ಗುರುವಾರ, ಮೇ 1, 2025
HomeCorona UpdatesLockdown again in China : ಕೊರೊನಾ ಹೊಸ ಅಲೆಯ ಆರ್ಭಟ : ಚೀನಾದಲ್ಲಿ ಮತ್ತೆ...

Lockdown again in China : ಕೊರೊನಾ ಹೊಸ ಅಲೆಯ ಆರ್ಭಟ : ಚೀನಾದಲ್ಲಿ ಮತ್ತೆ ಲಾಕ್‌ಡೌನ್

- Advertisement -

ಬೀಜಿಂಗ್: (Lockdown again in China) ವಿಶ್ವವನ್ನೇ ಕೊರೊನಾ ಹೆಮ್ಮಾರಿಯಿಂದ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲೀಗ ಮತ್ತೆ ಕೋವಿಡ್ ಆತಂಕ ಶುರುವಾಗಿದೆ. ಕೆಂಪು ರಾಷ್ಟ್ರದಲ್ಲೀಗ ಕೊರೊನಾ ಹೊಸ ಅಲೆ ಆರ್ಭಟಿಸುತ್ತಿದ್ದು, ಶುಕ್ರವಾರ ಚೀನಾದಲ್ಲಿ 10,000ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಕೋವಿಡ್ ಸೋಂಕಿನ ಆರ್ಭಟ ಶುರುವಾಗುತ್ತಿದ್ದಂತೆಯೇ ಚೀನಾದಲ್ಲೀಗ ಲಾಕ್‌ಡೌನ್ ಘೋಷಿಸಲಾಗಿದೆ.

ಕೋವಿಡ್ ಸೋಂಕಿನಿಂದ ಪಾರಾಗುವ ನಿಟ್ಟಿನಲ್ಲಿ ಚೀನಾ ಕಟ್ಟುನಿಟ್ಟಿನ ಕ್ರಮ(Lockdown again in China)ಗಳನ್ನು ಕೈಗೊಳ್ಳುತ್ತಿದೆ. ಅದ್ರಲ್ಲೂ ಚೀನಾದ ಪ್ರಮುಖ ನಗರವಾಗಿರುವ ಬೀಜಿಂಗ್‌ನಲ್ಲಿ ಪ್ರತಿದಿನ 21 ಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಹೊಸ ಅಲೆ ಕಂಡು ಬಂದಿರುವ ಬಹುತೇಕರಲ್ಲಿ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಆದರೆ ಹೊಸ ಅಲೆ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ.

ಲಾಕ್‌ ಡೌನ್‌ನಿಂದಾಗಿ ಪಶ್ಚಿಮ ಚೀನಾದ ಚಾಂಗ್‌ಕಿಂಗ್ ಮತ್ತು ದಕ್ಷಿಣದ ಗುವಾಂಗ್‌ಝೌ ನಗರಗಳಲ್ಲಿ ಸುಮಾರು 50 ಲಕ್ಷ ಜನರು ಸಂಕಷ್ಟಕ್ಕೀಡಾಗಿದ್ದಾರೆ ಮತ್ತು ಅನೇಕ ನಗರಗಳಲ್ಲಿನ ಶಾಲೆಗಳು ಆನ್‌ಲೈನ್ ತರಗತಿಗಳಿಗೆ ಮೊರೆ ಹೋಗಿವೆ. ಅನೇಕ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಆಸ್ಪತ್ರೆಗಳಲ್ಲಿ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಅಂಗಡಿ ಮತ್ತು ಹೋಟೆಲ್‌ಗಳ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : Deadly virus: ಅಂದು ಕೊರೋನಾ.. ಈ ಬಾರಿ ಮತ್ತಷ್ಟು ಡೇಂಜರಸ್ ವೈರಸ್; ರಾವಲ್ಪಿಂಡಿಯಲ್ಲಿ ಕತ್ತಿ ಮಸೆಯುತ್ತಿವೆಯಂತೆ ಪಾಕ್, ಚೀನಾ ರಾಷ್ಟ್ರಗಳು

ಕೆಲವು ಪ್ರದೇಶಗಳಲ್ಲಿ ಲಾಕ್‌ ಡೌನ್‌ ಮಾಡಿರುವ ಕಾರಣ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತರೊಂದಿಗೆ ಜನರು ಜಗಳವಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ : China Lock down enforced : ಚೀನಾದಲ್ಲಿ ಸದ್ದಿಲ್ಲದೇ ಲಾಕ್ ಡೌನ್ ಜಾರಿ : ಮತ್ತೆ ಶುರುವಾಯ್ತು ಆತಂಕ

ಕೋವಿಡ್ ನಿಂದ ಚೀನಾದಲ್ಲಿ ಆರ್ಥಿಕ ಸಂಕಷ್ಟ :

ಕೋವಿಡ್ ವಿರುದ್ಧ ಚೀನಾದ ಶೂನ್ಯ ಸಹಿಷ್ಣುತೆಯ ನೀತಿಯಿಂದ ಸಾರ್ವಜನಿಕರು ನಿರಾಶೆಗೊಂಡಿದ್ದಾರೆ. ಲಕ್ಷಾಂತರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ. ಈ ಕುರಿತು ಗುರುವಾರ ಚೀನಾದ ರಾಜಕೀಯ ನಾಯಕರು ಸಭೆ ನಡೆಸಿದ್ದು, ವಾರಗಟ್ಟಲೆ ಕ್ವಾರಂಟೈನ್‌ನಲ್ಲಿರುವವರನ್ನು ಬಿಡುಗಡೆ ಮಾಡುವ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : oral Covid-19 vaccine : ಸೂಜಿಯೆಂದರೆ ಭಯಪಡುವವರಿಗೆ ಗುಡ್​ನ್ಯೂಸ್​ :ಚೀನಾದಲ್ಲಿ ಬಂದಿದೆ ಬಾಯಿಯಿಂದ ಹೀರುವ ಕೊರೊನಾ ಬೂಸ್ಟರ್​ ಡೋಸ್​

ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಪ್ರದೇಶಗಳಲ್ಲಿ ವ್ಯವಹಾರಗಳನ್ನು ಮುಚ್ಚಲಾಗುತ್ತಿದ್ದು, ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಚೇರಿ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು, ಜನರು ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ಕೋವಿಡ್‌ ನೆಗೆಟಿವ್‌ ವರದಿಯನ್ನು ತೋರಿಸಬೇಕು. ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಚೀನಾದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಶಾಲೆಗಳು, ಕೈಗಾರಿಕೆಗಳು ಮತ್ತು ಅಂಗಡಿಗಳನ್ನು ಏಕಾಏಕಿ ಮುಚ್ಚಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ

(Lockdown again in China) ವಿಶ್ವವನ್ನೇ ಕೊರೊನಾ ಹೆಮ್ಮಾರಿಯಿಂದ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲೀಗ ಮತ್ತೆ ಕೋವಿಡ್ ಆತಂಕ ಶುರುವಾಗಿದೆ. ಕೆಂಪು ರಾಷ್ಟ್ರದಲ್ಲೀಗ ಕೊರೊನಾ ಹೊಸ ಅಲೆ ಆರ್ಭಟಿಸುತ್ತಿದ್ದು, ಶುಕ್ರವಾರ ಚೀನಾದಲ್ಲಿ 10,000ಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. ಕೋವಿಡ್ ಸೋಂಕಿನ ಆರ್ಭಟ ಶುರುವಾಗುತ್ತಿದ್ದಂತೆಯೇ ಚೀನಾದಲ್ಲೀಗ ಲಾಕ್‌ಡೌನ್ ಘೋಷಿಸಲಾಗಿದೆ.

RELATED ARTICLES

Most Popular