ಬುಧವಾರ, ಏಪ್ರಿಲ್ 30, 2025
HomekarnatakaPM Bangalore Visit: ನ.11ರಂದು ಬೆಂಗಳೂರಿಗೆ ಪ್ರಧಾನಿ ಭೇಟಿ: ಮೋದಿ ಸನ್ಮಾನಕ್ಕೆ ಸಿದ್ಧವಾಗಿದೆ 'ಕೆಂಪೇಗೌಡ...

PM Bangalore Visit: ನ.11ರಂದು ಬೆಂಗಳೂರಿಗೆ ಪ್ರಧಾನಿ ಭೇಟಿ: ಮೋದಿ ಸನ್ಮಾನಕ್ಕೆ ಸಿದ್ಧವಾಗಿದೆ ‘ಕೆಂಪೇಗೌಡ ಪೇಟ’

- Advertisement -

ಬೆಂಗಳೂರು: PM Bangalore Visit: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಅತಿ ದೊಡ್ಡ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಇದನ್ನೂ ಓದಿ: B. C. Nagesh : ಶಾಲೆಗಳ ಹತ್ತು ನಿಮಿಷ ಧ್ಯಾನ : ಖ್ಯಾತ ಮನೋವೈದ್ಯ ಡಾ ಪಿ.ವಿ ಭಂಡಾರಿ ಆಕ್ಷೇಪ

ನ.11ರ ಪ್ರಧಾನಿ ಅವರ ಕಾರ್ಯಕ್ರಮಗಳ ವಿವರಗಳು ಹೀಗಿವೆ.

  • ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಅವರು 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಪ್ರಥಮವಾಗಿ ಶಾಸಕರ ಸಭಾಭವನದ ಆವರಣದಲ್ಲಿ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.
  • ಅಲ್ಲಿಂದ ನೇರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
    ಅದಾದ ಬಳಿಕ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಟರ್ಮಿನಲ್-2 ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಲೋಕಾರ್ಪಣೆಗೊಳಿಸಿ, ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ.
  • ಅದಾದ ಬಳಿಕ ವಿಮಾನ ನಿಲ್ದಾಣ ಸಮೀಪದ ಕೆಎಸ್‍ಎಸ್‍ಐಡಿಎಲ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: Virat Kohli Birthday : ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್

ಕೆಂಪೇಗೌಡ ಪೇಟದ ವಿನ್ಯಾಸ ಹೇಗಿದೆ..?


ಬೆಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರಿಗೆ ಈ ಬಾರಿ ವಿಭಿನ್ನವಾದ ಕೆಂಪೇಗೌಡ ಪೇಟ ಸಿದ್ಧಪಡಿಸಲಾಗಿದ್ದು, ಅದು ಹಲವಾರು ವಿಶೇಷತೆಗಳಿಂದ ಕೂಡಿದೆ. ಕೆಂಪೇಗೌಡರ ಅತಿ ಎತ್ತರದ ಪ್ರತಿಮೆ ಅನಾವರಣಗೊಳಿಸಲಿರುವ ಪ್ರಧಾನಿ ಅವರಿಗೆ ಅವರಿಗೆ ತೊಡಿಸಲಾಗುವ ಕೆಂಪೇಗೌಡ ಪೇಟವನ್ನು ಕೆಂಪೇಗೌಡರ ಪ್ರತಿಮೆಯಲ್ಲಿರುವ ಪೇಟದಂತೆಯೇ ವಿನ್ಯಾಸಗೊಳಿಸಲಾಗಿದೆ. ಮೈಸೂರಿನ ಕಲಾವಿದ ನಂದನ್ ಎಂಬುವವರು ಈ ಪೇಟವನ್ನು ತಯಾರಿಸಿದ್ದಾರೆ. ಪೇಟ ತಯಾರಿಕೆಗೆ ನಂದನ್ ಅವರು 10 ದಿನಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಬನಾರಸ್ ರೇಷ್ಮೆ ಬಳಸಿ ಪೇಟವನ್ನು ತಯಾರಿಸಲಾಗಿದೆ. ರೇಷ್ಮೆ, ಗರಿ, ಮುತ್ತುಗಳು ಸೇರಿ ಕುಸುರಿ ಕೆಲಸದಿಂದ ಕಂಗೊಳಿಸುತ್ತಿರುವ ಈ ಕೆಂಪುವರ್ಣದ ಪೇಟವನ್ನು ಪ್ರಧಾನಿ ಮೋದಿ ಅವರಿಗೆಂದೇ ಮೊದಲ ಬಾರಿಗೆ ವಿಶೇಷವಾಗಿ ಸಿದ್ಧಪಡಿಸಲಾಗಿದೆ.

PM Bangalore Visit: Prime Minister visit to Bangalore on November 11th: ‘Kempegowda Peta’ is ready to honour Modi

RELATED ARTICLES

Most Popular