ಸೋಮವಾರ, ಏಪ್ರಿಲ್ 28, 2025
HomeSportsCricketBumrah hits back at critics : ಟಿ20 ವಿಶ್ವಕಪ್‌ನಿಂದ ಔಟ್: ಟೀಕಾಕಾರರನ್ನು ಬೊಗಳುವ ನಾಯಿಗೆ...

Bumrah hits back at critics : ಟಿ20 ವಿಶ್ವಕಪ್‌ನಿಂದ ಔಟ್: ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸಿದ ಜಸ್‌ಪ್ರೀತ್ ಬುಮ್ರಾ

- Advertisement -

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿರುವ ಜಸ್’ಪ್ರೀತ್ ಬುಮ್ರಾ (Jasprit Bumrah critics) ತಮ್ಮ ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸಿದ್ದಾರೆ. ಅಷ್ಟಕ್ಕೂ ಭಾರತ ತಂಡದ ಪರ ಆಡುವ ಒಬ್ಬ ಆಟಗಾರ ತನ್ನ ಟೀಕಾಕಾರನ್ನು ನಾಯಿಗೆ ಹೋಲಿಸಲು ಕಾರಣವೇನು? ಬುಮ್ರಾ ಇಷ್ಟೊಂದು ಆಕ್ರೋಶಗೊಳ್ಳುವಂತೆ ಮಾಡಿದ್ದು ಯಾರು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಟಿ20 ವಿಶ್ವಕಪ್ ಟೂರ್ನಿಗಾಗಿ (T20 World Cup 2022) ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದರು. ಆದರೆ ಬೆನ್ನು ನೋವಿನ ಕಾರಣ ಬುಮ್ರಾ ವಿಶ್ವಕಪ್’ಗೆ ಅಲಭ್ಯರಾಗಿದ್ದಾರೆ. ಗಾಯದ ಕಾರಣ ಏಷ್ಯಾ ಕಪ್ ಟೂರ್ನಿಗೂ ಅಲಭ್ಯರಾಗಿದ್ದ ಬುಮ್ರಾ, ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. ಆದರೆ ಕೇವಲ 2 ಪಂದ್ಯಗಳನ್ನಾಡುವಷ್ಟರಲ್ಲಿ ಮತ್ತೆ ಗಾಯದ ಸಮಸ್ಯೆಗೆ ಗುರಿಯಾಗಿದ್ದು, ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ವಿಶ್ವಕಪ್ ಹೊಸ್ತಿಲಲ್ಲೇ ಟೀಮ್ ಇಂಡಿಯಾದ ಪ್ರಮುಖ ವೇಗಿ ಬುಮ್ರಾ ಗಾಯಕ್ಕೊಳಗಾಗಿ ಟೂರ್ನಿಗೆ ಅಲಭ್ಯರಾಗಿರುವುದು ಕ್ರಿಕೆಟ್ ಪ್ರಿಯರ ಪಿತ್ತ ನೆತ್ತಿಗೇರುವಂತೆ ಮಾಡಿದೆ. “ಐಪಿಎಲ್ ಸಂದರ್ಭದಲ್ಲಿ ಇವರಿಗೆ ಯಾವ ಗಾಯವೂ ಇರುವುದಿಲ್ಲ. ದೇಶದ ಪರ ಆಡುವ ಸಂದರ್ಭ ಎದುರಾದಾಗ ಎಲ್ಲಾ ಗಾಯಗಳು ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತವೆ. ಮುಂದಿನ ಐಪಿಎಲ್ ಹೊತ್ತಿಗೆ ಎಲ್ಲಾ ಗಾಯಗಳು ಮಾಯವಾಗುತ್ತವೆ” ಎಂದು ಬುಮ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದರು.

https://twitter.com/Detective_Ji/status/1575476676037083136?s=20&t=JwVHFuIjKxw8PEMFox7Q-Q

ಟೀಕಾಕಾರರ ಈ ಟೀಕೆಗಳಿಗೆ ಜಸ್ಪ್ರೀತ್ ಬುಮ್ರಾ ತಮ್ಮ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಒಂದೇ ಸಾಲಿನ ಉತ್ತರ ಕೊಟ್ಟಿದ್ದಾರೆ. “ನಿಮ್ಮ ಪ್ರಯತ್ನವನ್ನು ನೀವು ನಿಲ್ಲಿಸಿದರೆ ಮತ್ತು ನಿಮ್ಮನ್ನು ನೋಡಿ ಬೊಗಳುವ ಪ್ರತಿಯೊಂದು ನಾಯಿಗೆ ನೀವು ಕಲ್ಲು ಹೊಡೆಯುತ್ತಾ ಕೂತರೆ, ನೀವು ನಿಮ್ಮ ಗುರಿಯನ್ನು ತಲುಪಲು ಸಾಧ್ಯವಿಲ್ಲ” ಎಂದು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಬುಮ್ರಾ ಬರೆದುಕೊಂಡಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡುತ್ತಿರುವ ಟೀಕಾಕಾರರನ್ನು ಬೊಗಳುವ ನಾಯಿಗೆ ಹೋಲಿಸುವ ಮೂಲಕ ಬುಮ್ರಾ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

20 ವಿಶ್ವಕಪ್’ಗೆ ಜಸ್’ಪ್ರೀತ್ ಬುಮ್ರಾ ಅವರ ಅಲಭ್ಯತೆ ಟೀಮ್ ಇಂಡಿಯಾಗೆ ಬಹುದೊಡ್ಡ ಹೊಡೆತ. ಈಗಾಗ್ಲೇ ರೋಹಿತ್ ಶರ್ಮಾ ಬಳಗ ಡೆತ್ ಓವರ್ ವೈಫಲ್ಯ ಎದುರಿಸುತ್ತಿದ್ದು ಬುಮ್ರಾ ಅವರ ಅನುಪಸ್ಥಿತಿ ತಂಡಕ್ಕೆ ಭಾರೀ ಹಿನ್ನಡೆಯಾಗಿ ಪರಿಣಮಿಸಲಿದೆ. ಬುಮ್ರಾ ಅವರ ಬದಲು ಅನುಭನಿ ವೇಗಿ ಮೊಹಮ್ಮದ್ ಶಮಿ ಅಥವಾ ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ ವಿಶ್ವಕಪ್’ನಲ್ಲಿ ಆಡಲಿರುವ ಟೀಮ್ ಇಂಡಿಯಾ 15ರ ಬಳಗ ಸೇರಿಕೊಳ್ಳುವ ಸಾಧ್ಯತೆಯಿದೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ (ಅಕ್ಟೋಬರ್ 17) ಹಾಗೂ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ (ಅಕ್ಟೋಬರ್ 19) ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಗಳು ಬ್ರಿಸ್ಬೇನ್’ನಲ್ಲಿ ನಡೆಯಲಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡದ 14 ಮಂದಿ ಸದಸ್ಯರು ಗುರುವಾರ ಮುಂಜಾನೆ ಮುಂಬೈನಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ : Rakheem Cornwall : 22 ಸಿಕ್ಸರ್+17 ಬೌಂಡರಿ=200: ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಂಡೀಸ್ ದೈತ್ಯ

ಇದನ್ನೂ ಓದಿ : India Vs South Africa 1st ODI : ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೀಗಿದೆ

T20 World Cup 2022 Jasprit Bumrah hits back at critics

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular