Sweet recipes:ಸಿಹಿ ಪ್ರಿಯರಿಗೆ ಇಷ್ಟವಾಗುತ್ತೆ “ಸವೆನ್‌ ಕಪ್‌‌ ” ಸ್ವೀಟ್

(Sweet recipes)ಸಿಹಿ ತಿನಿಸು ಇಲ್ಲದೆ ಯಾವುದೇ ಹಬ್ಬವಾದರೂ ಸಂಪೂರ್ಣ ವೆನಿಸುವುದಿಲ್ಲ. ಬೇರೆ ರೀತಿಯ (Sweet recipes)ಸಿಹಿ ತಿನಿಸು ಮಾಡುವುದಕ್ಕೆ ಸಮಯ ಹಿಡಿಯುತ್ತದೆ. ಸಾಮಾನ್ಯವಾಗಿ ಎಲ್ಲಾ ಹಬ್ಬಗಳಲ್ಲೂ ಪಾಯಸ ಇದ್ದೆ ಇರುತ್ತದೆ . ಇಲ್ಲವಾದಲ್ಲಿ ಅಂಗಡಿಗಳಿಂದ ದುಡ್ಡು ಕೊಟ್ಟು ಖರೀದಿ ಮಾಡುತ್ತಾರೆ.ಇದರ ಬದಲು ಸಿಹಿ ತಿನಿಸನ್ನು ಬಹಳ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅದ್ರಲ್ಲೂ ಸಿಹಿಪ್ರಿಯರು ಸಾಕಷ್ಟು ಇಷ್ಟಪಡುವ ಸವೆನ್‌ ಕಪ್‌ ಸಿಹಿ ತಿನಿಸನ್ನು ಮಾಡುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಸಾಮಾಗ್ರಿ:

ಕಡ್ಲೆಹಿಟ್ಟು- 1ಕಪ್‌
ಸಕ್ಕರೆ-2ಕಪ್
ತುಪ್ಪ-1ಕಪ್
ಹಾಲು-1ಕಪ್
ಕಾಯಿತುರಿ-1ಕಪ್
ತುಂಡರಿಸಿದ ಗೋಡಂಬಿ‌

ಮಾಡುವ ವಿಧಾನ:

ಒಂದು ಬಾಣಲಿಯಲ್ಲಿ ಮೊದಲಿಗೆ ಕಡ್ಲೆಹಿಟ್ಟು ಒಂದು ಕಪ್‌, ಸಕ್ಕರೆ ಎರಡು ಕಪ್‌, ತುಪ್ಪ ಒಂದು ಕಪ್‌, ಹಾಲು ಒಂದು ಕಪ್‌, ಕಾಯಿತುರಿ ಒಂದು ಕಪ್‌, ನಿಮಗೆ ಇಷ್ಟವಾಗುವಷ್ಟು ಗೋಡಂಬಿ. ಎಲ್ಲವನ್ನೂ ಬಾಣಲಿಗೆ ಹಾಕಿ ಸೌಟಿನಿಂದ ಆಡಿಸುತ್ತಾ ಇರಬೇಕು ಆ ಮಿಶ್ರಣ ದಪ್ಪ ಹದದಲ್ಲಿ ಬಂದಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ ತಕ್ಷಣ ಅದನ್ನು ಕತ್ತರಿಸಬೇಕು.

ಇದನ್ನೂ ಓದಿ: India Vs South Africa 1st ODI : ಶಿಖರ್ ಧವನ್ ನಾಯಕತ್ವದ ಟೀಮ್ ಇಂಡಿಯಾ ಪ್ಲೇಯಿಂಗ್ XI ಹೀಗಿದೆ

ಇದನ್ನೂ ಓದಿ:108 Ambulance : ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ : ಮುಷ್ಕರಕ್ಕೆ ಮುಂದಾದ 108 ಚಾಲಕರು

ಇದನ್ನೂ ಓದಿ:Mexico Firing : ಮೆಕ್ಸಿಕೋ ಸಿಟಿಯಲ್ಲಿ ಗುಂಡಿನ ದಾಳಿ ; ಮೇಯರ್‌ ಸೇರಿ 18 ಮಂದಿ ಸಾವು

ಗೋಡಂಬಿ ಹಲ್ವಾ ಮಾಡುವ ವಿಧಾನ:


ಬೇಕಾಗುವ ಸಾಮಾಗ್ರಿ:

  • ಗೊಡಂಬಿ – 1 ಕಪ್‌
  • ಗೋಧಿ ಹಿಟ್ಟು- ಅರ್ಧ ಕಪ್
  • ಸಕ್ಕರೆ-1
  • ತುಪ್ಪ- ಅರ್ಧ ಕಪ್
  • ಎಲಕ್ಕಿ ಪುಡಿ- ಚಿಟಿಕೆಯಷ್ಟು
  • ಕೇಸರಿ-‌ 3-4 (ಕೇಸರಿ ಎಳೆಗಳು)
  • ಬಾದಾಮಿ-5-6‌ (ತುರಿದ ಬಾದಾಮಿ)
  • ನೀರು-3 1/2 ಕಪ್

ಇದನ್ನೂ ಓದಿ:Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಮಾಡುವ ವಿಧಾನ:

ಒಂದು ಬಾಣಲೆಯಲ್ಲಿ ನೀರು, ಸಕ್ಕರೆ ಹಾಕಿ ಕುದಿಸಬೇಕು ನಂತರ ಕೇಸರಿಯ ಎಳೆಗಳನ್ನು ಹಾಕಿ ಕುದಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಬಣ್ಣ ಬಿಡುತ್ತದೆ. ನಂತರದಲ್ಲಿ ಅದನ್ನು ಬದಿಗಿಟ್ಟುಕೊಳ್ಳಬೇಕು. ಮತ್ತೊಂದು ಬಣಾಲೆಯಲ್ಲಿ ತುಪ್ಪವನ್ನು ಹಾಕಬೇಕು ಅದು ಕರುಗುತ್ತಿದ್ದ ಹಾಗೆ ಗೋಧಿ ಹಿಟ್ಟು ಹಾಕಿ ಕಲಸಿ ಎರಡು ನಿಮಿಷಗಳ ಕಾಲ ಬೇಯಲು ಬಿಡಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿದ ಗೋಡಂಬಿ ಹಾಕಬೇಕು. ಗೋಡಂಬಿಯ ಬಣ್ಣ ಬದಲಾಗುತ್ತಿದ್ದಂತೆ ಮಾಡಿಟ್ಟುಕೊಂಡಿರುವ ಸಕ್ಕರೆಯ ಪಾಕವನ್ನು ಹಾಕಿ ಸೌಟನ್ನು ಆಡಿಸುತ್ತಾ ಇರಬೇಕು. ದಪ್ಪ ಹದ ಬಂದಾಗ ಚಿಟಿಕೆಯಷ್ಟು ಎಲಕ್ಕಿ ಪುಡಿ ತುರಿದ ಬಾದಾಮಿಯನ್ನು ಹಾಕಿಕೊಂಡು ಬಿಸಿಬಿಸಿ ಯಾಗಿ ಸವಿದರೆ ಇನ್ನು ರುಚಿಕರವಾಗಿರುತ್ತದೆ.

Sweet lovers will like “Seven Cup” sweet

Comments are closed.