ಸೋಮವಾರ, ಜೂನ್ 16, 2025
HomeSportsCricketIPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

IPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

- Advertisement -

ಬೆಂಗಳೂರು: ಐಪಿಎಲ್ (IPL 2023) 2023ರ ಟೂರ್ನಿಗೆ ಆಟಗಾರರ ಹರಾಜು (IPL Auction 2023) ಪ್ರಕ್ರಿಯೆ ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, ಒಟ್ಚು 991 ಆಟಗಾರರು ಹರಾಜು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. 991 ಮಂದಿ ಆಟಗಾರರಲ್ಲಿ 774 ಮಂದಿ ಭಾರತೀಯರಾಗಿದ್ದು, ಉಳಿದ 277 ಮಂದಿ ವಿದೇಶಿ ಆಟಗಾರರಾಗಿದ್ದಾರೆ.

ಭಾರತ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ 19 ಮಂದಿ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ 166 ಆಟಗಾರರು ಐಪಿಎಲ್ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ವಿದೇಶೀ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದಿಂದ ಅತೀ ಹೆಚ್ಚು 52 ಆಟಗಾರರು ಐಪಿಎಲ್ ಹರಾಜು ಪಟ್ಟಿಯಲ್ಲಿದ್ದಾರೆ.

IPL Auction 2023 : ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಒಟ್ಟು ಆಟಗಾರು:

ಭಾರತ: 774
ಅಫ್ಘಾನಿಸ್ತಾನ: 14
ಆಸ್ಟ್ರೇಲಿಯಾ: 57
ಬಾಂಗ್ಲಾದೇಶ: 06
ಇಂಗ್ಲೆಂಡ್: 31
ಐರ್ಲೆಂಡ್: 08
ನಮೀಬಿಯಾ: 05
ನೆದರ್ಲೆಂಡ್ಸ್: 07
ನ್ಯೂಜಿಲೆಂಡ್: 27
ಸ್ಕಾಟ್ಲೆಂಡ್: 02
ದಕ್ಷಿಣ ಆಫ್ರಿಕಾ: 52
ಶ್ರೀಲಂಕಾ: 23
ಯುಎಇ: 06
ವೆಸ್ಟ್ ಇಂಡೀಸ್: 33
ಜಿಂಬಾಬ್ವೆ: 06

IPL 2022 ಹರಾಜು ಆಟಗಾರರ ಮಾರಾಟವಾಗದ ಪಟ್ಟಿ:

ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಆದಿಲ್ ರಶೀದ್, ಮುಜೀಬ್ ಜದ್ರಾನ್, ಇಮ್ರಾನ್ ತಾಹಿರ್, ಆಡಮ್ ಝಂಪಾ, ಅಮಿತ್ ಮಿಶ್ರಾ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ವಿಷ್ಣು ಸೋಲಂಕಿ, ಎಂ ಸಿದ್ಧಾರ್ಥ್, ಸಂದೀಪ್ ಲಮಿಚಾನೆ, ಚೇತೇಶ್ವರ ಪೂಜಾರ, ಡೇವಿಡ್ ಮಲನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಇಯಾನ್ ಮಾರ್ಗನ್, ಆರನ್ ಫಿಂಚ್, ಸೌರಭ್ ತಿವಾರಿ, ಇಶಾಂತ್ ಶರ್ಮಾ, ಶೆಲ್ಡನ್ ಕಾಟ್ರೆಲ್, ತಬ್ರೈಜ್ ಶಮ್ಸಿ, ಕೈಸ್ ಅಹ್ಮದ್, ಇಶ್ ಸೋಧಿ, ವಿರಾಟ್ ಸಿಂಗ್, ಸಚಿನ್ ಬೇಬಿ, ಹಿಮ್ಮತ್ ಸಿಂಗ್, ಹರ್ನೂರ್ ಸಿಂಗ್, ರಿಕಿ ಭುಯಿ, ವಿಕಿ ಓಸ್ಟ್ವಾಲ್, ವಾಸು ವತ್ಸ್, ಅರ್ಜಾನ್ ನಾಗ್ವಾಸ್ವಾಲ್ಲಾ, ಯಶ್ ಠಾಕೂರ್, ಆಕಾಶ್ ಸಿಂಗ್, ಮುಜ್ತಬಾ ಯೂಸುಫ್,ಚರಿತ್ ಅಸಲಂಕಾ, ಜಾರ್ಜ್ ಗಾರ್ಟನ್, ಬೆನ್ ಮೆಕ್ಡರ್ಮಾಟ್, ರಹಮಾನುಲ್ಲಾ ಗುರ್ಬಾಜ್, ಸಮೀರ್ ರಿಜ್ವಿ, ತನ್ಮಯ್ ಅಗರ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂದೀಪ್ ವಾರಿಯರ್, ರೀಸ್ ಟೋಪ್ಲಿ, ಆಂಡ್ರ್ಯೂ ಟೈ, ಪ್ರಶಾಂತ್ ಚೋಪ್ರಾ, ಪಂಕಜ್ ಜೈಸ್ವಾಲ್, ಯುವರಾಜ್ ಚುಡಾಸಮ, ಅಪೂರ್ವ್ ವಾಂಖೆಡೆ, ಅಥರ್ವ ಅಂಕೋಲೇಕರ್, ಮಿಧುನ್ ಸುಧೇಶನ್, ಪಂಕಜ್ ಜಸ್ವಾಲ್, ಬೆನ್ ದ್ವಾರ್ಶುಯಿಸ್, ಮಾರ್ಟಿನ್ ಗಪ್ಟಿಲ್, ಬೆನ್ ಕಟಿಂಗ್, ರೋಸ್ಟನ್ ಚೇಸ್, ಪವನ್ ನೇಗಿ, ಧವಳ್ ಕುಲಕರ್ಣಿ, ಕೇನ್ ರಿಚರ್ಡ್ಸನ್, ಲಾರಿ ಇವಾನ್ಸ್, ಕೆನ್ನಾರ್ ಲೆವಿಸ್, ಬಿ ಆರ್ ಶರತ್, ಹೇಡನ್ ಕೆರ್, ಶಮ್ಸ್ ಮುಲಾನಿ, ಸೌರಭ್ ಕುಮಾರ್, ಧ್ರುವ ಪಟೇಲ್, ಅತಿತ್ ಶೇತ್, ಡೇವಿಡ್ ವೈಸ್, ಸುಶಾಂತ್ ಮಿಶ್ರಾ, ಮುಜರಬಾನಿ ಆಶೀರ್ವಾದ, ಕೌಶಲ್ ತಾಂಬೆ, ನಿನಾದ್ ರತ್ವ, ಅಮಿತ್ ಅಲಿ, ಅಶುತೋಷ್ ಶರ್ಮಾ, ಖಿಜರ್ ದಫೇದಾರ್, ರೋಹನ್ ರಾಣಾ.

ಇದನ್ನೂ ಓದಿ : Harris Rauf Virat Kohli : ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿ.. ಪಾಂಡ್ಯ, ಡಿಕೆ ಅಲ್ಲ” ಪಾಕ್ ವೇಗಿ ಹ್ಯಾರಿಸ್ ರೌಫ್ ಹೀಗಂದರೇಕೆ?

ಇದನ್ನೂ ಓದಿ : Vijay Hazare Trophy Karnataka Team : ಮತ್ತೊಂದು ಟೂರ್ನಿ, ಮತ್ತೊಂದು ವೈಫಲ್ಯ; ಕರ್ನಾಟಕದ ಸೋಲಿಗೆ ಕೊನೆಯೇ ಇಲ್ಲ

IPL Auction 2023 for December 23 Total 991 Players, 774 Indians

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular