ಸೋಮವಾರ, ಏಪ್ರಿಲ್ 28, 2025
HomeSpecial StoryLife StyleProtect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

Protect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

- Advertisement -

(Protect your Skin Winter Season)ದೀಪಾವಳಿ ಸಮೀಪಿಸುತ್ತಿದ್ದಂತೆಯೇ ಚಳಿಯ ಪ್ರಮಾಣ ಹೆಚ್ಚಳವಾಗುತ್ತದೆ. ಸುಮಾರು ಎರಡರಿಂದ ಮೂರು ತಿಂಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಚಳಿ ವಿಪರೀತವಾಗುತ್ತಿದೆ. ಅದ್ರಲ್ಲೂ ಕೈ ಕಾಲುಗಳ ಚರ್ಮ ಒಡೆಯಲು ಶುರುವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಚರ್ಮಗಳು ಒಡೆಯುವುದು ಸಹಜ. ಕೆಲವೊಬ್ಬರು ಮನೆಯಲ್ಲಿರುವ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುತ್ತಾರೆ.ಇನ್ನು ಕೆಲವರು ಅಂಗಡಿಯಿಂದ ಕ್ರೀಮ್ ಖರೀದಿಸಿ ಹಚ್ಚುತ್ತಾರೆ. ಇದರ ಬದಲು ಈ ಕೆಳಗೆ ಕೊಟ್ಟಿರುವ ಸೂಚನೆಯಂತೆ ಮಾಡಿದರೆ ಚರ್ಮವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು:
ಹಾಲು
ಜೇನುತುಪ್ಪ

ಮಾಡುವ ವಿಧಾನ :

ಒಂದು ಲೋಟದಲ್ಲಿ ಹಾಲನ್ನು ಹಾಕಿಕೊಂಡು ಅದಕ್ಕೆ ಜೇನುತುಪ್ಪ ಹಾಕಿ ಕರಡಿಕೊಂಡು ಐಸ್ ಕ್ಯೂಬ್ ಮಾಡುವ ಬಟ್ಟಲಿಗೆ ಹಾಕಬೇಕು. ನಂತರ ಪ್ರಿಜ್ ನಲ್ಲಿ ಇಟ್ಟು ಐಸ್ ನಂತೆ ಗಟ್ಟಿಯಾಗಲು ಬಿಡಬೇಕು.ಗಟ್ಟಿಯಾದ ನಂತರ ಅದನ್ನು ಸಣ್ಣ ಕವರ್ ನಲ್ಲಿ ಶೇಖರಿಸಿ ಇಡಬೇಕು ಇಲ್ಲವಾದಲ್ಲಿ ಅದರಲ್ಲೇ ಇಟ್ಟುಕೊಳ್ಳ ಬಹುದು. ಪ್ರತಿದಿನ ಹಾಲಿನ ಐಸ್ ಕುಬ್ ಅನ್ನು ಸೊಪಿನ ತರ ಬಳಸಿದರೆ ನಿಮ್ಮ ಚರ್ಮ ಒಡೆಯುವುದಿಲ್ಲ ಜೊತೆಗೆ ಚರ್ಮಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿಗಳು:
ಕಾಪಿ ಪೌಡರ್
ಕೊಬ್ಬರಿ ಎಣ್ಣೆ

ಮಾಡುವ ವಿಧಾನ:
ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಚಮಚ ಕಾಪಿ ಪೌಡರ್ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಕಲಸಿಕೊಳ್ಳಬೇಕು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಲೆಪನ ಮಾಡಿಕೊಂಡು ಮೂರು ನಿಮಿಷಗಳ ಕಾಲ ಬಿಡಬೇಕು ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕಲೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಬೇಕಾಗುವ ಸಾಮಗ್ರಿಗಳು:
ಜೇನುತುಪ್ಪ
ಶ್ರೀಗಂಧದ ಪುಡಿ (ಚಂದನ ಪುಡಿ)

ಇದನ್ನೂ ಓದಿ:Drinking water:ಬೆಳಗಿನ ಜಾವ ನೀರು ಕುಡಿಯುವಾಗ ಹೀಗೆ ಮಾಡಿದ್ರೆ ಅರಳುತ್ತೆ ನಿಮ್ಮ ಮುಖದ ಕಾಂತಿ

ಇದನ್ನೂ ಓದಿ:weight gain :ದೇಹದ ತೂಕ ಹೆಚ್ಚಿಸಬೇಕೆ ? ಹಾಗಾದ್ರೆ ಇಲ್ಲಿದೆ ಆರೋಗ್ಯಕರ ಸಲಹೆ

ಮಾಡುವ ವಿಧಾನ:
ಒಂದು ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಚಂದನ ಪುಡಿಯನ್ನು ಹಾಕಿ ಕಲಸಬೇಕು. ಕಲಿಸಿದ ಪೇಸ್ಟ್ ಅನ್ನು ಮುಖಕ್ಕೆ ಲೇಪನ ಮಾಡಿಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣಿರಿನಿಂದ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಿಸುವುದಲ್ಲದೆ, ತ್ವಚೆಯನ್ನು ಡ್ರೈ ಆಗಲು ಬಿಡುವುದಿಲ್ಲ.

An easy remedy to protect your skin winter season

RELATED ARTICLES

Most Popular