Gandhadagudi Trailer Release : ಪುನೀತ್ ರಾಜ್ ಕುಮಾರ್ “ಗಂಧದಗುಡಿ”ಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” ಸಿನಿಮಾದ ಟ್ರೈಲರ್‌ ರೀಲಿಸ್‌(Gandhadagudi Trailer Release) ಆಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಪ್ಪು ಅಭಿನಯದ “ಗಂಧದಗುಡಿ” ಟ್ರೈಲರ್‌ನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. ಗಂಧದ ಗುಡಿ ಟ್ರೈಲರ್‌ನ್ನು ನೋಡಿದ ದೇಶದ ಪ್ರಧಾನಿ ಮೋದಿಯವರು ಟ್ವೀಟ್‌ ಮೂಲಕ ಶುಭಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ಗಂಧದಗುಡಿ ಪ್ರಕೃತಿ ಮಾತೆಗೆ , ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು” ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ : Gandhadagudi Trailer Release : ಅಪ್ಪು ಅಭಿನಯದ ‘ಗಂಧದಗುಡಿ’ ಟ್ರೇಲರ್ ಗ್ರ್ಯಾಂಡ್‌ ರೀಲಿಸ್‌

ಇದನ್ನೂ ಓದಿ : Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಇದನ್ನೂ ಓದಿ : Rashmika Mandanna : ‘ಶೂಟಿಂಗ್​ ಸೆಟ್​ನಲ್ಲಿ ರಣಬೀರ್​ ಕಪೂರ್​ ನನ್ನನ್ನು ಅಳುವಂತೆ ಮಾಡಿದ್ದರು’ : ರಶ್ಮಿಕಾ ಮಂದಣ್ಣ

ಅಪ್ಪು ಇಂದು ನಮ್ಮ ಜೊತೆ ಇಲ್ಲದೇ ಇದ್ದರೂ ಅವರು ಮಾಡಿದ ಸಾಮಾಜಿಕ ಕಾರ್ಯ ಹಾಗೂ ಅವರ ಸಿನಿಮಾಗಳ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಗಂಧದಗುಡಿ ಚಿತ್ರದ ಟ್ರೈಲರ್‌ಗೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಾಗೆ ಈ ಸಿನಿಮಾದ ಫ್ರೀ ರೀಲಿಸ್‌ಗೆ ದೊಡ್ಮನೆ ಕುಟುಂಬ ಸಾಕಷ್ಟು ತಯಾರಿಯನ್ನು ನಡೆಸುತ್ತಿದೆ. ಈಗಾಗಲೇ ಫ್ರಿ ರೀಲಿಸ್‌ ಇವೆಂಟ್‌ಗೆ ವಿಭಿನ್ನ ರೀತಿ ಆಮಂತ್ರಣ ಪತ್ರವನ್ನು ಕೂಡ ರೆಡಿಯಾಗಿದೆ. ಇದೇ ಬರುವ ಅಕ್ಟೋಬರ್‌ 21ರಂದು ಅರಮನೆ ಮೈದಾನದಲ್ಲಿ ಇವೆಂಟ್‌ ನಡೆಯುದಾಗಿ ತಿಳಿಸಿದ್ದಾರೆ. ಹಾಗೆ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಸ್ಟಾರ್‌ಗಳನ್ನು ಆಮಂತ್ರಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಪುನೀತ್‌ ರಾಜ್‌ ಕುಮಾರ್‌ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಗಂಧದ ಗುಡಿ ಅವರ ಕನಸಿನ ಕೂಸು. ಗಂಧದ ಗುಡಿಯಲ್ಲಿ ಪುನೀತ್‌ ತಮ್ಮ ಜೀವನದ ಅನುಭವಗಳನ್ನು ತೆರೆದಿಟ್ಟಿದ್ದಾರೆ. ತಾವೇ ಸ್ವತಃ ಕ್ಯಾಮರಾ ಕೈಯಲ್ಲಿ ಹಿಡಿದು ಶೂಟ್‌ ಮಾಡಿದ್ದಾರೆ. ತಂದೆ ಹಾಕಿಕೊಟ್ಟ ದಾರಿಯಲ್ಲೇ ಸಾಗಿದ ಪುನೀತ್‌ ಕಾಡಿನ ರಕ್ಷಣೆಯ ಸಂದೇಶವನ್ನು ನಾಡಿನ ಜನರಿಗೆ ಕೊಟ್ಟಿದ್ದಾರೆ.

Prime Minister Narendra Modi congratulated Puneet Rajkumar “Gandhadagudi”.

Comments are closed.