ಮಂಗಳವಾರ, ಏಪ್ರಿಲ್ 29, 2025
HomeWorldnew britain pm rishi sunak :ಬ್ರಿಟನ್​ ಪ್ರಧಾನಿ ಪಟ್ಟಕ್ಕೇರಿದ ರಿಷಿ ಸುನಕ್​ರ ಮುಂದಿದೆ ಈ...

new britain pm rishi sunak :ಬ್ರಿಟನ್​ ಪ್ರಧಾನಿ ಪಟ್ಟಕ್ಕೇರಿದ ರಿಷಿ ಸುನಕ್​ರ ಮುಂದಿದೆ ಈ ಸವಾಲುಗಳು

- Advertisement -

new britain pm rishi sunak : ಹಿಂದೊಂದು ಕಾಲವಿತ್ತು. ಬ್ರಿಟೀಷರು ಭಾರತಕ್ಕೆ ವ್ಯಾಪಾರದ ಉದ್ದೇಶಕ್ಕೆಂದು ಬಂದು ಬಳಿಕ ಭಾರತವನ್ನೇ ಆಳಿದ್ದರು. ಸಂಪೂರ್ಣ ಭಾರತವನ್ನು ಲೂಟಿ ಮಾಡಿದ್ದ ಬ್ರಿಟೀಷರು ಭಾರತೀಯರನ್ನು ಗುಲಾಮರಂತೆ ಕಂಡಿದ್ದರು. ಆದರೆ ಈಗ ಹಾಗಿಲ್ಲ ಕಾಲ ಬದಲಾಗಿದೆ. ಇಂದು ಅದೇ ಬ್ರಿಟನ್​ ರಾಷ್ಟ್ರಕ್ಕೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನು ಬದಲಾಯಿಸಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಬ್ರಿಟನ್​ ಪ್ರಧಾನಿ ಪಟ್ಟವನ್ನು ಗಿಟ್ಟಿಸಿಕೊಂಡಿರುವುದು ಕನ್ನಡಿಗರಿಗೆ ಒಂದು ಪಾಲು ಹೆಚ್ಚಿನ ಖುಷಿಯನ್ನೇ ತಂದಿದೆ. ಕರ್ನಾಟಕದ ಅಳಿಯ ಬ್ರಿಟೀಷರ ನಾಯಕ ಎನಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.


ಇನ್ಫೋಸಿಸ್​ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯ ಅಳಿಯ ರಿಷಿ ಸುನಕ್​​ ಬ್ರಿಟನ್​​ನ ಪ್ರಧಾನಿಯಾಗಿದ್ದೇನೋ ಖುಷಿಯ ವಿಚಾರ. ಆದರೆ ರಿಷಿ ಸುನಕ್​ರ ಮುಂದಿನ ಹಾದಿ ಅಂದುಕೊಂಡಷ್ಟು ಸುಲಭವಾಗಿಲ್ಲ. ದೇಶದ ಆರ್ಥಿಕತೆಯನ್ನು ನಿಭಾಯಿಸುವ ದೊಡ್ಡ ಸವಾಲು ಇದೀಗ ರಿಷಿ ಸುನಕ್​ರ ಹೆಗಲೇರಿದೆ.


ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವುದು ರಿಷಿ ಸುನಕ್​ರಿಗೆ ಹೊಸ ವಿಚಾರವೇನಲ್ಲ. ಹಿಂದೆ ಬೋರಿಸ್​ ಜಾನ್ಸನ್​ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಿಷಿ ಸುನಕ್​​ ವಿತ್ತ ಸಚಿವರಾಗಿದ್ದರು. ಬೋರಿಸ್​ ಜಾನ್ಸನ್​​ ದೇಶದ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಎಡವಿದ್ದರು. ಇದೇ ಇವರನ್ನು ರಾಜೀನಾಮೆ ನೀಡುವಂತೆ ಮಾಡಿತ್ತು. ಆದ್ರೀಗ ರಿಷಿ ಸುನಕ್​ ದೇಶದ ಆರ್ಥಿಕತೆಯನ್ನು ಯಾವ ರೀತಿಯಲ್ಲಿ ಕಾಪಾಡ್ತಾರೆ ಅನ್ನೋದೇ ದೊಡ್ಡ ಸವಾಲಾಗಿದೆ.


ಬ್ರಿಟನ್​ ಒಂದು ಶಕ್ತಿಶಾಲಿ ರಾಷ್ಟ್ರವಾಗಿದ್ದರೂ ಸಹ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಬ್ರಿಟನ್​ ಇದೆ ಅನ್ನೋ ಮಾತನ್ನು ಅಲ್ಲಗೆಳೆಯೋ ಹಾಗಿಲ್ಲ. ಲಿಜ್​ ಟ್ರುಸ್​​ ಕೂಡ ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಕಷ್ಟವೆಂದು ತಿಳಿದೇ ಅಲ್ಪಕಾಲದಲ್ಲಿಯೇ ಬ್ರಿಟನ್​ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿರೋದನ್ನು ನೋಡಿದ್ರೆ ರಿಷಿ ಸುನಕ್​ರ ಮುಂದಿರುವ ಸವಾಲು ಎಂತಾದ್ದು ಅನ್ನೋದನ್ನು ಊಹಿಸಬಹುದಾಗಿದೆ.


ದೇಶದಲ್ಲಿರುವ ಹಣದುಬ್ಬರದ ಸಮಸ್ಯೆಗಳಿಂದಾಗಿ ಬಡ್ಡಿದರಗಳು ಏರಿಕೆಯಾಗಿದೆ. ರಿಷಿ ಸುನಕ್​ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ದೇಶವನ್ನು ಆರ್ಥಿಕ ಸಮಸ್ಯೆಯ ಸುಳಿಯಿಂದ ಬಚಾವು ಮಾಡುವ ಭರವಸೆಯನ್ನು ನೀಡಿದ್ದಾರೆ. ಲಿಸ್​ ಟ್ರುಸ್​ಗೆ ಸ್ವಪಕ್ಷೀಯರೇ ಎದುರಾಗಿದ್ದರು. ಹೀಗಾಗಿ ಇದೀಗ ರಿಷಿ ಸುನಕ್​​ ಸ್ವಪಕ್ಷೀಯರ ವಿಶ್ವಾಸವನ್ನೂ ಉಳಿಸಿಕೊಂಡು ದೇಶದ ಜನತೆಯನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರವನ್ನು ಮುನ್ನೆಡಸಬೇಕಿದೆ.
ಲಿಜ್​ ಟ್ರಸ್​ ಸರ್ಕಾರವು ಮಿನಿ ಬಜೆಟ್​ ಘೋಷಣೆ ಮಾಡಿತ್ತು. ಈ ಬಜೆಟ್​ನಲ್ಲಿ ಜನ ಸಾಮಾನ್ಯರಿಗೆ ಹಾಗೂ ಉದ್ಯಮಿಗಳಿಗೆ ಒಂದೇ ಬಗೆಯ ದರ ನಿಗದಿ ಪಡಿಸಲಾಗಿತ್ತು. ಆದರೆ ಈ ತೆರಿಗೆ ಕಡಿತ ನೀತಿಯು ದೇಶದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಜಟಿಲಗೊಳಿಸಿತ್ತು. ಹೀಗಾಗಿ ಇವೆಲ್ಲವನ್ನು ಸರಿ ಮಾಡುವ ದೊಡ್ಡ ಜವಾಬ್ದಾರಿ ರಿಷಿ ಸುನಕ್​ರ ಹೆಗಲೇರಿದೆ.

ಇದನ್ನು ಓದಿ : WhatsApp services restored :ವಾಟ್ಸಾಪ್​​ ಸೇವೆ ಪುನಾರಂಭ : ನಿಟ್ಟುಸಿರು ಬಿಟ್ಟ ಬಳಕೆದಾರರು

ಇದನ್ನೂ ಓದಿ : sextortion fraud :ಅಪರಿಚಿತ ನಂಬರ್​​ನಿಂದ ಬಂದ ವಿಡಿಯೋ ಕಾಲ್​ ರಿಸೀವ್​ ಮಾಡಿ ಲೈಂಗಿಕ ವಂಚನೆಗೊಳಗಾದ ಪ್ರತಿಷ್ಠಿತ ಕಂಪನಿ ಸಿಇಓ

new britain pm rishi sunak faces many economy related challenges including tax cost of living

RELATED ARTICLES

Most Popular