಹ ಸಚಿವಾಲಯಗಳ ಇಲಾಖೆಯು ಪಿಎಫ್​ಐ ಹಾಗೂ ಅದರ ಅಂಗಸಂಸ್ಥೆಗಳು ಐಎಸ್​ಐಎಸ್​ನಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ. ರಾಷ್ಟ್ರೀಯ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಪಿಎಫ್​ಐನಂತಹ ಸಂಘಟನೆಯಿಂದ ದೇಶದ ಆಂತರಿಕ ಭದ್ರತೆಗೆ ದೊಡ್ಡ ಅಪಾಯ ಎಂದು ಕಾರಣಗಳನ್ನು ನೀಡಿ ಪಿಎಫ್​​ಐನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ.ದೇಶದಲ್ಲಿ ಕೆಲವು ದಿನಗಳಿಂದ ರಾಷ್ಟ್ರೀಯ ತನಿಖಾ ದಳವು ಪಿಎಫ್​ಐನ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಿ ನೂರಕ್ಕೂ ಅಧಿಕ ಪಿಎಫ್​ಐ ಮುಖಂಡರನ್ನು ವಶಕ್ಕೆ ಪಡೆದಿತ್ತು. ಈ ಎಲ್ಲದರ ಬೆನ್ನಲ್ಲೇ ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಾರಿಗೆ ಬರುವಂತೆ ಪಾಪ್ಯೂಲರ್​ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಯನ್ನು ಬ್ಯಾನ್​ ಮಾಡಿದೆ. ಕೇಂದ್ರ ಸರ್ಕಾರದ ಈ ಆದೇಶದ ಬಳಿಕ ಪಿಎಫ್​ಐ ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಇದನ್ನು ಓದಿ : election year : ಚುನಾವಣೆ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಭರ್ಜರಿ ಗಿಫ್ಟ್

ಇದನ್ನೂ ಓದಿ : IAS officer rebukes girl:ಸ್ಯಾನಿಟರಿ ಪ್ಯಾಡ್​ ಬೇಕೆಂದು ಕೇಳಿದ ಬಾಲಕಿಗೆ ಉಚಿತ ಕಾಂಡೋಮ್​ ಬೇಕಾ ಎಂದ ಮಹಿಳಾ ಅಧಿಕಾರಿ : ವ್ಯಾಪಕ ಆಕ್ರೋಶ

Twitter handles of PFI, its leaders taken down day after ban

Comments are closed.