ದಿನಬಳಕೆಯ ಅಗತ್ಯ ವಸ್ತುಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಕೂಡಾ ಒಂದು. ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳಿಗೂ ಶೀಘ್ರದಲ್ಲೇ ಕ್ಯೂಆರ್ ಕೋಡ್ (QR Codes) ಗಳು ಬರಲಿದೆ. ಇದು ಗೃಹಬಳಕೆಯ ಸಿಲಿಂಡರ್‌ಗಳ ಭದ್ರತೆ ಮತ್ತು ಕಳ್ಳತನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಬುಧವಾರ ಹೇಳಿದ್ದಾರೆ. ಕ್ವಿಕ್ ರೆಸ್ಪಾನ್ಸ್ ಕೋಡ್-ಆಧಾರಿತ ಟ್ರ್ಯಾಕ್ ಮತ್ತು ಟ್ರೇಸ್ ಸಾಧನವು ಕಳ್ಳತನದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಿಲಿಂಡರ್‌ಗಳ ದಾಸ್ತಾನು ನಿರ್ವಹಣೆಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ‘ವಿಶ್ವ ಎಲ್‌ಪಿಜಿ ವೀಕ್ 2022’ ಕಾರ್ಯಕ್ರಮದ ವೀಡಿಯೊದಲ್ಲಿ, ಕೇಂದ್ರ ಪೆಟ್ರೋಲಿಯಂ ಸಚಿವ ಪುರಿ ಅವರು ವಸ್ತುಗಳ ಮೇಲೆ ಲಗತ್ತಿಸಲಾದ ಕ್ಯೂಆರ್ ಕೋಡ್ ಬಗ್ಗೆ ಮತ್ತು ಅದನ್ನು ಓದಬಲ್ಲ ಆಪ್ಟಿಕಲ್ ಸಾಧನಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ಅದರ ಕಾರ್ಯಸಾಧ್ಯತೆಯ ಬಗ್ಗೆ ಮಾಹಿತಿ ಪಡೆದರು. ‘ಇಂಧನ ಪತ್ತೆಹಚ್ಚುವಿಕೆ!’ ಅಸಾಧಾರಣ ಆವಿಷ್ಕಾರವಾದ ಈ ಕ್ಯೂಆರ್ ಕೋಡ್ ಅನ್ನು ಅಸ್ತಿತ್ವದಲ್ಲಿರುವ ಸಿಲಿಂಡರ್‌ಗಳಲ್ಲಿ ಅಂಟಿಸಲಾಗುವುದು ಮತ್ತು ಹೊಸ ಸಿಲಿಂಡರ್‌ಗಳಿಗೆ ಬೆಸುಗೆ ಹಾಕಲಾಗುವುದು. ಕ್ಯೂಆರ್ ಕೋಡ್ ಅನ್ನು ಸಕ್ರಿಯಗೊಳಿಸಿದಾಗ ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ಮತ್ತು ಉತ್ತಮ ದಾಸ್ತಾನು ನಿರ್ವಹಣೆ ಮುಂತಾದ ಅಸ್ತಿತ್ವದಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Fueling Traceability!
— Hardeep Singh Puri (@HardeepSPuri) November 16, 2022
A remarkable innovation – this QR Code will be pasted on existing cylinders & welded on new ones – when activated it has the potential to resolve several existing issues of pilferage, tracking & tracing & better inventory management of gas cylinders. pic.twitter.com/7y4Ymsk39K
ಇದನ್ನೂ ಓದಿ : NRI Aadhaar Card : NRI ಆಧಾರ್ ನೋಂದಾಯಿಸಲು ಅರ್ಹರೇ ? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಧ್ಯಮಗಳ ವರದಿಯ ಪ್ರಕಾರ, ಮೊದಲ ಬ್ಯಾಚ್‌ನ 20,000 ಎಲ್‌ಪಿಜಿಗೆ ಕ್ಯೂಆರ್ ಕೋಡ್‌ಗಳನ್ನು ನೀಡಲಾಗಿದೆ ಮತ್ತು ಮುಂದಿನ ತಿಂಗಳುಗಳಲ್ಲಿ 14.2 ಕೆಜಿಯ ಎಲ್ಲಾ ಗೃಹಬಳಕೆಯ ಸಿಲಿಂಡರ್‌ಗಳಿಗೆ ಕೋಡ್ ಅಳವಡಿಸಲಾಗುವುದು. ಕ್ಯೂಆರ್ ಕೋಡ್ ಕಳ್ಳತನದ ಸಮಸ್ಯೆಗಳನ್ನು ಎದುರಿಸಲು ಮತ್ತು ಸಿಲಿಂಡರ್‌ಗಳಿಗೆ ಭದ್ರತೆಯನ್ನು ಒದಗಿಸಲು ಸಹಾಯಮಾಡುವುದು. ಇದು ಸಿಲಿಂಡರ್‌ಗಳ ಸುರಕ್ಷತಾ ಪರೀಕ್ಷೆಗಳ ಬಗ್ಗೆ ಮಾಹಿತಿ ಮತ್ತು ತಯಾರಾದ ಸ್ಥಳ ವನ್ನು ಹೊಂದಿರುತ್ತದೆ. ಜೊತೆಗೆ ಗ್ರಾಹಕ ಸೇವೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಇತರ ವಿಷಯಗಳನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ಅವರು ಕೈಗೆಟುಕುವ ಮತ್ತು ಶುದ್ಧ ಇಂಧನದ ಬಗ್ಗೆ ಮಾತನಾಡಿದರು. ಎಲ್‌ಪಿಜಿ ಶಕ್ತಿ ಮಿಶ್ರಣ, ದಕ್ಷತೆ, ಸಂರಕ್ಷಣೆ, ಬಯೋ ಎಲ್‌ಪಿಜಿ, ಸಿಂಥೆಟಿಕ್ ಎಲ್‌ಪಿಜಿ ಮುಂತಾದವುಗಳಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸುವುದು ಅನುಕೂಲಕರ ಬೆಳವಣಿಗೆಯಾಗಿದೆ. ಇದು ಹವಾಮಾನ ಬದಲಾವಣೆಯ ಹೋರಾಟದ ಕಡೆಗೆ ಪ್ರಗತಿ ಸಾಧಿಸುವುಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ : Aadhar Card Renewal : ಆಧಾರ್ ಕಾರ್ಡ್ ಮಾಡಿಸಿ 10 ವರ್ಷ ಕಳೆದಿದ್ಯಾ ? ಹಾಗಾದ್ರೆ ಈ ಸ್ಟೋರಿ ತಪ್ಪದೇ ಓದಿ
(QR Codes on domestic LPG cylinders soon, to track and trace and better inventory management of cylinders)