ಮಂಗಳವಾರ, ಏಪ್ರಿಲ್ 29, 2025
HomeSportsCricketMCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ...

MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ

- Advertisement -

ಮುಂಬೈ: 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಕರ್ನಾಟಕದ ರೋಜರ್ ಬಿನ್ನಿ (Roger Binny) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಮತ್ತೊಬ್ಬ ಸದಸ್ಯ ಸಂದೀಪ್ ಪಾಟೀಲ್ (Sandeep Patil), ಮುಂಬೈ ಕ್ರಿಕೆಟ್ ಸಂಸ್ಥೆಯ (Mumbai Cricket Association – MCA) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (MCA Election) ಸೋತಿದ್ದಾರೆ.

66 ವರ್ಷದ ಸಂದೀಪ್ ಪಾಟೀಲ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮೋಲ್ ಕಾಳೆ (Amol Kale) ವಿರುದ್ಧ 25 ಮತಗಳ ಅಂತರದಲ್ಲಿ ಸೋತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಾಟೀಲ್ ಒಟ್ಟು 370 ಮತಗಳಲ್ಲಿ 158 ಮತಗಳನ್ನು ಪಡೆದರೆ, ಅಮೋಲ್ ಕಾಳೆ 183 ಮತಗಳನ್ನು ಪಡೆದು ಮುಂಬೈ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಮೋಲ್ ಕಾಳೆ ಬಿಸಿಸಿಐನ ನೂತನ ಖಜಾಂಚಿ ಹಾಗೂ ಮಹಾರಾಷ್ಟ್ರದ ಬಿಜೆಪಿ ಶಾಸಕ ಆಶಿಶ್ ಶೆಲ್ಲರ್ ಅವರ ಬೆಂಬಲಿಗ. ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಏಕನಾಥ ಶಿಂಧೆ ಬಣದ ಶಿವಸೇನೆ ಮೈತ್ರಿ ಸರ್ಕಾರದ ಬೆಂಬಲ ಪಡೆದಿದ್ದ ಅಮೋಲ್ ಕಾಳೆ, ಮಾಜಿ ಕ್ರಿಕೆಟ್ ದಿಗ್ಗಜನನ್ನೇ ಸೋಲಿಸಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಸಂದೀಪ್ ಪಾಟೀಲ್ ಭಾರತ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರೂ ಆಗಿದ್ದರು. 66 ವರ್ಷದ ಸಂದೀಪ್ ಪಾಟೀಲ್ 29 ಟೆಸ್ಟ್ ಹಾಗೂ 45 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಸಂದೀಪ್ ಪಾಟೀಲ್ ಅವರೊಂದಿಗೆ 1983ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಆಡಿದ್ದ ರೋಜರ್ ಬಿನ್ನಿ, ಅಕ್ಟೋಬರ್ 18ರಂದು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ 2ನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಅವಿರೋಧವಾಗಿ ಮುಂದುವರಿದಿದ್ದಾರೆ.

ಇದನ್ನೂ ಓದಿ : T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

ಇದನ್ನೂ ಓದಿ : IND vs PAK Playing XI : ಪಾಕಿಸ್ತಾನ ವಿರುದ್ಧದ ಮೆಗಾ ಮ್ಯಾಚ್‌ಗೆ ಕೌಂಟ್‌ಡೌನ್, ಹೀಗಿರಲಿದೆ ಭಾರತದ ಪ್ಲೇಯಿಂಗ್ XI

Roger Binny Elected BCCI President Election but Sandeep Patil Defeated MCA Election Both Are 1983 World cup winners

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular