Puneeth Parva : “ಪುನೀತ್‌ ಪರ್ವ” “ಗಂಧದಗುಡಿ” ಫ್ರೀ ರೀಲಿಸ್‌ ಕಾರ್ಯಕ್ರಮ : ಅಭಿಮಾನಿಗಳಿಗೆ ಹಬ್ಬ

ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಹಾಗೂ ಕನಸಿನ ಸಿನಿಮಾ “ಗಂಧದಗುಡಿ” ಚಿತ್ರದ ಫ್ರೀ ರೀಲಿಸ್‌(Puneeth Parva) ಕಾರ್ಯಕ್ರಮವನ್ನು ದೊಡ್ಮನೆ ಕುಟುಂಬ ಹಾಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ನಡೆಸಲು ಸಕಲ ಸಿದ್ದತೆ ನಡೆದಿದೆ.”ಗಂಧದಗುಡಿ” ಸಿನಿಮಾದ ಫ್ರೀ ರೀಲಿಸ್‌ ಕಾರ್ಯಕ್ರಮವನ್ನು ನಾಳೆ ಅಕ್ಟೋಬರ್‌ 21, ಸಂಜೆ 6 ಗಂಟೆಗೆ ಕೃಷ್ಣ ವಿಹಾರ, ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಅಕ್ಟೋಬರ್‌ 9 ರಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಈ ಸಿನಿಮಾದ ಟ್ರೈಲರ್‌ ರೀಲಿಸ್‌ ಆಗಿದ್ದು, ಅದನ್ನು ವೀಕ್ಷಿಸಿದ ಕೊಟ್ಯಾಂತರ ಅಭಿಮಾನಿಗಳು ಸಿನಿಮಾ ರೀಲಿಸ್‌ಗಾಗಿ ಕಾತುರದಿಂದ ಕಾದಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕನಸಿನ ಸಿನಿಮಾದ “ಗಂಧದಗುಡಿ” ಅಕ್ಟೋಬರ್‌ 28ಕ್ಕೆ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದ್ದು ಅದರ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನೂ ಈ ಕಾರ್ಯಕ್ರಮಕ್ಕೆ “ಪುನೀತ್‌ ಪರ್ವ” (Puneeth Parva)ಎಂದು ಹೆಸರಿಟ್ಟು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲು ಅಪ್ಪು ಪುತ್ಥಳಿ, ಅಪ್ಪು ಸಹಿ ಇರುವ ಗಂಧದ ಪೀಸ್‌ ಹಾಗೂ ಮರದಿಂದ ತಯಾರಿಸಿದ ಆಮಂತ್ರಣ ಪತ್ರಿಕೆಯನ್ನು ಒಳಗೊಂಡಿರುವ ವಿಶೇಷ ಆಮಂತ್ರಣ ಪತ್ರಿಕೆಯನ್ನು ಕೂಡ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯನ್ನು ದೊಡ್ಮನೆ ಕುಟುಂಬದರವರು ಆಹ್ವಾನಿಸಿದ್ದಾರೆ. ಅಷ್ಟೇ ಅಲ್ಲದೇ ದಕ್ಷಿಣ ಭಾರತ ಚಿತ್ರರಂಗದ ಗಣ್ಯನಟರಾದ ರಾಣಾ ದಗ್ಗುಬಾಟಿ, ಕಮಲ್‌ ಹಾಸನ್‌, ಪ್ರಕಾಶ್‌ ರೈ, ನಾಗುರ್ಜುನ್‌, ಮೆಗಾಸ್ಟಾರ್‌ ಚಿರಂಜೀವಿ, ತಮಿಳು ನಟ ಸೂರ್ಯ, ಪ್ರಭುದೇವ್ ಸೇರಿದಂತೆ ಪುನೀತ್‌ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಕನ್ನಡ ಚಿತ್ರರಂಗದ ನಟ-ನಟಿಯರು,ತಂತ್ರಜ್ಞರು, ಬಾಲಿವುಡ್‌ನ ಖ್ಯಾತ ಗಾಯಕರು ಸೇರಿದಂತೆ ಇನ್ನೂ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ರಾಘವೇಂದ್ರ ರಾಜ್‌ಕುಮಾರ್‌ ತಿಳಿಸಿದ್ದಾರೆ.

ಪುನೀತ್‌ ಪರ್ವ”ವನ್ನು ದೊಡ್ಮನೆ ಕುಟುಂಬದವರು ಆಯೋಜಿಸಿರುವುದರಿಂದ ಕೋಟ್ಯಾಂತರ ಅಭಿಮಾನಿಗಳಿಗಾಗಿ ಈ ಕಾರ್ಯಕ್ರಮವನ್ನು ಅರ್ಪಿಸುತ್ತಿದ್ದೇವೆ ಎಂದಿದ್ದಾರೆ. ಈ ಕಾರ್ಯಕ್ರಮದ ಅಂಗವಾಗಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಾಡು ನೃತ್ಯಗಳಿಂದ ಕೂಡಿದ್ದು ಜನರ ಕಿವಿ ಕಣ್ಣಿಗೆ ಹಬ್ಬವಾಗಲಿದೆ. ಈ ಕಾರ್ಯಕ್ರಮವು ಸಂಪೂರ್ಣವಾಗಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ದೊಡ್ಮನೆಯವರ ನೇತೃತ್ವದಲ್ಲಿ ನಡೆಯಲಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಆಗಮಿಸುವವರಲ್ಲಿ ಬಿಳಿ ಡ್ರೆಸ್‌ನ್ನು ಧರಿಸಿ ಬರುವಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ. “ಪುನೀತ್‌ ಪರ್ವ” ಕಾರ್ಯಕ್ರಮದ ಲೈವ್‌ವನ್ನು ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಕೂಡ ವೀಕ್ಷಿಸಬಹುದಾಗಿದೆ.

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೊದಲಿನಿಂದಲೂ ಪರಿಸರ, ಪ್ರಾಣಿ, ಪಕ್ಷಿಗಳು ಅಂದ್ರೆ ತುಂಬಾ ಇಷ್ಟಪಡುತ್ತಿದ್ದರು. ಹಾಗಾಗಿ “ಗಂಧದ ಗುಡಿ ಸಿನಿಮಾವನ್ನು ಮಾಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಅವರು ಪವರ್‌ ಸ್ಟಾರ್‌ ಆಗಿ ಕಾಣಿಸಿಕೊಳ್ಳದೇ ಕೇವಲ ಪುನೀತ್‌ ರಾಜ್‌ಕುಮಾರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಎಲ್ಲರನ್ನೂ ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Puneeth RajKumar Movie Gandhadagudi : “ಪುನೀತ್‌ ಪರ್ವ” ಕಾರ್ಯಕ್ರಮಕ್ಕೆ ಆಹ್ವಾನ : ಸಿಎಂ ಬೊಮ್ಮಾಯಿ ಆಹ್ವಾನಿಸಿದ ರಾಜ್ ಕುಟುಂಬ

ಇದನ್ನೂ ಓದಿ : Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಇದನ್ನೂ ಓದಿ : Rana Daggubati : ನಟ ರಾಣಾ ದಗ್ಗುಬಾಟಿ ಕಛೇರಿಯಲ್ಲಿ ಅಪ್ಪು ಪುತ್ಥಳಿ : ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಪುಲ್‌ಖುಷ್‌

ಪುನೀತ್‌ ರಾಜ್‌ಕುಮಾರ್‌ ಭೋಜನಪ್ರಿಯರಾಗಿದ್ದು ಬೆಂಗಳೂರಿನ ಹೆಚ್ಚಿನ ಹೋಟೆಲ್‌ಗಳಲ್ಲಿ “ಆಹಾರ ಮೇಳ”ವನ್ನು ಕೂಡ ಹಮ್ಮಿಕೊಂಡಿದ್ದಾರೆ. ಅಕ್ಟೋಬರ್‌ 21, 22 ಮತ್ತು 23 ಮೂರು ದಿನಗಳ ಕಾಲ “ಪ್ಲೇವರ್‌ ಆಫ್‌ ಗಂಧದಗುಡಿ” ಎನ್ನುವ ಮೆನ್ಯೂ ಕಾರ್ಡ್‌ ಮೂಲಕ ಆಯೋಜಿಸಲಾಗುತ್ತದೆ. ಅಕ್ಟೋಬರ್‌ 29ಕ್ಕೆ ಪುನೀತ್‌ ರಾಜ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯಸ್ಮರಣೆಯಾಗಿದ್ದು ಅದರ ಮೊದಲ ದಿನ ಇವರ ಕನಸಿನ ಸಿನಿಮಾವಾದ “ಗಂಧದಗುಡಿ” ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹಾಗೆ ನವೆಂಬರ್‌ 1 ರಂದು ಮರಣೋತ್ತರ “ಭಾರತರತ್ನ” ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನೂ ಅಪ್ಪು ಪುಣ್ಯಸ್ಮರಣೆಯಂದು ಆಗಮಿಸುವ ಎಲ್ಲಾ ಅಭಿಮಾನಿಗಳಿಗೂ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದಾರೆ.

“Puneet Parva” “Gandhadagudi” Free Release Program: A Feast For Fans

Comments are closed.