Railway recruitment 2022 : 10ನೇ ತರಗತಿ, ITI ಓದಿದವರಿಗೆ ಸುವರ್ಣಾವಕಾಶ : ದಕ್ಷಿಣ ರೈಲ್ವೆ ಇಲಾಖೆಯಲ್ಲಿ 1343 ಅಪ್ರೆಂಟಿಸ್‌ ಹುದ್ದೆಗಳಿಗೆ ನೇರ ನೇಮಕಾತಿ

(Railway recruitment 2022)ಎಸ್ಎಸ್ಎಲ್ ಸಿ ಹಾಗೂ ಐಟಿಐ ವಿದ್ಯಾಭ್ಯಾಸ ಪಡೆದವರು ಉದ್ಯೋಗಾವಕಾಶವನ್ನು ಹುಡುತ್ತಿದ್ರೆ, ರೈಲ್ವೆ ಇಲಾಖೆ ನಿಮಗೆ ಸುರ್ವಣಾವಕಾಶವನ್ನು ಒದಗಿಸುತ್ತಿದೆ. ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ದಕ್ಷಿಣ ರೈಲ್ವೆ ಇಲಾಖೆಯು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ದಕ್ಷಿಣ ರೈಲ್ವೆಯ ಅಧಿಕೃತ ವೆಬ್‌ ಸೈಟ್‌ ಆದ sr.indianrailways.gov.in ಮೂಲಕ ಆನ್‌ಲೈನ್‌ಗಳಲ್ಲಿ ಅರ್ಜಿಸಲ್ಲಿಸಬಹುದಾಗಿದೆ. ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅಕ್ಟೋಬರ್‌ 31, 2022 ಕೊನೆಯ ದಿನಾಂಕವಾಗಿದೆ. ಈ ನೇಮಕಾತಿಯ ಡ್ರೈವ್‌ ಸಂಸ್ಥೆಯು ಒಟ್ಟು 1343 ಹುದ್ದೆಗಳನ್ನು ಹೆಚ್ಚಿಸಿದೆ.

(Railway recruitment 2022)ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗುವ ಮೆರಿಟ್‌ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿಯೇ ನಾಮನಿರ್ದೇಶನಗೊಂಡ ಸಮಿತಿಯು ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುತ್ತದೆ. 10ನೇ ತರಗತಿ, 12ತರಗತಿ ಹಾಗೂ ಐಟಿಐ ಕೋರ್ಸ್‌ಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್‌ ಪಟ್ಟಿಯನ್ನು ಪರಿಗಣಿಸಲಾಗುತ್ತದೆ.

ನೇಮಕಾತಿಗೆ ಖಾಲಿರುವ ಹುದ್ದೆಗಳು :

ಫ್ರೆಶರ್ಸ್‌ : 110 ಹುದ್ದೆಗಳು

ಎಕ್ಸ್‌ ಐಟಿಐ ವರ್ಗ : 1233 ಹುದ್ದೆಗಳು

ನೇಮಕಾತಿಗೆ ಬೇಕಾಗುವ ವಯೋಮಿತಿ:
ಹೊಸ ಅಭ್ಯರ್ಥಿಗಳಿಗೆ 15 ವರ್ಷಗಳು ತುಂಬಿರಬೇಕು. ಎಕ್ಸ್‌ – ಐಟಿಐ, ಎಂಎಲ್‌ಟಿಗೆ ಹುದ್ದೆಗೆ 22 ಹಾಗೂ 24 ವರ್ಷದೊಳಗಿನವರಿಗೆ ಅವಕಾಶವಿರುತ್ತದೆ. ಇನ್ನೂ ವರ್ಷ ಸಡಿಲಿಕೆಯಲ್ಲಿ OBC ಅಭ್ಯರ್ಥಿಗಳಿಗಾಗಿ 3 ವರ್ಷ, SC/ST ಅಭ್ಯರ್ಥಿಗಳಿಗಾಗಿ 5 ವರ್ಷ ಹಾಗೂ ಬೆಂಚ್‌ಮಾರ್ಕ್‌, ಅಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷದವರೆಗೆ ಸಡಿಲಿಕೆಯನ್ನು ಮಾಡಬಹುದಾಗಿದೆ.

ನೇಮಕಾತಿಗೆ ಬೇಕಾಗುವ ಶಿಕ್ಷಣ ಅರ್ಹತೆ :
ಫಿಟ್ಟರ್‌, ಪೇಂಟರ್‌ ಮತ್ತು ವೆಲ್ಡರ್‌ ಹುದ್ದೆಗೆ :- 10ನೇ ತರಗತಿ(ಕನಿಷ್ಠ ೫೦% ಒಟ್ಟು ಅಂಕಗಳೊಂದಿಗೆ)ಉತ್ತೀರ್ಣರಾಗಿರಬೇಕು. 12ನೇ ತರಗತಿ ಅಥವಾ ಅದರ ಸಮಾನತೆಯ ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತೀರ್ಣರಾಗಿರಬೇಕು.

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ (ರೇಡಿಯಾಲಜಿ, ಪೆಥಾಲಜಿ, ಕಾರ್ಡಿಯಾಲಜಿ)ಹುದ್ದೆ :
12ನೇ ತರಗತಿಯಲ್ಲಿ (ಕನಿಷ್ಠ ೫೦% ಒಟ್ಟು ಅಂಕಗಳೊಂದಿಗೆ) ಉತ್ತೀರ್ಣರಾಗಿರಬೇಕು, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಕ್ಕೆ ಸಂಬಂದಪಟ್ಟಂತೆ 12ನೇ ತರಗತಿ ಶಿಕ್ಷಣ ವ್ಯವಸ್ಥೆಯನ್ನು ಪಡೆದುಕೊಂಡಿರಬೇಕು.

ಫಿಟ್ಟರ್‌, ಮೆಷಿನಿಸ್ಟ್‌, ಎಮ್‌ಎಮ್‌ವಿ, ಟರ್ನರ್‌, ಡೀಸೆಲ್‌ ಮೆಕ್ಯಾನಿಕ್‌, ಕಾರ್ಪೆಂಟರ್‌, ಪೇಂಟರ್‌, ಟ್ರಿಮ್ಮರ್‌, ವೆಲ್ಢರ್(G&E), ವೈರ್‌ಮ್ಯಾನ್‌, ಅಡ್ವಾನ್ಸ್‌ ವೆಲ್ಡರ್‌ ಮತ್ತು R&AC ಹುದ್ದೆಗೆ :- 12ನೇ ತರಗತಿಯಲ್ಲಿ (ಕನಿಷ್ಠ50% ಒಟ್ಟು ಅಂಕಗಳೊಂದಿಗೆ) ಉತ್ತೀರ್ಣರಾಗಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಮತ್ತು ಜೀವಶಾಸ್ತ್ರದಲ್ಲಿ ವಿಷಯಕ್ಕೆ ಸಂಬಂಧಪಟ್ಟಂತೆ ಶಿಕ್ಷಣವನ್ನು ಪಡೆದಿರಬೇಕು.

ಎಲೆಕ್ಟ್ರಿಷಿಯನ್ ಹುದ್ದೆಗೆ :- 10 ನೇ ತರಗತಿ (ಕನಿಷ್ಠ 50% ಒಟ್ಟು ಅಂಕಗಳೊಂದಿಗೆ) ಅಥವಾ 12ನೇ ತರಗತಿಯಲ್ಲಿ ವಿಜ್ಞಾನವನ್ನು ಒಂದು ವಿಷಯವಾಗಿ ಅಥವಾ ಅದರ ಸಮಾನವಾಗಿರುವ ಮತ್ತು ಸರ್ಕಾರಿ ಮಾನ್ಯತೆ ಪಡೆದ ITI ಸಂಸ್ಥೆಯಲ್ಲಿ ITI ಕೋರ್ಸ್‌ನ್ನು ಮಾಡಿರಬೇಕು.

ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹುದ್ದೆಗೆ :- 10 ನೇ ತರಗತಿ (ಕನಿಷ್ಠ 50% ಒಟ್ಟು ಅಂಕಗಳೊಂದಿಗೆ) ಅಥವಾ 12ನೇ ತರಗತಿಯಲ್ಲಿ ವಿಜ್ಞಾನ (ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ) ಮತ್ತು ಗಣಿತ ಅಥವಾ ಅದರ ಸಮಾನ ಮತ್ತು ಸರ್ಕಾರಿ ಮಾನ್ಯತೆ ಪಡೆದ ಐಟಿಐನಲ್ಲಿ ಐಟಿಐ ಕೋರ್ಸ್‌ನ್ನು ಮುಗಿಸಿ ಇರಬೇಕು.

PASAA ಹುದ್ದೆಗೆ :- 10 ನೇ ತರಗತಿ (ಕನಿಷ್ಠ 50% ಒಟ್ಟು ಅಂಕಗಳೊಂದಿಗೆ) 12ನೇ ತರಗತಿ ಶಿಕ್ಷಣಯಲ್ಲಿ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್‌ನಲ್ಲಿ ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ ನೀಡಿದ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಪಡೆದಿರಬೇಕು.

ನೇಮಕಾತಿಯ ಅರ್ಜಿ ಶುಲ್ಕ :
SC/ST/PWBD ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೊರೆತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ಇದನ್ನೂ ಓದಿ : kerala bus accident:ಕೇರಳದಲ್ಲಿ ಭೀಕರ ರಸ್ತೆ ಅಪಘಾತ : ಒಂಬತ್ತು ವಿದ್ಯಾರ್ಥಿಗಳ ದುರ್ಮರಣ

ಇದನ್ನೂ ಓದಿ : Minister Prabhu Chavan:‘ಜಾಮೀನಿನ ಮೇಲೆ ಹೊರಗಿರುವವರಿಂದ ಎಂತಹ ಭಾರತ್​ ಜೋಡೋ ನಿರೀಕ್ಷಿಸಬಹುದು’ : ಸಚಿವ ಪ್ರಭು ಚವ್ಹಾಣ್​ ವ್ಯಂಗ್ಯ

ಸಂಬಳದ ವಿವರ :
10ನೇ ತರಗತಿಯ ನಂತರ ಅರ್ಜಿ ಸಲ್ಲಿಸುವ ಅಭ್ಯರ್ಥಗಳು ರೂ.6000 ವೇತನಕ್ಕೆ ಅರ್ಹರಾಗಿರುತ್ತಾರೆ. 12ನೇ ತರಗತಿ ನಂತರ ಉದ್ಯೋಗವನ್ನು ಆಯ್ಕೆ ಮಾಡುವವರು ಮತ್ತು ಮಾಜಿ ITI ಅಭ್ಯರ್ಥಗಳು ರೂ.7000ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

Direct Recruitment for 1343 Apprentice Posts in Southern Railway Department

Comments are closed.