ಕೇರಳ:(kerala bus accident) ಕೆಎಸ್ಆರ್ಟಿಸಿ ಬಸ್ಗೆ ಶಾಲಾ ವಾಹನ ಢಿಕ್ಕಿಯಾಗಿ ಒಂಬತ್ತು ವಿದ್ಯಾರ್ಥಿಗಳು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ನ ವಡಕ್ಕೆಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ.
ವಿದ್ಯಾರ್ಥಿಗಳಿರುವ ಖಾಸಗಿ ಬಸ್ಸು ಕಾರನ್ನು ಹಿಂದಿಕ್ಕಲು ಯತ್ನಿಸಿದಾಗ ಕೆಎಸ್ಆರ್ಟಿಸಿ ಬಸ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಈ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನು ಕೆಎಸ್ಆರ್ಟಿಸಿ ಬಸ್ ನಲ್ಲಿ 81 ಪ್ರಯಾಣಿಕರಿದ್ದರು ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ .ಮಧ್ಯರಾತ್ರಿಯ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:Mangaluru Dussehra:ಮಂಗಳೂರು ದಸರಾ ಮಹೋತ್ಸವ ಸಂಪನ್ನ: ಶಾರದಾ ಮಾತೆಗೆ ಅದ್ಧೂರಿ ವಿದಾಯ
ಖಾಸಗಿ ಬಸ್ ನ ಅತಿವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎರಡು ಬಸ್ ಗಳಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಪಾಲಕ್ಕಾಡ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಇನ್ನು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:Kiccha Sudeep : “ಹೊಂಬಾಳೆ ಫಿಲ್ಮ್ಸ್” ನಿರ್ಮಾಣದಲ್ಲಿ ಸುದೀಪ್ ಸಿನಿಮಾ: ಕಾರ್ತೀಕ್ ಕೊಟ್ರು ಕ್ಲೂ
ಇದನ್ನೂ ಓದಿ:Sweet recipes:ಸಿಹಿ ಪ್ರಿಯರಿಗೆ ಇಷ್ಟವಾಗುತ್ತೆ “ಸವೆನ್ ಕಪ್ ” ಸ್ವೀಟ್
ಅಪಘಾತಕ್ಕೀಡಾದ ಖಾಸಗಿ ಬಸ್ ನಲ್ಲಿ ಮಾರ್ ಬಸೆಲಿಯೋಸ್ ವಿದ್ಯಾನಿಕೇತನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮಿಳುನಾಡಿನ ಊಟಿಗೆ ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದರು.ಇನ್ನು ಕೆಎಸ್ ಆರ್ ಟಿಸಿ ಬಸ್ ಅದೇ ಮಾರ್ಗದಲ್ಲಿ ಕೊಯಮತ್ತೂರಿನಿಂದ ಕೊಟ್ಟಾರಕ್ಕೆ ತೆರಳುತ್ತಿತ್ತು.ಈ ವೇಳೆಯಲ್ಲಿ ದುರಂತರ ಸಂಭವಿಸಿದೆ.
ಕಂದಾಯ ಸಚಿವರಾದ ಎಂ.ಬಿ ರಾಜೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಿಗೆ ಸರಕಾರದ ವತಿಯಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
kerala bus accident: KSRTC and School tourist bus accident: 9 dead, 35 passengers injured