ಮಂಗಳವಾರ, ಏಪ್ರಿಲ್ 29, 2025
HomeSportsCricketRishabh Pant Urvashi Rautela: "ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ.." ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ...

Rishabh Pant Urvashi Rautela: “ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ..” ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ ಊರ್ವಶಿ ರೌಟೇಲಾ..?

- Advertisement -

ಬೆಂಗಳೂರು: Rishabh Pant Urvashi Rautela : ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಹಾಗೂ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮಧ್ಯೆ ನಡೆದ ಕೋಳಿ ಜಗಳ ಗೊತ್ತೇ ಇದೆ. ಇಬ್ಬರ ಮಧ್ಯೆ ಸ್ನೇಹಕ್ಕೂ ಮೀರಿದ ಸಂಬಂಧವಿದ್ದದ್ದು, ನಂತರ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿಕೊಂಡದ್ದು, ಬಳಿಕ ಇಬ್ಬರ ಮಧ್ಯೆ ಮನಸ್ತಾಪ ಏರ್ಪಟ್ಟದ್ದು… ಎಲ್ಲವೂ ನಡೆದಿದೆ. ಆದರೆ ಇದೀಗ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ಊರ್ವಶಿ ರೌಟೇಲಾ ಹಾಕಿರುವ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ.

“ಹೃದಯವನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇನೆ. ಅದು ನನ್ನನ್ನು ಆಸ್ಟ್ರೇಲಿಯಾಗೆ ತೆರಳುವಂತೆ ಮಾಡಿದೆ” ಎಂದು ಇನ್’ಸ್ಟಾಗ್ರಾಂ, ಫೇಸ್’ಬುಕ್ ಪೋಸ್ಟ್ ಹಾಕಿರುವ ಊರ್ವಶಿ ರೌಟೇಲಾ ವಿಮಾನದಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸುತ್ತಿರುವ ಫೋಟೋವನ್ನೂ ಪ್ರಕಟಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ರಿಷಭ್ ಪಂತ್ ಸದ್ಯ ಆಸ್ಟ್ರೇಲಿಯಾದಲ್ಲಿ ದ್ದಾರೆ. ಇದೇ ವೇಳೆ ಊರ್ವಶಿ ರೌಟೇಲಾ ಕೂಡ ಆಸ್ಟ್ರೇಲಿಯಾಗೆ ತೆರಳಿರುವುದು ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. “ನನ್ನ ಹೃದಯವನ್ನು ಹಿಂಬಾಲಿಸಿಕೊಂಡು ಆಸ್ಟ್ರೇಲಿಯಾಗೆ ಹೋಗುತ್ತಿದ್ದೇನೆ” ಎಂಬುದಾಗಿ ಊರ್ವಶಿ ಬರೆದಿರುವುದು ರಿಷಭ್ ಪಂತ್ ಬಗ್ಗೆಯೇ ಎನ್ನಲಾಗ್ತಿದೆ.

ಅಕ್ಟೋಬರ್ 4ರಂದು ಊರ್ವಶಿ ರೌಟೇಲಾ, ರಿಷಭ್ ಪಂತ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದರು. ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿತ್ತು. ಇದಕ್ಕೆಲ್ಲಾ ನಾಂದಿ ಹಾಡಿದ್ದು ಇತ್ತೀಚೆಗೆ ನಟಿ ಊರ್ವಶಿ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಬಗ್ಗೆ ಆಡಿದ ಮಾತು.

“ನಾನು ಯಾವುದೋ ಶೂಟಿಂಗ್’ಗಾಗಿ ದೆಹಲಿಗೆ ಹೋಗಿದ್ದಾಗ ಹೋಟೆಲ್ ಒಂದರಲ್ಲಿ ತಂಗಿದ್ದೆ. ಆಗ ಅಲ್ಲಿಗೆ ಬಂದಿದ್ದ RP ನನ್ನನ್ನು ಭೇಟಿ ಮಾಡಲು ಹೋಟೆಲ್ ಲಾಬಿಯಲ್ಲಿ ಇಡೀ ರಾತ್ರಿ ಕಾದು ಕೂತಿದ್ದ. ಆದರೆ ನಾನು ಶೂಟಿಂಗ್’ನಲ್ಲಿ ಸುಸ್ತಾಗಿದ್ದ ಕಾರಣ ಅವನನ್ನು ಅಲ್ಲಿ ಭೇಟಿ ಮಾಡಲಿಲ್ಲ. ಬೆಳಗ್ಗೆ ಎದ್ದು ನೋಡಿದಾಗ ನನ್ನ ಫೋನ್’ನಲ್ಲಿ 16-17 ಮಿಸ್ ಕಾಲ್’ಗಳಿದ್ದವು. ನನಗೆ ತುಂಬಾ ಬೇಸರವಾಯಿತು. ನಂತರ ಆತನಿಗೆ ಕರೆ ಮಾಡಿ ಮುಂಬೈಗೆ ಬಂದಾಗ ನಿನ್ನನ್ನು ಭೇಟಿ ಮಾಡುವುದಾಗಿ ಆತನಿಗೆ ತಿಳಿಸಿದೆ” ಎಂದು ರಿಷಭ್ ಪಂತ್ (Rishabh Pant) ಅವರ ಹೆಸರನ್ನು ಹೇಳದೆ RP ಎಂದು ಸಂದರ್ಶನದಲ್ಲಿ ನಟಿ ಊರ್ವಶಿ ರೌಟೇಲಾ ಹೇಳಿದ್ದರು.

ನಟಿ ಊರ್ವಶಿ ಸಂದರ್ಶನದಲ್ಲಿ ಆಡಿದ ಮಾತು ವೈರಲ್ ಆಗ್ತಿದ್ದಂತೆ ರಿಷಭ್ ಪಂತ್ (Rishabh Pant) ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. “ಅಕ್ಕಾ, ನನ್ನ ಹಿಂದೆ ಯಾಕೆ ಸುತ್ತುತ್ತಿದ್ದೀಯಾ” ಎಂದು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ರಿಷಭ್ ಪಂತ್, ಕೆಲವೇ ಕ್ಷಣಗಳನ್ನು ಆ ಪೋಸ್ಟನ್ನು ಡಿಲೀಟ್ ಮಾಡಿದ್ದರು. ರಿಷಭ್ ಪಂತ್ (Rishabh Pant) ಪೋಸ್ಟ್ ಡಿಲೀಸ್ ಮಾಡ್ತಿದ್ದಂತೆ ಮತ್ತೆ ಊರ್ವಶಿ ರೌಟೇಲಾ ಇನ್’ಸ್ಟಾಗ್ರಾಂನಲ್ಲೇ RPಗೆ ತಿರುಗೇಟು ಕೊಟ್ಟಿದ್ದಾರೆ. “ಚೋಟು ಭಯ್ಯಾ ಬ್ಯಾಟ್ ಮತ್ತು ಬಾಲ್ ಮಾತ್ರ ಆಡಬೇಕು. ಚಿಕ್ಕ ಮಗುವಿನೊಂದಿಗೆ ಕುಖ್ಯಾತಿಯನ್ನು ಪಡೆಯಲು ನಾನು ಮುನ್ನಿಯಲ್ಲ. ಡಾರ್ಲಿಂಗ್, ನಿನಗೆ ರಕ್ಷಾಬಂಧನದ ಶುಭಾಶಯಗಳು RP ಚೋಟು ಭಯ್ಯಾ” ಎಂದು ಇನ್’ಸ್ಟಾಗ್ರಾಂನಲ್ಲಿ ನಟಿ ಊರ್ವಶಿ ರೌಟೇಲಾ ಬರೆದುಕೊಂಡಿದ್ದರು.

ಇದನ್ನೂ ಓದಿ : Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

ಇದನ್ನೂ ಓದಿ : Pawan Sehrawat Injured : ಪ್ರೊ ಕಬಡ್ಡಿ ಲೀಗ್: ಮಾಜಿ “ಗೂಳಿ” ಪವನ್ ಸೆಹ್ರಾವತ್‌ಗೆ “ಪ್ರಥಮ ಚುಂಬನಂ ದಂತಭಗ್ನಂ

Actress Urvashi Rautela went to Aussie for Rishabh Pant

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular