BBMP : ದಸರಾ ಎಫೆಕ್ಟ್ ಎಲ್ಲೆಂದರಲ್ಲಿ ಕಸ: ತ್ಯಾಜ್ಯ ನಿರ್ವಹಣೆಯಲ್ಲಿ ಸೋತ ಬಿಬಿಎಂಪಿ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಜನರು ಶೃದ್ಧಾ ಭಕ್ತಿಯಿಂದ ದಸರಾ ಆಚರಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾತ್ರ ದಸರಾ ಆಚರಣೆ ಬಿಬಿಎಂಪಿ (BBMP Dasara effect Garbage ) ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಈ ಮೊದಲೇ ಕಸದ ಸಮಸ್ಯೆ ನಿರ್ವಹಿಸಲು ಸಾಧ್ಯವಾಗದೇ ಪರದಾಡ್ತಿರೋ ಬಿಬಿಎಂಪಿ ಗೆ ದಸರಾದಿಂದ ಬರೋಬ್ಬರಿ 500 ಟನ್ ಹೆಚ್ಚುವರಿ ಕಸದ ಸಮಸ್ಯೆ ಕಾಡ್ತಿದ್ದು, ನಗರ ಸ್ವಚ್ಛಗೊಳಿಸಲಾಗದೇ ನಗರಾಡಳಿತ ಪರದಾಡುತ್ತಿದೆ.

ಕಳೆದ ಎರಡು ವರ್ಷಗಳಿಂದ ಜನಜೀವನ ಕೊರೋ‌ನಾದಿಂದ ಅಸ್ತವ್ಯಸ್ತಗೊಂಡಿತ್ತು, ಹಬ್ಬ ಹರಿದಿನಗಳನ್ನು ಆಚರಿಸಲಾಗದೇ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಹೀಗಾಗಿ ಈ ವರ್ಷ ಜನರು ಎಲ್ಲ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ. ಹೀಗಾಗಿ ದಸರಾ ಹಬ್ಬಕ್ಕೂ ಮುನ್ನ ನಗರದ ಹಾಗೂ ರಾಜ್ಯದ ಎಲ್ಲ ಮಾರುಕಟ್ಟೆಗಳು ತುಂಬಿ ತುಳುಕಿದ್ದವು. ಅದರಲ್ಲೂ ಬೆಂಗಳೂರಿನ ಕೆ.ಅರ್.ಮಾರುಕಟ್ಟೆ, ಮಲ್ಲೇಶ್ವರಂ ಮಾರ್ಕೆಟ್, ಯಶ್ವಂತಪುರ ಮಾರ್ಕೆಟ್ ಹೀಗೆ ಎಲ್ಲ ಮಾರುಕಟ್ಟೆಗಳಲ್ಲೂ ಜನರು ಭರ್ಜರಿ ಖರೀದಿ ಮಾಡಿದ್ದರು.

ವಿಶೇಷವಾಗಿ ದಸರಾ ಹಬ್ಬದಲ್ಲಿ ಆಯುಧ ಪೂಜೆ ನಡೆಯುದರಿಂದ ನಗರದ ಅಂಗಡಿ ಮುಂಗಟ್ಟುಗಳು, ಕಾರ್ಖಾನೆ, ಬಟ್ಟೆ ಅಂಗಡಿ,ಹೊಟೇಲ್ ಸೇರಿದಂತೆ ಎಲ್ಲೆಡೆ ಪೂಜೆಯ ಸಂಭ್ರಮವೂ ಮನೆ ಮಾಡಿತ್ತು. ಇದಲ್ಲದೇ ವಾಹನ ಪೂಜೆಯೂ ನಡೆಯುದರಿಂದ ಹೂವು ಅಲಂಕಾರಿಕ ವಸ್ತು ಹಾಗೂ ಹಣ್ಣುಗಳ ಮಾರಾಟವೂ ಜೋರಾಗಿತ್ತು. ಎಲ್ಲದರ ಫಲವಾಗಿ ಬೆಂಗಳೂರು ನಗರದಾದ್ಯಂತ ಅಂದಾಜು 500 ಟನ್ ಹೆಚ್ಚುವರಿ ಕಸ ಸಂಗ್ರಹವಾಗಿದೆ. ಮಾರುಕಟ್ಟೆ, ಜನವಸತಿ ಪ್ರದೇಶಗಳು ಸೇರಿದಂತೆ ಎಲ್ಲೆಡೆ ಅಪಾರ ಪ್ರಮಾಣದ ಕಸ ಸಂಗ್ರಹವಾಗಿದೆ.

ಬುಧವಾರ ಒಂದೇ ದಿನ ಬೆಂಗಳೂರು ನಗರದಲ್ಲಿ ಬರೋಬ್ಬರಿ 200 ಟನ್ ಕಸ ಉತ್ಪತ್ತಿಯಾಗಿದ್ದು ವಿಲೇವಾರಿಯಾಗದೇ ಅಲ್ಲೇ ಬಿದ್ದಿದೆ. ಇದರಿಂದ ಗುರುವಾರ ನಗರದಾದ್ಯಂತ ಜನರು ಮುಖ ಮುಚ್ಚಿಕೊಂಡು ಓಡಾಡುವ ಸ್ಥಿತಿ ಎದುರಾಗಿತ್ತು. ಕೆ.ಆರ್.ಮಾರ್ಕೆಟ್ ಬಳಿ ಅಂತೂ ಜನರು ಓಡಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ವ್ಯಾಪಾರಿಗಳು ಮಾತ್ರ ಮೂಗು‌ಮುಚ್ಚಿಕೊಂಡು ವ್ಯಾಪಾರದಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಬುಧವಾರ ಹಬ್ಬ ಇರುವುದರಿಂದ ಬಹುತೇಕ ಪೌರ ಕಾರ್ಮಿಕರು ಕೂಡ ರಜೆ ಪಡೆದಿದ್ದರು. ಹೀಗಾಗಿ ಸಮರ್ಪಕವಾಗಿ ಕಸದ ನಿರ್ವಹಣೆಯೂ ಆಗಿಲ್ಲ. ಫಲವಾಗಿ ನಗರದಲ್ಲಿ ಕಸದ ಸಮಸ್ಯೆ ಉಲ್ಬಣಿಸಿದೆ.

ಇದನ್ನೂ ಓದಿ : Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌

ಇದನ್ನೂ ಓದಿ : Bharat Jodo Yatra : ಮರಿ ಆನೆಗಾಗಿ ಮಿಡಿದ ರಾಹುಲ್ ಗಾಂಧಿ: ಚಿಕಿತ್ಸೆ ಕೊಡಿಸುವಂತೆ ಸಿಎಂ ಗೆ ಪತ್ರ

ಇದನ್ನೂ ಓದಿ : Assembly Election 2022 : ಕಾಂಗ್ರೆಸ್ ಎದುರಿಸೋದ್ರಲ್ಲಿ ಎಡವಿದ್ಯಾ ಸರ್ಕಾರ: ಕಾರ್ಯಕಾರಿಣಿ ಯಲ್ಲಿ ಮಹತ್ವದ ಚರ್ಚೆ‌

ಹಬ್ಬದ ವೇಳೆ ಸಹಜವಾಗಿಯೇ ಕಸದ ಸಮಸ್ಯೆ ಜಾಸ್ತಿ. ಆದರೆ ಇದನ್ನು ಸೂಕ್ತವಾಗಿ ನಿರ್ವಹಿಸಬೇಕಾದ ಅಧಿಕಾರಿಗಳು ಮಾತ್ರ ಪ್ರತಿಭಾರಿಯಂತೆ ಈ ಸಲವೂ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ. ಇದರಿಂದಾಗಿ ನಗರದಲ್ಲಿ ಕಸದ ಸಮಸ್ಯೆ ಉಲ್ಬಣಿಸಿದ್ದು, ಬಿಬಿಎಂಪಿ ಇದಕ್ಕೆ ಯಾವ ರೀತಿ ಸ್ಪಂದಿಸುತ್ತೆ ಕಾದು ನೋಡಬೇಕಿದೆ.

Dasara effect Garbage everywhere: BBMP fails in waste management

Comments are closed.