Jewelries : ಹಬ್ಬಗಳಲ್ಲಿ ವಿಶೇಷವಾಗಿ ಕಾಣಿಸಲು ಒಕ್ಸಿಡೈಸ್ಡ್‌ ಆಭರಣಗಳೇ ಬೆಸ್ಟ್‌..

ಹಬ್ಬಕ್ಕೂ ಮಹಿಳೆಯರಿಗು ಅವಿನಾಭಾವ ನಂಟು. ಹಬ್ಬಗಳಲ್ಲಿ ಮಹಿಳೆಯರು ಸಿಂಗರಿಸಿಕೊಳ್ಳಲು ಹಲವಾರು ಆಯ್ಕೆಗಳಿರುತ್ತವೆ. ಆಕರ್ಷಕವಾಗಿ ಕಾಣಿಸಲು ಅನೇಕ ಪರಿಕರಗಳಿವೆ. ಸೀರೆ, ಚೂಡಿದಾರ ಅದಕ್ಕೊಪ್ಪುವ ಆಭರಣಗಳು (Jewelries) ಒಂದೆರಡಲ್ಲ. ಚಿನ್ನ, ಬೆಳ್ಳಿ ಆಭರಣಗಳಿಗಿಂತ ಇತ್ತೀಚಿನ ದಿನಗಳಲ್ಲಿ, ಆಕ್ಸಿಡೈಸ್ಡ್‌ ಆಭರಣಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಆಕ್ಸಿಡೈಸ್ಡ್‌ ಆಭರಣಗಳೇ ಹೆಚ್ಚು ಆಕರ್ಷಕವಾಗಿಯೂ ಅಷ್ಟೆ ಕಂಫರ್ಟ್‌ ಆಗಿರುವುದರಿಂದ ಅದರ ಕಡೆ ಒಲವು ಹೆಚ್ಚಾಗುತ್ತಿದೆ. ಇವುಗಳು ಹಗುರವಾಗಿದ್ದು ವಿವಿಧ ರೀತಿಗಳಲ್ಲಿ ದೊರೆಯುತ್ತವೆ. ಆಕ್ಸಿಡೈಸ್ಡ್‌ ಆಭರಣಗಳು ಎತ್ನಿಕ್ ಉಡುಗೆ, ಇಂಡೋ-ವೆಸ್ಟರ್ನ್ ಉಡುಪುಗಳು ಮತ್ತು ಕೆಲವು ಪಾಶ್ಚಿಮಾತ್ಯ ಬಟ್ಟೆಗಳೊಂದಿಗೂ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಹಬ್ಬದ ಸೀಸನ್‌ಗಳಲ್ಲಿ ಇವುಗಳು ಅದ್ಭುತವಾಗಿ ಕಾಣಿಸಿಕೊಳ್ಳಲು ಸಹಾಯ ಮಾಡುತ್ತವೆ.

ಒಕ್ಸಿಡೈಸ್ಡ್‌ ಆಭರಣಗಳಲ್ಲಿ ಹಲವು ಬಗೆಯಿದೆ. ಕಿವಿಯೋಲೆ, ನೆಕ್ಲೆಸ್‌, ಉಂಗುರಗಳಲ್ಲಿ ಬಹಳಷ್ಟು ಡಿಸೈನ್‌ಗಳು ಸಿಗುತ್ತವೆ. ಅವುಗಳನ್ನು ದೊಡ್ಡ ಸಮಾರಂಭಗಳಲ್ಲಿ, ಪಾರ್ಟಿಗಳಲ್ಲಿ ಅಥವಾ ಸಾಂಪ್ರದಾಯಿಕ ಹಬ್ಬಗಳಲ್ಲೂ ಧರಿಸಬಹುದು. ಮಣಿಗಳನ್ನು, ಚಿಕ್ಕ ಚಿಕ್ಕ ಹರಳುಗಳನ್ನು ಜೋಡಿಸಿ ತಯಾರಿಸಿದ ಆಕ್ಸಿಡೈಸ್ಡ್‌ ಆಭರಣಗಳು ಎಲ್ಲಾ ಡ್ರೆಸ್‌ಗಳಿಗೂ ಹೊಂದಿಕೆಯಾಗುತ್ತವೆ.

ಕಿವಿಯೋಲೆಗಳು :


ಸದ್ಯದ ಟ್ರೆಂಡಿ ಆಭರಣಗಳಲ್ಲಿ ಅತ್ಯಂತ ಪ್ರಸಿದ್ಧವೆಂದರೆ ಆಕ್ಸಿಡೈಸ್ಡ್‌ ಕಿವಿಯೋಲೆಗಳು. ಅವು ಆಕರ್ಷಕವಾಗಿಯೂ ಮತ್ತು ಸುಂದರವಾಗಿಯೂ ಕಾಣಿಸುತ್ತವೆ. ಸೀರೆ ಅಥವಾ ಕುರ್ತಾದಂತಹ ಎತ್ನಿಕ್‌ ಉಡುಪುಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತವೆ. ಈ ಕಿವಿಯೋಲೆಗಳು ಜುಮ್ಕಾಗಳು, ಚಂದಬಾಲಿಗಳು, ಡ್ರಾಪ್ ಇಯರ್‌ರಿಂಗ್‌ಗಳು ಮತ್ತು ಸರಳವಾದ ಸ್ಟಡ್‌ಗಳು ಸೇರಿದಂತೆ ಹಲವಾರು ಶೈಲಿಗಳಲ್ಲಿ ಬರುತ್ತವೆ. ಕೆಲವೊಮ್ಮೆ ವರ್ಣರಂಜಿತ ಮಣಿಗಳು, ಟಸೆಲ್‌ಗಳು ಅಥವಾ ಪೊಂಪೊಮ್‌ಗಳನ್ನು ಆಕ್ಸಿಡೈಸ್ಡ್‌ ಕಿವಿಯೋಲೆಗಳಿಗೆ ಸೇರಿಸುವದರಿಂದ ಹೆಚ್ಚು ಫ್ಯಾಶನ್ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ.

ಇದನ್ನೂ ಓದಿ : Chocolate Face Mask : ಸೌಂದರ್ಯವನ್ನು ವೃದ್ದಿಸುತ್ತೆ ಚಾಕೋಲೆಟ್ ಫೇಸ್‌ ಮಾಸ್ಕ್‌

ಚೊಕರ್‌ ನೆಕ್ಲೇಸ್‌ಗಳು :


ಇತ್ತೀಚಿನ ದಿನಗಳಲ್ಲಿ ಚೋಕರ್‌ ನೆಕ್ಲೇಸ್‌ಗಳು ಹೆಚ್ಚು ಟ್ರೆಂಡ್‌ ಆಗಿವೆ. ಅದರಲ್ಲೂ ಒಕ್ಸಿಡೈಸ್ಡ್‌ ಚೋಕರ್‌ ನೆಕ್ಲೇಸ್‌ಗಳು ಬಹಳ ಜನಪ್ರಿಯವಾಗಿದೆ. ಇವು ಎತ್ನಿಕ್‌ ಮತ್ತು ಇಂಡೋ-ಪಾಶ್ಚಿಮಾತ್ಯ ಉಡುಗೆಗಳೆರಡಕ್ಕೂ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇದರ ಎಂಬೆಡೆಡ್‌ ವಿನ್ಯಾಸಗಳು ವಿಶಿಷ್ಟವಾಗಿ ತಯಾರಿಸಲ್ಪಟ್ಟಿರುತ್ತವೆ. ಇದರಲ್ಲಿ ಉದ್ದನೆಯ ನೆಕ್ಲೇಸ್‌ಗಳು ಸಹ ಲಭ್ಯವಿದೆ. ದೊಡ್ಡ ಪೆಂಡೆಂಟ್‌ಗಳಿರುವ ನೆಕ್ಲೇಸ್‌ಗಳು ಟ್ರೆಂಡ್‌ ಆಗಿದೆ.

ಫಿಂಗರ್‌ ರಿಂಗ್ಸ್‌ಗಳು :


ಆಕ್ಸಿಡೈಸ್ಡ್‌ ಫಿಂಗರ್‌ ರಿಂಗ್‌ಗಳು ಬಹಳ ಜನಪ್ರಿಯವಾಗಿದೆ. ಅವುಗಳನ್ನು ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ ಉಡುಪುಗಳೊಂದಿಗೆ ಧರಿಸಬಹುದು, ಮಣಿಗಳು ಮತ್ತು ರತ್ನದ ಕಲ್ಲುಗಳನ್ನು ಸೇರಿಸಿ ಉಂಗುರಗಳನ್ನು ಸುಂದರವಾಗಿ ಮಾಡಲಾಗುತ್ತದೆ. ಸ್ಟೈಲಿಶ್ ಬೋಹೀಮಿಯನ್ ನೋಟಕ್ಕಾಗಿ ವಿವಿಧ ಬೆರಳುಗಳ ಮೇಲೆ ಹಲವಾರು ಸಣ್ಣ ಉಂಗುರಗಳನ್ನು ಧರಿಸುವ ಆಯ್ಕೆಗಳು ಇವುಗಳಲ್ಲಿ ಸಿಗುತ್ತವೆ. ದೊಡ್ಡದಾದ ಅಷ್ಟೇ ಆಕರ್ಷಕವಾದ ಉಂಗುರಗಳು ಸಹ ಲಭ್ಯ.

ಇದನ್ನೂ ಓದಿ : Good Health Beauty : ಸೌಂದರ್ಯ ಮತ್ತು ಆರೋಗ್ಯದ ಕಾಳಜಿ ಹೀಗಿರಲಿ

(Jewelries Oxidized Accessories For Festive Vibe)

Comments are closed.