Mission Majnu: ಥಿಯೇಟರ್ ನಲ್ಲಿ ರಿಲೀಸ್‌ ಆಗುತ್ತಿಲ್ಲ “ಮಿಷನ್‌ ಮಜ್ನು” ಚಿತ್ರ:‌ ಬಾಲಿವುಡ್‌ ನಲ್ಲಿ ರಶ್ಮಿಕಾಗೆ ಮತ್ತೊಂದು ಹಿನ್ನಡೆ

(Mission Majnu) ತೆಲುಗು, ತಮಿಳು ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ಯಶಸ್ಸನ್ನು ಗಳಿಸಿದ್ದರು. ಅಲ್ಲದೇ ಬಾಲಿವುಡ್‌ ಸಿನಿಮಾಗಳಿಗೂ ಸಹಿ ಮಾಡಿದ್ದರು. ಆದರೆ ಬಾಲಿವುಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನಿರೀಕ್ಷೆಯ ಮಟ್ಟದಲ್ಲಿ ಗೆಲುವು ಸಿಗದಿರುವುದು ಮತ್ತೊಂದು ಹಿನ್ನಡೆಯಾಗಿದೆ. ರಶ್ಮಿಕಾ ಅವರ ಮೊದಲ ಬಾಲಿವುಡ್‌ ಚಿತ್ರ “ಗುಡ್‌ ಬೈ” ಕೂಡ ಅಷ್ಟೊಂದು ಹಿಟ್‌ ಆಗಲಿಲ್ಲ. ಇದೀಗ ಮುಂದಿನ ಚಿತ್ರ “ಮಿಷನ್‌ ಮಜ್ನು” ತೆರೆಗೆ ಬರಲು ಸಜ್ಜಾಗಲಿದ್ದು , ಅಭಿಮಾನಿಗಳು ಚಿತ್ರದ ರಿಲೀಸ್‌ ಗೆ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಸಿನಿಮಾ ಥಿಯೇಟರ್‌ ಗಳಲ್ಲಿ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿದ್ದು ನೇರವಾಗಿ ಒಟಿಟಿ ಅಂಗಳಕ್ಕೆ ಕಾಲಿಡಲಿದೆ ಎಂದು ಪಿಂಕ್‌ ವಿಲ್ಲಾ ವರದಿ ಮಾಡಿದೆ.

2022ರ ಜೂನ್ ತಿಂಗಳಲ್ಲೇ “ಮಿಷನ್‌ ಮಜ್ನು”(Mission Majnu) ಚಿತ್ರವನ್ನು ರಿಲೀಸ್​ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಈ ಚಿತ್ರದ ಕೆಲಸಗಳು ತಡವಾಗಿದ್ದವು. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ “ಮಿಷನ್‌ ಮಜ್ನು” ಚಿತ್ರವು ರಶ್ಮಿಕಾ ಅವರ ಮೊದಲ ಬಾಲಿವುಡ್‌ ಚಿತ್ರವಾಗಿ ಹೊರಹೊಮ್ಮುತ್ತಿತ್ತು. ಆದರೆ ಈಗ ಚಿತ್ರಮಂದಿರಗಳಲ್ಲಿ ಕೂಡ “ಮಿಷನ್‌ ಮಜ್ನು” ಚಿತ್ರ ಬಿಡುಗಡೆ ಆಗುವುದಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದು, ಅಭಿಮಾನಿಗಳಿಗೆ ಈ ವಿಚಾರ ಬೇಸರ ಮೂಡಿಸಿದೆ.

ಈ ಚಿತ್ರದಲ್ಲಿ ಖ್ಯಾತ ನಟ ಮಲ್ಹೋತ್ರಾ ಅವರು ನಾಯಕ ನಟನಾಗಿದ್ದು, ಅವರಿಗೆ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವು ಶಾಂತನು ಬಾಗ್ವಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ರಶ್ಮಿಕಾ ನಟನೆಯ ಮೊದಲ ಬಾಲಿವುಡ್‌ ಚಿತ್ರ ” ಗುಡ್‌ ಬೈ” ಚಿತ್ರಮಂದಿರಗಳಲ್ಲಿ ಸಾಕಷ್ಟು ಯಶಸ್ಸನ್ನು ಕಾಣಲಿಲ್ಲ. ಸಿದ್ದಾರ್ಥ್‌ ಮಲ್ಹೋತ್ರಾ ಅವರ “ಥ್ಯಾಂಕ್‌ ಗಾಡ್‌” ಚಿತ್ರವು ಕೂಡ ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣಲಿಲ್ಲ. ಈ ವಿಷಯಗಳನ್ನು ಗಮನಿಸಿದ ಚಿತ್ರತಂಡವು “ಮಿಷನ್‌ ಮಜ್ನು” ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ : Tamannaah marriage: ಟಾಲಿವುಡ್ ಅಂಗಳದಲ್ಲಿ ‘ಬಾಹುಬಲಿ ಬೆಡಗಿ’ಯ ಮದುವೆಯದ್ದೇ ಸುದ್ದಿ; ಇವರ ಜೊತೆ ಹಸೆಮಣೆ ಏರಲಿದ್ದಾರಂತೆ ಮಿಲ್ಕಿ ಬ್ಯೂಟಿ

ಇದನ್ನೂ ಓದಿ : Swathi Muttina Male Haniye: ರಮ್ಯಾ ನಿರ್ಮಾಣದ ಮೊದಲ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ಶೂಟಿಂಗ್‌ ಕಂಪ್ಲೀಟ್‌

ಪಿಂಕ್‌ ವಿಲ್ಲಾ ವರದಿಯ ಪ್ರಕಾರ ಮಿಷನ್‌ ಮಜ್ನು ಚಿತ್ರವು 2023ರ ಜನವರಿ 18ರಂದು ನೇರವಾಗಿ ನೆಟ್‌ ಫ್ಲಿಕ್ಸ್‌ ಮೂಲಕ ಬಿಡುಗಡೆಯಾಗಲಿದೆ. ನಿರ್ಮಾಪಕರಿಂದ ಅಧಿಕೃತವಾಗಿ ಮಾಹಿತಿ ಬರುವುದಷ್ಟೇ ಬಾಕಿಯಿದೆ ಎನ್ನಲಾಗುತ್ತಿದೆ.

ನೈಜ ಘಟನೆಗಳನ್ನಾದರಿಸಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕೆಲವು ತಿಂಗಳುಗಳ ಹಿಂದೆಯೇ ಚಿತ್ರೀಕರಣ ಮುಗಿದಿತ್ತು. ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದ ಕೆಲಸಗಳು ನಡೆಯುತ್ತಿದ್ದು, ಜನವರಿಯಲ್ಲಿ ಒಟಿಟಿ ಅಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

(Mission Majnu) Actress Rashmika Mandanna was very successful in Telugu and Tamil film industry. He also signed Bollywood movies. But Rashmika Mandanna not getting the expected victory in Bollywood is another setback. Even Rashmika’s first Bollywood film “Goodbye” was not a big hit.

Comments are closed.