ಕಾಡು ಮನುಷ್ಯ ಮತ್ತು ದೈವದ ಬಂಧವನ್ನು ಬಿಚ್ಚಿಡುವ ಕಾಂತಾರ (Kantara Movie)ಸಿನಿಮಾ ತೆರೆಕಂಡು ಒಂದೇ ವಾರದಲ್ಲಿ ಬರೋಬ್ಬರಿ 50 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಸದ್ದು ಮಾಡ್ತಿರೋ ಈ ಸಿನಿಮಾ ಅಡ್ಡಾದಿಂದ ಈಗ ಸಿಹಿಸುದ್ದಿಯೊಂದು ಹೊರಬಿದ್ದಿದೆ.
ಹೌದು ಕೆಜಿಎಫ್-2 ಸಿನಿಮಾದ ನಂತರ ಸದ್ಯ ಸಖತ್ ಸದ್ದು ಮಾಡ್ತಿರೋ ಸಿನಿಮಾ ಕಾಂತಾರ. ರಿಲೀಸ್ ಆಗಿರೋ ಒಂದೇ ವಾರಕ್ಕೆ ಕಾಂತಾರ (Kanthara Movie)ಸಖತ್ ಸದ್ದು ಮಾಡ್ತಿದ್ದು ಈಗ ಹಿಂದಿಗೆ ಡಬ್ಬಿಂಗ್ ಆಗಿ ಬಾಲಿವುಡ್ ನಲ್ಲೂ ಮಿಂಚಲು ಸಿದ್ಧವಾಗುತ್ತಿದೆ. ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿರೋ ಕಾಂತಾರ ಸಿನಿಮಾವನ್ನು ಬೇರೆ ಭಾಷೆಗೆ ಡಬ್ ಮಾಡಲು ಬೇಡಿಕೆ ಹೆಚ್ಚಿದೆ. ಈಗ ಈ ಬೇಡಿಕೆಗೆ ಹೊಂಬಾಳೆ ಫಿಲ್ಮ್ಸ್ ಗ್ರೀನ್ ಸಿಗ್ನಲ್ ನೀಡಿದೆ.
ಹೀಗಾಗಿ ಕಾಂತಾರ ಸಿನಿಮಾ ಹಿಂದಿಗೆ ಡಬ್ ಆಗಿದೆ. ಈಗಾಗಲೇ ಕಾಂತಾರ ಸಿನಿಮಾದ ಹಿಂದಿ ಟ್ರೈಲರ್ ಬಿಡುಗಡೆಗೆ ಸಿದ್ಧವಾಗಿದೆ. ಈ ಬಗ್ಗೆ ಕಾಂತಾರ ಸಿನಿಮಾದ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಪೋಸ್ಟ್ ಮಾಡಿದ್ದು ಅಪ್ಡೇಟ್ ಮಾಹಿತಿ ನೀಡಿದ್ದಾರೆ. ಕಾಂತಾರ ಚಿತ್ರದ ಹಿಂದಿ ಟ್ರೇಲರ್ ಇದೇ ಬರುವ ಅಕ್ಟೋಬರ್ 9 ರಂದು ಬೆಳಗ್ಗೆ 9.10 ಕ್ಕೆ ಬಿಡುಗಡೆಗೊಳ್ಳಲಿದೆ. ಇನ್ನು ಹಿಂದಿ ಕಾಂತಾರ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬ ಮಾಹಿತಿಯೂ ಟ್ರೇಲರ್ ನಲ್ಲೇ ಅಪ್ಡೇಟ್ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
Get ready to be enchanted by the divinity. Witness and feel the power of the divine. #Kantara Hindi Trailer to be launched on Oct 9th at 9:10 AM.@shetty_rishab @VKiragandur @hombalefilms @AAFilmsIndia @HombaleGroup @actorkishore @KantaraFilm @crbobbymusic #abbsstudio pic.twitter.com/izflI0VNdd
— B AJANEESH LOKNATH (@AJANEESHB) October 6, 2022
ಇದನ್ನೂ ಓದಿ : Taali Sushmita sen:ಮಂಗಳಮುಖಿ ಪಾತ್ರದಲ್ಲಿ ವಿಶ್ವ ಸುಂದರಿ ಸುಶ್ಮಿತಾ ಸೆನ್ : ತಾಲಿ ಸೀರಿಸ್ ಫಸ್ಟ್ ಲುಕ್ ಬಿಡುಗಡೆ
ಇದನ್ನೂ ಓದಿ : Dhruva Sarja : ಧ್ರುವ ಸರ್ಜಾ ಹುಟ್ಟು ಹಬ್ಬದ ಸಂಭ್ರಮಾರಣೆ : ಈ ವರ್ಷ ಅಭಿಮಾನಿಗಳ ಜೊತೆ ನೋ ಸೆಲೆಬ್ರೆಷನ್
ಇನ್ನು ಕೇವಲ ಹಿಂದಿ ಮಾತ್ರವಲ್ಲ ತಮಿಳು ತೆಲುಗಿನಲ್ಲೂ ಕಾಂತಾರ ಸಿನಿಮಾ ರಿಲೀಸ್ ಗೆ ಸಿದ್ಧವಾಗುತ್ತಿದೆ. ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸ್ವರೂಪ ಪಡೆದುಕೊಂಡಿದ್ದು, ದೇಶದ ಎಲ್ಲಾ ಭಾಷೆಗಳಲ್ಲೂ ಸಿನಿಪ್ರಿಯಯರ ಮನಗೆಲ್ಲಲು ಸಿದ್ಧವಾಗುತ್ತಿದೆ. ರಾಜ್ಯದಲ್ಲಿ ದಸರಾ ರಜೆ ವೇಳೆಗೆ ರಿಲೀಸ್ ಆದ ಬಹುನೀರಿಕ್ಷಿತ ಸಿನಿಮಾ ಕಾಂತಾರ ಕರಾವಳಿಯ ಪ್ರಮುಖ ಆರಾಧನಾ ಶಕ್ತಿಯಾಗಿರುವ ಭೂತಕೋಲ, ಪರಿಸರ ಮತ್ತು ಜನರ ನಡುವಿನ ಸಂಘರ್ಷವನ್ನು ಎಳೆ ಎಳೆಯಾಗಿ ಚಿತ್ರರೂಪದಲ್ಲಿ ತೆರೆದಿಟ್ಟು ಸಿನಿಪ್ರೇಕ್ಷಕರ ಗಮನವನ್ನು ಸೆಳೆದಿದೆ. ನಿರ್ದೇಶಕರಾಗಿ, ನಟರಾಗಿ ರಿಶಬ್ ಶೆಟ್ಟಿ ಗೆದ್ದಿದ್ದು, ಚಿತ್ರದ ಪಾತ್ರವರ್ಗ,ಕಥಾನಕ,ಸಂಭಾಷಣೆ ಸೇರಿದಂತೆ ಎಲ್ಲ ವಿಚಾರದಲ್ಲೂ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದ್ಯ ಈ ಸಿನಿಮಾ ಬಿ ಟೌನ್ ಗೆ ಲಗ್ಗೆ ಇಡ್ತಿದ್ದು, ಜನರಿಗೆ ಮತ್ತಷ್ಟು ಖುಷಿ ತಂದಿದೆ.
Kantara Movie dubbed in Hindi: Kantara movie Hindi trailer released soon.