Mukesh Ambani – Shiv Nadar : ಉದ್ಯಮದಲ್ಲಿ ಯಶಸ್ಸು ಕಂಡ ಮುಕೇಶ್‌ ಅಂಬಾನಿ, ಶಿವ ನಾಡರ್‌ ಪುತ್ರಿಯರು

ಮುಂಬೈ : (Mukesh Ambani – Shiv Nadar)ಅವರಿಬ್ಬರು ದೇಶದ ಶ್ರೀಮಂತ ಉದ್ಯಮಿಗಳು. ಒಬ್ಬರು ರಿಲಾಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೋರ್ವರು ಎಚ್‌ಸಿಎಲ್‌ ಗ್ರೂಪ್‌ ಸಂಸ್ಥಾಪಕ ಶಿವ ನಾಡಾರ್‌. ಆದ್ರೆ ಈ ಇಬ್ಬರೂ ಉದ್ಯಮಿಗಳು ಇದೀಗ ತಮ್ಮ ಉದ್ಯಮದ ಜವಾಬ್ದಾರಿಯನ್ನು ಪುತ್ರಿಯರಿಗೆ(Isha Ambani and Roshani Nadar) ಹಸ್ತಾಂತರಿಸಿದ್ದಾರೆ. ಅಷ್ಟೇ ಅಲ್ಲಾ ಇಬ್ಬರು ಉದ್ಯಮಿಗಳ ಪುತ್ರಿಯರು ಇದೀಗ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಲಾಭವನ್ನು ಕಂಡುಕೊಂಡಿದ್ದಾರೆ.

(Mukesh Ambani – Shiv Nadar)ಕೋಟ್ಯಾಧಿಪತಿಗಳ ಹೆಣ್ಣು ಮಕ್ಕಳಾದ(Isha Ambani) ಇಶಾ ಅಂಬಾನಿ ಹಾಗೂ ರೋಶನಿ ನಡಾರ್‌ (Roshani Nadar)ವ್ಯಾಪಾರದಲ್ಲಿ ಯಶಸ್ಸನ್ನು ಕಾಣುವುದರ ಮೂಲಕ ಉದ್ಯಮವನ್ನು ವಿಸ್ತರಿಸುತ್ತಿದ್ದಾರೆ. ಈ ಹೆಣ್ಣು ಮಕ್ಕಳು ತಮ್ಮ ತಂದೆಯ ಉದ್ಯಮದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಿಂದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಕಂಡುಕೊಂಡಿದ್ದಾರೆ.ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್)‌ ಅಧ್ಯಕ್ಷ ಮತ್ತು ವ್ಯವಸ್ಥಾಪಕದ ನಿರ್ದೇಶಕರಾದ ಮುಖೇಶ್‌ ಅಂಬಾನಿ ರಿಲಯನ್ಸ್‌ ರೀಟೇಲ್‌ನ ಜವಾಬ್ದಾರಿಯನ್ನು ತಮ್ಮ ಪುತ್ರಿ ಇಶಾ ಅಂಬಾನಿಗೆ ಹಸ್ತಾಂತರಿಸಿದ್ದಾರೆ. ಇಶಾ ಅಂಬಾನಿ (Isha Ambani)ಇವರದೇ ಸಂಸ್ಥೆಯಾದ ಇಶಾ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್‌ ಸ್ಕೂಲ್‌ನಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರು ಈ ಹಿಂದೆ ರಿಲಯನ್ಸ್‌ ಆರ್ಟ್ಸ್‌ ಫೌಂಡೇಶನ್‌ನ್ನು ಸ್ಥಾಪಿಸಿದ್ದರು. 2018ರಲ್ಲಿ ಇಶಾ ಅಂಬಾನಿ ಪಿರಾಮಲ್‌ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್‌ ಪಿರಾಮಲ್‌ ಅವರನ್ನು ವಿವಾಹವಾಗಿದ್ದಾರೆ.

ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ ನ ನಿರ್ದೇಶಕಿ ಇಶಾ ಅಂಬಾನಿ(Isha Ambani) ಈ ವರ್ಷ ಎಫ್‌ಎಂಸಿಜಿ ಉದ್ಯಮವನ್ನು ಪ್ರವೇಶಿಸಲಿದ್ದಾರೆ. ಇವರು ತಮ್ಮ ರಿಲಯನ್ಸ್‌ ರಿಟೇಲ್‌ ಸ್ಟೋರ್‌ಗಳನ್ನು 15000ಕ್ಕೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಕಳೆದ ಬಾರಿ 2500 ಹೊಸ ಮಳಿಗೆಗಳನ್ನು ತೆರೆದಿದ್ದಾರೆ.ಇದರ ಮೂಲಕ ಈ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಯಡಿಯಲ್ಲಿ 1,50,000 ಜನರಿಗೆ ಉದ್ಯೋಗ ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ರಿಲಯನ್ಸ್‌ ರಿಟೇಲ್‌ನ ಉದ್ಯೋಗಿಗಳ ಸಂಖ್ಯೆ 3,60,000ಕ್ಕೆ ಹೆಚ್ಚಾಗಿದೆ.

ಎಚ್‌ಸಿಎಲ್‌ ಗ್ರೂಪ್‌ ಸಂಸ್ಥಾಪಕ ಶಿವ ನಾಡಾರ್‌ ಪುತ್ರಿ ರೋಶ್ನಿ ನಾಡರ್‌(Roshani Nadar) ಮಲ್ಹೋತ್ರಾ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷರಾಗಿರುತ್ತಾರೆ. ರೋಶ್ನಿ ನಾಡರ್‌ (Roshani Nadar)ನಾರ್ತ್‌ ವೆಸ್ಟರ್ನ್‌ ಯೂನಿವರ್ಸಿಟಿಯಿಂದ ಕಮ್ಯುನಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ.ಹಾಗೆ ಕೆಲ್ಲಾಗ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪಡೆದಿದ್ದಾರೆ. ಇವರು ಎಚ್‌ಸಿಎಲ್‌ ಕಾರ್ಪೊರೇಶನ್‌ ಸಿಇಒ, ಶಿವ ನಾಡರ್‌ ಫೌಂಡೇಶನ್‌ನಲ್ಲಿ ಟ್ರಸ್ಟಿ ಮತ್ತು ದಿ ಹ್ಯಾಬಿಟೇಟ್ಸ್‌ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ಟ್ರಸ್ಟಿ ಕೂಡ ಆಗಿದ್ದಾರೆ. ರೋಶನಿ ನಾಡರ್‌ ಮಲ್ಹೋತ್ರಾ 84330 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಭಾರತದಲ್ಲೇ ಅತ್ಯಂತ ಶ್ರೀಮಂತ ಮಹಿಳೆ ಎನ್ನಿಸಿಕೊಂಡಿದ್ದಾರೆ.

ಇದನ್ನೂ ಓದಿ : Moto E32 : ಎಂಟ್ರಿ–ಲೆವೆಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….

ಇದನ್ನೂ ಓದಿ : CM Basavaraj Bommai : CM ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಅಂತರಾಷ್ಟ್ರೀಯ ಬಿಸಿನೆಸ್‌ ಅವಾರ್ಡ್‌

ಇದನ್ನೂ ಓದಿ : LPG Subsidy : ಎಲ್‌ಪಿಜಿ ಸಬ್ಸಿಡಿ, ಹೊಸ ನಿಯಮ ಪ್ರಕಟಿಸಿದ ಸರಕಾರ

ಭಾರತೀಯ ಬಿಲಿಯನೇರ್‌ಗಳ ಪುತ್ರಿಯರು ತಮ್ಮ ತಂದೆಯರ ಉದ್ಯಮಿಗಳ ಜವಾಬ್ದಾರಿಗಳನ್ನು ನೋಡಿಕೊಳ್ಳುವುದರ ಮೂಲಕ ವವ್ಯಹಾರವನ್ನು ಕೂಡ ವಿಸ್ತರಿಸುತ್ತಿದ್ದಾರೆ. ಹಾಗೆ ಭಾರತದಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿದ್ದಾರೆ.

Daughters of Mukesh Ambani and Shiv Nadar who are successful in the industry

Comments are closed.