Team India players in Beach : ವೆಲ್ಲಿಂಗ್ಟನ್ ಬೀಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ “ಬಾಡಿ” ಪ್ರದರ್ಶನ, ವೀಡಿಯೊ ವೈರಲ್

ವೆಲ್ಲಿಂಗ್ಟನ್ : ಈಗಿನ ಕ್ರಿಕೆಟಿಗರು ಆಟಕ್ಕೆಷ್ಟು ಮಹತ್ವ ನೀಡುತ್ತಾರೋ, ಫಿಟ್ನೆಸ್’ಗೂ ಅಷ್ಟೇ ಇಂಪಾರ್ಟೆನ್ಸ್ ನೀಡುತ್ತಾರೆ. (Team India players in Beach) ಟೀಮ್ ಇಂಡಿಯಾದ ಆಟಗಾರರಲ್ಲಿ ಒಂದಿಬ್ಬರನ್ನು ಹೊರತು ಪಡಿಸಿದರೆ ಉಳಿದೆಲ್ಲರೂ ಅದ್ಭುತ ಫಿಟ್ನೆಸ್ ಹೊಂದಿದ್ದಾರೆ. ಬಾಲಿವುಡ್ ನಟರನ್ನೂ ಮೀರಿಸುವ ದೈಹಿಕ ಸೌಂದರ್ಯ ಹೊಂದಿದ್ದಾರೆ.


ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಕಿವೀಸ್ ನಾಡಿನಲ್ಲಿರುವ ಟೀಮ್ ಇಂಡಿಯಾ ಆಟಗಾರರು ವೆಲ್ಲಿಂಗ್ಟನ್ ಬೀಚ್’ನಲ್ಲಿ ಬಾಡಿ ಪ್ರದರ್ಶನ ಮಾಡಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ, ಮಧ್ಯಮ ಕ್ರಮಾಂಕದ ದಾಂಡಿಗ ಶ್ರೇಯಸ್ ಅಯ್ಯರ್, ಶರವೇಗದ ಸರದಾರ ಉಮ್ರಾನ್ ಮಲಿಕ್, ಸ್ವಿಂಗ್ ಬೌಲರ್ ಅರ್ಷದೀಪ್ ಸಿಂಗ್ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ವೆಲ್ಲಿಂಗ್ಟನ್ ಬಳಿಯಿರುವ ಸಮುದ್ರದಲ್ಲಿ ಬುಧವಾರ ಒಂದಷ್ಟು ಹೊತ್ತು ಟೈಂಪಾಸ್ ಮಾಡಿದ್ದಾರೆ. ಟೀಮ್ ಇಂಡಿಯಾ ಸಹ ಆಟಗಾರರ ಜೊತೆ ಸಮುದ್ರ ತಟದಲ್ಲಿ ನಡೆದುಕೊಂಡು ಬರುತ್ತಿರುವ ವೀಡಿಯೊವನ್ನು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/reel/ClAuvjVg20-/?utm_source=ig_web_copy_link

ಕಿವೀಸ್ ನಾಡಿನಲ್ಲಿ ಟೀಮ್ ಇಂಡಿಯಾ ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ಸರಣಿಯಲ್ಲಿ (India Vs New Zeeland T20 series) ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವ ವಹಿಸಿದ್ರೆ, ಏಕದಿನ ಸರಣಿಯಲ್ಲಿ ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಮೊದಲು ಟಿ20 ಸರಣಿ ನಡೆಯಲಿದ್ದು, ಮೊದಲ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್’ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಲಿದೆ.


ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಕೆ.ಎಲ್ ರಾಹುಲ್ ಅವರಿಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿರುವ ಕಾರಣ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯ ನೇರಪ್ರಸಾರ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ (DD Sports) ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಅಥವಾ ಸೋನಿ ನೆಟ್ವರ್ಕ್ ನೇರಪ್ರಸಾರದ ಹಕ್ಕನ್ನು ಪಡೆದಿರದ ಕಾರಣ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್’ನಲ್ಲಿ ಮಾತ್ರ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಓಟಿಟಿಯಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸರಣಿಯ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ.

ಭಾರತ Vs ನ್ಯೂಜಿಲೆಂಡ್ ಮೊದಲ ಟಿ20 :
ಪಂದ್ಯ ಆರಂಭ: ಮಧ್ಯಾಹ್ನ 12.00 (ಭಾರತೀಯ ಕಾಲಮಾನ)
ಸ್ಥಳ: ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್ (Sky stadium, Wellington)
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್ (DD Sports), ಅಮೆಜಾನ್ ಪ್ರೈಮ್ ವೀಡಿಯೊ (Amazon Prime video)

ಇದನ್ನೂ ಓದಿ : India Vs NZ T20 Series: ನಾಳೆಯಿಂದ ಭಾರತ Vs ನ್ಯೂಜಿಲೆಂಜ್ ಟಿ20 ಸರಣಿ: ಒಂದೇ ಕ್ಲಿಕ್‌ನಲ್ಲಿ Live ಟೆಲಿಕಾಸ್ಟ್, ಪ್ಲೇಯಿಂಗ್ XI ಸಹಿತ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Dabang Delhi : ಹಾಲಿ ಚಾಂಪಿಯನ್ಸ್ ಡೆಲ್ಲಿಗೆ 8ನೇ ಸೋಲು, ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿತ

ಇದನ್ನೂ ಓದಿ : India vs New Zeeland : “ಮೊಸಳೆ ಬೈಕ್”ನಲ್ಲಿ ಬಂದು ಟ್ರೋಫಿ ಅನಾವರಣ ಮಾಡಿದ ಪಾಂಡ್ಯ, ವಿಲಿಯಮ್ಸನ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI :
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್/ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್.

Team India players in Beach: “Body” display of Team India players in Wellington Beach, video goes viral

Comments are closed.