ಬುಧವಾರ, ಏಪ್ರಿಲ್ 30, 2025
HomekarnatakaViral Fever : ದಕ್ಷಿಣ ಕನ್ನಡದಲ್ಲಿ ನಿಗೂಢ ಜ್ವರ, ಆರೋಗ್ಯ ಇಲಾಖೆಯಿಂದ ಹೆಲ್ತ್ ಸರ್ವೆ

Viral Fever : ದಕ್ಷಿಣ ಕನ್ನಡದಲ್ಲಿ ನಿಗೂಢ ಜ್ವರ, ಆರೋಗ್ಯ ಇಲಾಖೆಯಿಂದ ಹೆಲ್ತ್ ಸರ್ವೆ

- Advertisement -

ಮಂಗಳೂರು : ( Viral Fever ) ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಬಾರಿಯ ಮಳೆಯ ಆರ್ಭಟ ಜೋರಾಗಿದೆ. ಮಳೆ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ. ಜ್ವರದ ಪ್ರಕರಣ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಸರ್ವೆ ಕಾರ್ಯ ನಡೆಸಲು ಮುಂದಾಗಿದೆ.

ಮಳೆಗಾಲದಲ್ಲಿ ವರ್ಷಂಪ್ರತಿ ಆರೋಗ್ಯ ಇಲಾಖೆ ಹೆಲ್ತ್‌ ಸರ್ವೆ ಮಾಡುತ್ತಿದೆ . ಆದರೆ ಈ ಬಾರಿ ಬೇಕಾಬಿಟ್ಟಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹರಡುತ್ತಿರುವ ಜ್ವರದ ಪ್ರಮಾಣ ಹೆಚ್ಚಾಗುತ್ತಿದೆ. ಡೆಂಗ್ಯು, ಮಲೇರಿಯಾ, ಕೊರೊನಾ ಭೀತಿಯ ನಡುವಲ್ಲೇ ಜ್ವರದ ಮೂಲವನ್ನು ಹುಡುಕಲು ಆರೋಗ್ಯ ಇಲಾಖೆ ಮುಂದಾಗಿದೆ. ಹೀಗಾಗಿ ಒಂದು ವಾರಗಳ ಕಾಲ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂಡಗಳನ್ನು ರಚಿಸಿಕೊಂಡು ವೈರಲ್ ಫೀವರ್( Viral Fever ) ಹೆಲ್ತ್ ಸರ್ವೆ ಕಾರ್ಯ ನಡೆಸಲು ಸಜ್ಜಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕಿನ ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರದ ತಂಡಗಳೇ ಈ ಸರ್ವೆಗೆ ಮುಂದಾಗಿದ್ದು, ಮುಖ್ಯವಾಗಿ ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆಯ ಆರೋಗ್ಯ ಸುರಕ್ಷತಾ ಅಧಿಕಾರಿ ಸೇರಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳಿಗು ಬೇಟಿ ಕೊಟ್ಟು ಮನೆಯ ಪ್ರತೀ ಸದಸ್ಯರನ್ನು ತಪಾಸಣೆ ಮಾಡಿದ ನಂತರ , ಯಾವುದೇ ಮನೆ ಅಥವಾ ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡರೆ , ಅವರ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ಜಿಲ್ಲಾಮಟ್ಟದಲ್ಲಿರುವ ಅಧಿಕಾರಿಗಳಿಗೆ ತಲುಪಿಸಿ ನಂತರ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಜ್ವರದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಾರೆ.

ಇದನ್ನೂ ಓದಿ : Moto E32 : ಎಂಟ್ರಿ–ಲೆವೆಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….

ಇದನ್ನೂ ಓದಿ : FSSAI Recruitments : FSSAI ನಲ್ಲಿ ಉದ್ಯೋಗ ಅವಕಾಶ : ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ

ಜಿಲ್ಲೆಗಳಲ್ಲಿ ಹವಾಮಾನ ಏರಿಳಿತದಿಂದ ಹಲವರಿಗೆ ಜ್ವರ ಕಾಣಿಸಿಕೊಂಡಿದೆ.ಈಗಿನ ಹವಾಮಾನದಲ್ಲಿ ಜನರಿಗೆ ಶೀತ ,ಕೆಮ್ಮು,ಜ್ವರ, ರೋಗರುಜಿನಗಳು ಇರುವುದು ಸಹಜ . ಆದರೆ ಹವಾಮಾನ ವೈಪರಿತ್ಯದಿಂದ ಡೆಂಗ್ಯೂ, ಚಿಕನ್ ಗುನ್ಯ, ಮಲೇರಿಯಾ, ಕೊರೊನಾದಂತಹ ಕಾಯಿಲೆಗಳು ಹೆಚ್ಚಳವಾಗುವ ಕಾರಣದಿಂದ ಜನರ ಆರೋಗ್ಯದ ಕುರಿತು ಹೆಚ್ಚು ಗಮನಹರಿಸಬೇಕು ಎನ್ನುವ ಕಾರಣಕ್ಕೆ ಈ ಹೆಲ್ತ್‌ ಸರ್ವೆಯನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ.

ಇದನ್ನೂ ಓದಿ : Pro Kabaddi League : ಪ್ರೊ ಕಬಡ್ಡಿ ಲೀಗ್‌ನ ಮೊದಲ ದಿನ ಇರಾನ್ ಆಟಗಾರರು ಕಾಣಲಿಲ್ಲವೇಕೆ..? ಇಲ್ಲಿದೆ ಅಸಲಿ ಗುಟ್ಟು

ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ,ಹಬ್ಬ ಹರಿದಿನಗಳು ಹೆಚ್ಚಾಗಿ ಬರುತ್ತಿರುವ ಕಾರಣ ಜನರು ಹೆಚ್ಚಾಗಿ ಓಡಾಟ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಜ್ವರ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಲ್ತ್‌ ಸರ್ವೆ ಮಾಡುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ : Deepak Chahar Injured: ವಿಶ್ವಕಪ್ ಹೊಸ್ತಿಲಲ್ಲಿ ಭಾರತಕ್ಕೆ ಮತ್ತೊಂದು ಆಘಾತ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೀಪಕ್ ಚಹರ್ ಔಟ್

ಈ ಮೂಲಕ ಜನರಿಂದ ಜನರಿಗೆ ಹರಡುತ್ತಿರುವ ಜ್ವರದ ಪ್ರಕರಣಗಳು ಏರಿಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ತಂಡಗಳು ತೀವ್ರಗತಿಯಲ್ಲಿ ಕೆಲಸ ಮಾಡಿದರೆ ನಗರದ ಭಾಗಗಳಲ್ಲಿ ವಿಶೇಷ ಕಾರ್ಯಾಚರಣೆಯ ಮೂಲಕ ಹರಡುತ್ತಿರುವ ಜ್ವರದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

This time the rain is heavy in many districts of the state including the coast. A mysterious fever has appeared in Dakshina Kannada district just as the rains are decreasing

RELATED ARTICLES

Most Popular