shampoo cancer risk: ಗ್ರಾಹಕರೇ ಎಚ್ಚರ..ಈ ಶಾಂಪೂಗಳನ್ನು ಬಳಸಿದ್ರೆ ಬರುತ್ತಂತೆ ಕ್ಯಾನ್ಸರ್

ನವದೆಹಲಿ: shampoo cancer risk: ಡವ್, ಟ್ರೆಸ್‍ಮೀ ಮೊದಲಾದ ಶಾಂಪೂಗಳ ಬಳಕೆದಾರರೇ ಎಚ್ಚರ.. ನೀವು ಈ ಶಾಂಪೂಗಳನ್ನು ಬಳಸುತ್ತಿದ್ರೆ ಈ ಕೂಡಲೇ ನಿಲ್ಲಿಸೋದು ಉತ್ತಮ. ಒಂದು ವೇಳೆ ಈ ಶಾಂಪೂಗಳ ಬಳಕೆ ನಿಲ್ಲಿಸದೇ ಹೋದ್ರೆ ಅದು ನಿಮ್ಮ ಜೀವಕ್ಕೆ ಕುತ್ತು ತಂದೊಡ್ಡಲಿದೆ. ಯಾಕಂದ್ರೆ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಅನ್ನೋ ಭಯಾನಕ ಸತ್ಯ ಹೊರಬಿದ್ದಿದೆ.

ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಯೂನಿಲಿವರ್ ಪಿಎಲ್‍ಸಿ ಕಂಪೆನಿಯು ಮಾರುಕಟ್ಟೆಯಿಂದ ಹಿಂಪಡೆದಿದೆ. ಇದಕ್ಕೆ ಕಾರಣ ಈ ಶಾಂಪೂಗಳಲ್ಲಿ ಮಾರಕ ಕ್ಯಾನ್ಸರ್ ತಂದೊಡ್ಡುವ ಅಂಶಗಳು ಪತ್ತೆಯಾಗಿದೆ. ಬೆಂಜೀನ್ ಎಂಬ ಕ್ಯಾನ್ಸರ್ ಕಾರಕ ಅಂಶಗಳು ಈ ಶಾಂಪೂಗಳಲ್ಲಿ ಪತ್ತೆಯಾಗಿದ್ದು, ಇವುಗಳು ಹಲವು ರೀತಿಯಲ್ಲಿ ಮಾನವನ ದೇಹವನ್ನು ಪ್ರವೇಶಿಸುತ್ತವೆ ಎಂಬ ಅಪಾಯದ ಮುನ್ಸೂಚನೆ ಸಿಕ್ಕಿದೆ.

ಯೂನಿಲಿವರ್ Nexxus, Suave, Tresemme ಹಾಗೂ Tigiನಂತಹ ಬ್ರ್ಯಾಂಡ್‍ಗಳನ್ನು ಒಳಗೊಂಡಿದೆ. ಈ ಶಾಂಪೂಗಳು ಮೂಗು, ಬಾಯಿ ಮತ್ತು ಚರ್ಮದ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಉತ್ಪನ್ನಗಳು ಬ್ಲಡ್ ಕ್ಯಾನ್ಸರ್ ಗೆ ಕಾರಣವಾಗಬಹುದು. ಜನರು ಈ ಉತ್ಪನ್ನಗಳನ್ನು ಈ ಕೂಡಲೇ ನಿಲ್ಲಿಸಬೇಕು. ತಮ್ಮ ಹಣವನ್ನು ಮರಳಿ ಪಡೆಯಬೇಕಾದ್ದಲ್ಲಿ UnileverRecall.com ವೆಬ್‍ಸೈಟಿಗೆ ಭೇಟಿ ನೀಡಬಹುದು ಎಂದು ಎಫ್‍ಡಿಎ ಹೇಳಿದೆ. ಆದರೆ ಯೂನಿಲಿವರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ಹಲವು ಸನ್‍ಸ್ಕ್ರೀನ್ ಲೋಷನ್‍ಗಳನ್ನು ಹಿಂಪಡೆಯಲಾಗಿದೆ. ಜಾನ್ಸನ್ ಮತ್ತು ಅದರ ನ್ಯೂಟ್ರೋಜೆನಾ, ಎಡ್ಜ್‍ವೆಲ್ ಪರ್ಸನಲ್ ಕೇರ್ ಕಂ ಬನಾನಾ ಬೋಟ್ ಹಾಗೂ ಬೈರ್ಸ್‍ಡಾರ್ಫ್ ಎಜಿಯ ಕಾಪರ್ ಟೋನ್ ಜೊತೆಗೆ ಸ್ಟ್ರೇ ಆನ್ ಆಂಟಿಪೆರ್ಸ್‍ಪಿರಂಟ್‍ಗಳಾದ ಪ್ರಾಕ್ಟರ್ ಮತ್ತು ಗ್ಯಾಂಬಲ್ ಕೋಸ್ ಸೀಕ್ರೆಟ್, ಓಲ್ಡ್ ಸ್ಪೈಸ್ ಹಾಗೂ ಯೂನಿಲಿವರ್ಸ್ ಸುವೇವ್ ಈ ಉತ್ಪನ್ನಗಳನ್ನು ಈ ಹಿಂದೆಯೇ ಹಿಂಪಡೆಯಲಾಗಿತ್ತು. ಲಿಸೂರ್ ನ ಸಂಶೋಧನೆಗಳ ಆಧಾರದ ಮೇಲೆ P&G ತನ್ನ ಏರೋಸಾಲ್ ಉತ್ಪನ್ನಗಳ ಸಂಪೂರ್ಣ ಪೋರ್ಟ್‍ಪೋಲಿಯೋವನ್ನು ಪರೀಕ್ಷಿಸಿದೆ. ಬೆಂಜೀನ್ ಅಂಶಗಳನ್ನು ಉಲ್ಲೇಖಿಸಿ ಕಳೆದ ಡಿಸೆಂಬರ್ ನಲ್ಲಿ ತನ್ನ ಪ್ಯಾಂಟೆನ್ ಮತ್ತು ಹರ್ಬಲ್ ಎಸೆನ್ಸಸ್ ಡ್ರೈ ಶಾಂಪೂಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು.

ಯೂನಿಲಿವರ್‌ನ ಕ್ರಮವು ಮತ್ತೊಮ್ಮೆ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಏರೋಸಾಲ್‌ಗಳ ಉಪಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಏರೋಸಾಲ್ ಸನ್‌ಸ್ಕ್ರೀನ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಇವುಗಳಲ್ಲಿ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂ. ಬನಾನಾ ಬೋಟ್ ಮತ್ತು ಬೀರ್ಸ್‌ಡಾರ್ಫ್ AGಯ ಕಾಪರ್‌ಟೋನ್‌ ಕೂಡ ಇತ್ತು.

ಕಳೆದ ವರ್ಷ, ಪ್ರಾಕ್ಟರ್ ಹಾಗೂ ಗ್ಯಾಂಬಲ್ 30ಕ್ಕೂ ಹೆಚ್ಚು ಏರೋಸಾಲ್ ಸ್ಪ್ರೇ ಹೇರ್‌ಕೇರ್ ಉತ್ಪನ್ನಗಳನ್ನು ಹಿಂಪಡೆದಿದೆ. ಇವುಗಳಲ್ಲಿ ಡ್ರೈ ಶಾಂಪೂ ಮತ್ತು ಡ್ರೈ ಕಂಡಿಷನರ್ ಸೇರಿವೆ. ಈ ಉತ್ಪನ್ನಗಳಲ್ಲಿ ಬೆಂಜೀನ್ ಇರಬಹುದು ಎಂದು ಕಂಪನಿ ಎಚ್ಚರಿಕೆ ನೀಡಿತ್ತು. 12 ಓಲ್ಡ್ ಸ್ಪೈಸ್ ಮತ್ತು ಸೀಕ್ರೆಟ್ ಬ್ರಾಂಡ್‌ಗಳ ಡಿಯೋಡರೆಂಟ್‌ಗಳು ಮತ್ತು ಸ್ಪ್ರೇಗಳನ್ನು ಕಂಪನಿಯು ಹಿಂಪಡೆದಿದೆ.

ಇದನ್ನೂ ಓದಿ: Bigg Boss contestants: ಬಿಗ್​ಬಾಸ್​ ಸ್ಫರ್ಧಿಗಳಿಗೆ ದೀಪಾವಳಿ ಧಮಾಕಾ : ಮನೆಯಿಂದ ಬಂದಿದೆ ಸಪ್ರೈಸ್​ ಗಿಫ್ಟ್​ , ಕಣ್ಣೀರಿಟ್ಟ ದಿವ್ಯಾ ಉರುಡುಗ

Popular brands of dry shampoo, including Dove, recalled by Unilever over cancer risk

Comments are closed.