Pakistan Vs England final : ಭಾರತವಿಲ್ಲದ ಟಿ20 ವಿಶ್ವಕಪ್ ಫೈನಲ್ ಹೇಗಿರಲಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೆಲ್ಬೋರ್ನ್: ನಾಳೆ (ಭಾನುವಾರ) ಐಸಿಸಿ ಟಿ20 ವಿಶ್ವಕಪ್ ಫೈನಲ್ (T20 World Cup 2022). 2009ರ ಚಾಂಪಿಯನ್ ಪಾಕಿಸ್ತಾನ ಮತ್ತು 2010ರ ಚಾಂಪಿಯನ್ ಇಂಗ್ಲೆಂಡ್ ತಂಡಗಳು ಎದುರಾಳಿಗಳು (Pakistan Vs England final). ಯಾರೇ ಗೆದ್ದರೂ 2ನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ.

ಈ ಬಾರಿಯ ಟಿ20 ವಿಶ್ವಕಪ್ ಫೈನಲ್’ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಪಾಕಿಸ್ತಾನ ತಂಡ ನ್ಯೂಜಿಲೆಂಡನ್ನು ಸೋಲಿಸಿ ಫೈನಲ್ ತಲುಪಿದ ನಂತರ ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಮತ್ತೊಂದು ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿದ್ದ ಭಾರತದ ಫೈನಲ್ ಕನಸು ನುಚ್ಚು ನೂರಾಗಿತ್ತು.

ಇದೀಗ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳ ಮಧ್ಯೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ರೋಚಕ ಫೈನಲ್’ಗೆ ವೇದಿಕೆ ಸಜ್ಜಾಗಿದೆ. ಫೈನಲ್ ಪಂದ್ಯ ಸೂಪರ್ ಸಂಡೇ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. ಇದು 1992ರ ಏಕದಿನ ವಿಶ್ವಕಪ್ ಫೈನಲ್’ನ ಪುನರಾವರ್ತನೆಯೂ ಹೌದು. 1992ರ ವಿಶ್ವಕಪ್ ಫೈನಲ್’ನಲ್ಲೂ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ವಿಶೇಷವೆಂದರೆ ಆ ಫೈನಲ್ ಪಂದ್ಯಕ್ಕೂ ಆತಿಥೇಯ ವಹಿಸಿದ್ದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್. ಫೈನಲ್’ನಲ್ಲಿ ಇಂಗ್ಲೆಂಡ್ ತಂಡವನ್ನು 22 ರನ್’ಗಳಿಂದ ಸೋಲಿಸಿದ್ದ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಬಾರಿ ಪಾಕಿಸ್ತಾನ ಅದೇ ಫಲಿತಾಂಶದ ನಿರೀಕ್ಷೆಯಲ್ಲಿದ್ರೆ, ಇಂಗ್ಲೆಂಡ್ 30 ವರ್ಷಗಳ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಮಳೆಯ ಭೀತಿ ಎದುರಾಗಿದೆ. ಹವಾಮಾನ ವರದಿಯ ಪ್ರಕಾರ ಮೆಲ್ಬೋರ್ನ್’ನಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದ ಪಂದ್ಯ ನಡೆಯಲು ಸಾಧ್ಯವಾಗದಿದ್ದರೆ, ಪಂದ್ಯ ಮೀಸಲು ದಿನವಾದ ಸೋಮವಾರ ನಡೆಯಲಿದೆ. ಸೋಮವಾರವೂ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಎರಡೂ ತಂಡಗಳನ್ನು ಜಂಟಿ ವಿಜೇತರು (Joint winners) ಎಂದು ಘೋಷಿಸಲಾಗುತ್ತದೆ.

ಪಾಕಿಸ್ತಾನ Vs ಇಂಗ್ಲೆಂಡ್ ಫೈನಲ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಪಾಕಿಸ್ತಾನದ ಫೈನಲ್ ಹಾದಿ
ಮೊದಲ ಪಂದ್ಯ: ಭಾರತ ವಿರುದ್ಧ 4 ವಿಕೆಟ್ ಸೋಲು
2ನೇ ಪಂದ್ಯ: ಜಿಂಬಾಬ್ವೆ ವಿರುದ್ಧ 2 ರನ್ ಸೋಲು
3ನೇ ಪಂದ್ಯ: ನೆದರ್ಲೆಂಡ್ಸ್ ವಿರುದ್ಧ 6 ವಿಕೆಟ್ ಗೆಲುವು
4ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ ಗೆಲುವು
5ನೇ ಪಂದ್ಯ: ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಗೆಲುವು
ಸೆಮಿಫೈನಲ್: ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಗೆಲುವು

ಇದನ್ನೂ ಓದಿ : Yuzvendra Chahal: ಭಾರತದ ನಂ.1 ಟಿ20 ಸ್ಪಿನ್ನರ್‌ಗೆ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಇಲ್ಲ..!

ಇದನ್ನೂ ಓದಿ : T20 World Cup 2022 : ಟೀಮ್ ಇಂಡಿಯಾದ ಟಿ20 ವಿಶ್ವಕಪ್ ವೈಫಲ್ಯದ ಹಿಂದಿನ ಅಸಲಿ ಕಥೆ..!

ಇದನ್ನೂ ಓದಿ : T20 World Cup 2022 : ವಿಶ್ವಕಪ್‌ ಫೈನಲ್‌ ರದ್ದಾಗುತ್ತಾ? ಟ್ರೋಫಿ ಹಂಚಿಕೊಳ್ತಾರಾ ಇಂಗ್ಲೆಂಡ್ – ಪಾಕಿಸ್ತಾನ

ಇಂಗ್ಲೆಂಡ್’ನ ಫೈನಲ್ ಹಾದಿ
ಮೊದಲ ಪಂದ್ಯ: ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್ ಗೆಲುವು
2ನೇ ಪಂದ್ಯ: ಐರ್ಲೆಂಡ್ ವಿರುದ್ಧ 5 ರನ್ ಸೋಲು (DLS ನಿಯಮದನ್ವಯ)
3ನೇ ಪಂದ್ಯ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮಳೆಯಿಂದ ರದ್ದು
4ನೇ ಪಂದ್ಯ: ನ್ಯೂಜಿಲೆಂಡ್ ವಿರುದ್ಧ 20 ರನ್ ಗೆಲುವು
5ನೇ ಪಂದ್ಯ: ಶ್ರೀಲಂಕಾ ವಿರುದ್ಧ 4 ವಿಕೆಟ್ ಗೆಲುವು
ಸೆಮಿಫೈನಲ್: ಭಾರತ ವಿರುದ್ಧ 10 ವಿಕೆಟ್ ಗೆಲುವು

Pakistan Vs England final: What will the T20 World Cup final be like without India? Here are complete details

Comments are closed.