Diwali And Solar Eclipse : ದೀಪಾವಳಿಯ ದಿನವೇ ಖಂಡಗ್ರಾಸ ಸೂರ್ಯಗ್ರಹಣ: ಆಚರಣೆ ಮಾಡುವುದು ಹೇಗೆ?

ಆಕಾಶದಲ್ಲಿ ನಡೆಯುವ ವಿದ್ಯಮಾನಗಳಿಗೂ (Celestial Events) ಮತ್ತು ವಿವಿಧ ಆಚರಣೆಗಳಿಗೂ (Rituals) ಒಂದಕ್ಕೊಂದು ತಾಳೆ ಹಾಕಲಾಗುತ್ತದೆ. ಈ ವರ್ಷದ ಸೂರ್ಯ ಗ್ರಹಣವು ಬೆಳಕಿನ ಹಬ್ಬ ದೀಪಾವಳಿಯಲ್ಲೇ (Diwali And Solar Eclipse) ಸಂಭವಿಸುತ್ತದೆ. ಈ ಸೂರ್ಯ ಗ್ರಹಣವು ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯ ಗ್ರಹಣವಾಗಿದೆ. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ಭಾಗಶಃ ಗೋಚರಿಸುತ್ತದೆ.

ಅಕ್ಟೋಬರ್‌ 25, 2022 ರ ಸೂರ್ಯಗ್ರಹಣವು ತುಲಾ ರಾಶಿಯ ಮೇಲೆ ಸಂಭವಿಸಲಿದೆ. ಈ ತಿಥಿಯು ಅಕ್ಟೋಬರ್‌ 24, 2022 ರಂದು ಸಂಜೆ 05:27 ಕ್ಕೆ ಪ್ರಾರಂಭವಾಗಿ, ಅಕ್ಟೋಬರ್ 25, 2022 ರಂದು ಸಂಜೆ ಕೊನೆಗೊಳ್ಳುತ್ತದೆ. ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ಭಾಗಗಳಲ್ಲಿ ಗ್ರಹಣ ಗೋಚರಿಸುತ್ತದೆ. ಸೂರ್ಯ ಗ್ರಹಣವು ಒಂದು ಗಂಟೆಯವರೆಗೆ ಇರುತ್ತದೆ. ಭಾರತದಲ್ಲಿ ಇದು ಖಂಡಗ್ರಾಸ ಸೂರ್ಯ ಗ್ರಹಣವಾಗಿದೆ.

ಸೂರ್ಯ ಗ್ರಹಣದ ಸಂದರ್ಭದಲ್ಲಿ ಮಾಡಬೇಕಾದದ್ದು ಏನು :
ಗ್ರಹಣದ ಸಮಯದಲ್ಲಿ ಹಲವಾರು ಜನರು ಹಲವಾರು ರೀತಿಯ ಆಚರಣೆ ಮಾಡುತ್ತಾರೆ. ಅವರವರ ಅನುಕೂಲ ಮತ್ತು ಶಕ್ತಿಗಳಿಗನುಸಾರವಾಗಿಯೂ ಆಚರಣೆ ಮಾಡುತ್ತಾರೆ. ನಾವು ಇಲ್ಲಿ ಕೆಲವು ಆಚರಣೆಗಳನ್ನು ಪಟ್ಟಿ ಮಾಡಿದ್ದೇವೆ

  • ಸೂರ್ಯ ಗ್ರಹಣ ಸಂಭವಿಸಿದಾಗ ದೇವರ ಮಂತ್ರಗಳನ್ನು ಪಠಿಸಲಾಗುತ್ತದೆ.
  • ಗ್ರಹಣ ಬಿಡುಗಡೆಯಾದ ನಂತರ ಸ್ನಾನ ಮಾಡುವುದು.
  • ಗಂಗಾಜಲವನ್ನು ಮನೆಯ ಸುತ್ತಮುತ್ತ ಹಾಕಿ ಮನೆಯನ್ನು ಶುಚಿಗೊಳಿಸುವುದು.
  • ಹೆಚ್ಚಾಗಿ ಗರ್ಭಿಣಿಯರು ಗ್ರಹಣ ಕಾಲದಲ್ಲಿ ಮನೆಯೊಳಗೇ ಇರುವುದು.

ಇದನ್ನೂ ಓದಿ : Diwali Tour Plan : ದೀಪಾವಳಿಯ ವಾರಾಂತ್ಯದ ರಜೆಯಲ್ಲಿ ಬೆಂಗಳೂರಿನಿಂದ ಪ್ರವಾಸ ಹೋಗಲು ಪ್ಲಾನ್‌ ಮಾಡ್ತಿದ್ರೆ ಇಲ್ಲಿ ಹೇಳಿರುವ ಸ್ಥಳಗಳನ್ನೊಮ್ಮೆ ಗಮನಿಸಿ…

ಸೂರ್ಯ ಗ್ರಹಣದ ಸಮಯದಲ್ಲಿ ಮಾಡಲೇಬಾರದ ಕೆಲಸಗಳು :
ಸೂರ್ಯ ಗ್ರಹಣದಲ್ಲಿ ಕೆಲವು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತದೆ.

  • ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು.
  • ಗ್ರಹಣ ಕಾಲದಲ್ಲಿ ಅಡುಗೆ ಮಾಡುವುದು ಮತ್ತು ತಿನ್ನುವುದನ್ನು ನಿಷೇಧಿಸಲಾಗಿದೆ.
  • ಸೂರ್ಯ ಗ್ರಹಣದ ಮೊದಲು ಎಲ್ಲಾ ಆಹಾರಗಳಿಗೆ ಮತ್ತು ನೀರಿಗೆ ತುಳಸಿ ಎಲೆಗಳನ್ನು ಹಾಕುವದು.
  • ಗ್ರಹಣ ಕಾಲದಲ್ಲಿ ಮಲಗಬಾರದು.
  • ಹರಿತವಾದ ವಸ್ತುಗಳ ಉಪಯೋಗ ಮಾಡಬಾರದು.

(ಸೂರ್ಯ ಗ್ರಹಣದ ಆಚರಣೆ ಮಾಡುವಾಗ ಸರಿಯಾಗಿ ವೈಜ್ಞಾನಿಕ ಕಾರಣಗಳನ್ನು ತಿಳಿದು ಆಚರಿಸುವುದು ಉತ್ತಮ)

ಇದನ್ನೂ ಓದಿ : Diwali Festival 2022 : ಕರಾವಳಿಯಲ್ಲಿ ವಿಶೇಷ ದೀಪಾವಳಿ : ಏನಿದು “ಬಲೀಂದ್ರ ಪೂಜೆ”

(Diwali And Solar Eclipse Do’s and Don’ts )

Comments are closed.