The big twist : ಚಂದ್ರಶೇಖರ್‌ ನಿಗೂಢ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಕೊನೆಯ ಆ ಕರೆಯಲ್ಲಿತ್ತಾ ಸಾವಿನ ಸೀಕ್ರೆಟ್

ದಾವಣಗೆರೆ : (The big twist) ಹೊನ್ನಾಳಿ ಶಾಸಕ ಎಂ.ಪಿ,ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ಟೋಬರ್‌ 30ರಂದು ನಾಪತ್ತೆಯಾಗಿದ್ದ ಚಂದ್ರಶೇಖರ್‌ ನಾಲ್ಕು ದಿನಗಳ ನಂತರ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಚಂದ್ರಶೇಖರ್ ಸಾವಿನ ಪ್ರಕರಣ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ಆರಂಭಿಸಿರುವ ಪೊಲೀಸರಿಗೆ ಚಂದ್ರಶೇಖರ್ ಅವರ ಮೊಬೈಲ್ ನಿಂದ ಸ್ಪೋಟಕ ಮಾಹಿತಿ(The big twist)ಯೊಂದು ಲಭ್ಯವಾಗಿದೆ. ಚಂದ್ರಶೇಖರ್ ಆ ದಿನ ರಾತ್ರಿ ಒಂದೇ ವ್ಯಕ್ತಿಗೆ ಹತ್ತಕ್ಕೂ ಅಧಿಕ ಬಾರಿ ಕರೆ ಮಾಡಿರುವುದು ಅನುಮಾನವನ್ನು ಹುಟ್ಟುಹಾಕಿದೆ.

ಚಂದ್ರಶೇಖರ್ ನಿಗೂಢ ಸಾವು ಪ್ರಕರಣ ಕೊಲೆಯೋ, ಅಪಘಾತವೋ ಎಂಬ ಗೊಂದಲ ಮೂಡಿಸಿದೆ. ಚಂದ್ರಶೇಖರ್ ಟಾಪ್ ಎಂಡ್ ಕಾರು ಬಳಸುತ್ತಿದ್ದು, ಕಾರಿನಲ್ಲಿದ್ದ ಆರು ಏರ್ ಬ್ಯಾಗ್ ಗಳ ಪೈಕಿ ಎರಡು ಏರ್ ಬ್ಯಾಗ್ ಮಾತ್ರವೇ ಓಪನ್ ಆಗಿದೆ. ಅಲ್ಲದೇ ಒಂದು ಸೀಟ್ ಗೆ ಮಾತ್ರವೇ ಬೆಲ್ಟ್ ಹಾಕಲಾಗಿದೆ. ಒಂದು ಸೀಟ್ ಗೆ ಬೆಲ್ಟ್ ಹಾಕಿದ್ದರೂ ಕೂಡ ಮುಂಭಾಗದ ಎರಡು ಏರ್ ಬ್ಯಾಗ್ ಓಪನ್ ಆಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾವಿನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಕಾರು ತಜ್ಞರ ಮೊರೆ ಹೋಗಿದ್ದು, ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : Student’s mysterious death : ತರಗತಿಯಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು

ಚಂದ್ರಶೇಖರ್ ಗೌರಿಗದ್ದೆಯಿಂದ ವಾಪಾಸಾದ ನಂತರದಲ್ಲಿ ನಾಪತ್ತೆಯಾಗಿದ್ದರು. ಆದರೆ ನಾಪತ್ತೆಯಾಗಿರುವ ಅಕ್ಟೋಬರ್​ 30 ರಂದು ರಾತ್ರಿ 10 ಗಂಟೆಗೆ ಚಂದ್ರಶೇಖರ್‌ ಮೊಬೈಲ್ ಗೆ ಒಂದೇ ನಂಬರ್ ನಿಂದ ಸುಮಾರು 10 ಬಾರಿ ನಿರಂತರವಾಗಿ ಕರೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪ್ರದೇಶದಲ್ಲಿರುವ ಲೊಕೇಷನ್ ನಿಂದಲೇ ಕರೆ ಬಂದಿದೆ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರು ಮಾಹಿತಿಯನ್ನು ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ. ಅದ್ರಲ್ಲೂ ರಾತ್ರಿ ಚಂದ್ರಶೇಖರ್ ಗೆ ಕರೆ ಮಾಡಿರುವ ವ್ಯಕ್ತಿ ಚಂದ್ರಶೇಖರ್ ನ ಆಪ್ತ ಸ್ನೇಹಿತ ಸಂಜಯ್ ಎಂದು ತಿಳಿದು ಬಂದಿದೆ. ಆ ರಾತ್ರಿ ಸಂಜಯ್ ಅಷ್ಟು ಬಾರಿ ಚಂದ್ರಶೇಖರ್ ಗೆ ಕರೆ ಮಾಡಿದ್ದು ಯಾಕೆ ಅನ್ನುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ : Fridge Blast : ಪ್ರಿಡ್ಜ್ ಸ್ಪೋಟ ; ಮನೆಯಲ್ಲಿದ್ದ ಮೂವರು ಸಾವು , ಇಬ್ಬರಿಗೆ ಗಾಯ

ಇನ್ನು ಅಕ್ಟೋಬರ್‌ 30ರಂದು ರಾತ್ರಿ 11:30 ಗಂಟೆ ಸುಮಾರಿಗೆ ಚಂದ್ರಶೇಖರ್‌ ತನ್ನ ಸ್ನೇಹಿತನಾದ ಸಂಜಯ್‌ ಗೆ ಕರೆ ಮಾಡಿದ್ದರು. ತನ್ನನ್ನು ಶಿವಮೊಗ್ಗದಲ್ಲ ಚಂದ್ರಶೇಖರ್ ಸಂಜಯ್ ಬಳಿ ಭೇಟಿಯಾಗುವಂತೆ ಕೇಳಿಕೊಂಡಿದ್ದ. ಆದರೆ ತಾನು ಹೊರಗಡೆ ಇದ್ದೇನೆ. ಹೀಗಾಗಿ ಬರಲು ಆಗುವುದಿಲ್ಲ ಎಂದು ಸಂಜಯ್ ಹೇಳಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : A terrible road accident : ಭೀಕರ ರಸ್ತೆ ಅಪಘಾತ : 6 ಮಂದಿ ಸಾವು, ಮೂವರು ಗಂಭೀರ

ಈ ನಡುವಲ್ಲೇ ಶಾಸಕ ರೇಣುಕಾಚಾರ್ಯ ತನ್ನ ಸಹೋದರನ ಪುತ್ರನ ಸಾವಿನ ಕುರಿತು ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸರ ವಿರುದ್ದವೇ ಇದೀಗ ರೇಣುಕಾಚಾರ್ಯ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಚಂದ್ರೂ ಕಗ್ಗೊಲೆಯಾಗಿದ್ದು, ಈ ಬಗ್ಗೆ ನನ್ನ ಬಳಿಯಲ್ಲಿ ಪೂರಕ ದಾಖಲೆಗಳಿಗೆ. ಎಲ್ಲೋ ಒಂದು ಕಡೆ ಪೊಲೀಸ್ ವೈಫಲ್ಯವಾಗಿದೆ ಎಂದು ಆರೋಪಿಸಿದ್ದಾರೆ. ಚಂದ್ರು ಕಾರನ್ನು ಹುಡುಕಿದ್ದು ಪೊಲೀಸರು ಅಲ್ಲಾ, ನಮ್ಮ ಕಾರ್ಯಕರ್ತರು ನಾಲೆಯಲ್ಲಿ ಬಿದ್ದಿರುವ ಕಾರನ್ನು ಹುಡುಕಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಚಂದ್ರು ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

(The big twist) The death case of Honnali MLA MP, Renukacharya’s son Chandrasekhar has got a big twist. Chandrasekhar, who went missing on October 30, was found dead four days later. Chandrasekhar’s death case is now taking a turn. The police, who have started the investigation in all dimensions, got a big twist from Chandrasekhar’s mobile phone. The fact that Chandrasekhar called the same person more than ten times that night raises suspicions.

Comments are closed.