MODI ROAD SHOW : ದಾಖಲೆ ಬರೆದ ಪ್ರಧಾನಿ ಮೋದಿ ಮೆಗಾ ರೋಡ್ ಶೋ.. 50 ಕಿ.ಮೀ 16 ಕ್ಷೇತ್ರ ಕವರ್

ಅಹಮದಾಬಾದ್ : MODI ROAD SHOW ಗುಜರಾತ್ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಡಿಸೆಂಬರ್ 1 ರಂದು ಮುಕ್ತಾಯವಾಗಿದ್ದು, ಮೊದಲ ಹಂತದಲ್ಲಿ 89 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆದ್ರೆ ಮೊದಲ ಹಂತದ ಮತದಾನ ಮುಕ್ತಾಯವಾದ ಕೆಲ ಹೊತ್ತಿನಲ್ಲೇ ಪ್ರಧಾನಿ ಮೋದಿ ಗುಜರಾತ್ ನಲ್ಲಿ ನಡೆಸಿದ ಮೆಗಾ ರೋಡ್ ಶೋ ಈಗ ಸದ್ದು ಮಾಡುತ್ತಿರುವುದರ ಜೊತೆಗೆ ದಾಖಲೆಯನ್ನೂ ಬರೆದಿದೆ ಅಂತಾ ಹೇಳಲಾಗಿದೆ.

ಗುಜರಾತ್ ವಿಧಾನಸಭೆಯ ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಹೀಗಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ನಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಒಟ್ಟು 50 ಕಿ.ಮೀ ದೂರ ಕ್ರಮಿಸಿರುವ ಈ ‘ಮೆಗಾ ರೋಡ್ ಶೋ’, ದೇಶದ ರಾಜಕೀಯ ಇತಿಹಾಸದಲ್ಲೇ ನಾಯಕರೊಬ್ಬರು ಕೈಗೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಮೆಗಾ ರೋಡ್ ಶೋ’ನಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ 16 ಕ್ಷೇತ್ರಗಳು ಬರುತ್ತವೆ. ನರೋಡಾ ಗಾಮ್‌ನಿಂದ ಆರಂಭವಾದ ಈ ‘ಮೆಗಾ ರೋಡ್ ಶೋ’, ಥಕ್ಕರ್‌ಬಾಪನಗರ, ಬಾಪುನಗರ್, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್‌ಪುರ್ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಲ್‌ಪುರ್, ಘಟ್ಲೋಡಿಯಾ, ನರನ್‌ಪುರ್ ಮತ್ತು ಸಬರಮತಿ ಸೇರಿದಂತೆ‌ ಒಟ್ಟು 16 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ.

ನರೋಡಾ ಗಾಮ್ ನಿಂದ ಪ್ರಾರಂಭವಾದ ಪ್ರಧಾನಿ ನರೇಂದ್ರ ಮೋದಿ ಅವರ 50 ಕಿ.ಮೀ ವ್ಯಾಪ್ತಿಯ ರೋಡ್ ಶೋ ಗಾಂಧಿನಗರದಲ್ಲಿ ಅಂತ್ಯಗೊಂಡಿತು. ಸತತ 4 ಗಂಟೆಗಳ ಕಾಲ ಈ ರೋಡ್ ಶೋ ನಡೆದಿದೆ. ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಈ ಸುದೀರ್ಘ ಯಾತ್ರೆಯಲ್ಲಿ ಸಂಚರಿಸುತ್ತಿದ್ದಾರೆ. ಸಾವಿರಾರು ಬಿಜೆಪಿ ಖಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಈ ರೋಡ್‌ನಲ್ಲಿ ಭಾಗವಹಿಸಿದ್ದಾರೆ. ಇದು ಭಾರತೀಯ ರಾಜಕೀಯ ನಾಯಕರೊಬ್ಬರು ಹಮ್ಮಿಕೊಂಡ ಅತ್ಯಂತ ಬೃಹತ್‌ ರೋಡ್‌ ಶೋ ಎಂದು ಬಿಜೆಪಿ ಹೇಳಿದ್ದು, ದಾರಿಯಲ್ಲಿ ಸಿಗುವ ಪಂಡಿತ್ ದೀನದಯಾಳ್ ಉಪಾಧ್ಯಾಯ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳಿಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿದ್ದಾರೆ.

ಬಿಜೆಪಿ ಸತತ 27 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಪ್ರತಿಬಾರಿಯ ಚುನಾವಣೆಯಲ್ಲೂ ಅದರ ಒಟ್ಟು ಸೀಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ ಈ ಬಾರಿ 140 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಈ ಬಾರಿ ಕಣಕ್ಕಿಳಿದಿದೆ. 2017ರಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದ್ದರೆ, ಕಾಂಗ್ರೆಸ್‌ 77 ಸ್ಥಾನಗಳನ್ನು ಪಡೆದು ಪ್ರತಿಪಕ್ಷ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು. ಪ್ರಧಾನಿ ಮೋದಿ ಇದುವರೆಗೆ ಗುಜರಾತ್‌ನಲ್ಲಿ 20 ಬಿಜೆಪಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎರಡನೇ ಹಂತದ ಮತದಾನಕ್ಕೂ ಮುಂಚೆ ಪ್ರಧಾನಿ ಮೋದಿ ಏಳು ಕಡೆ ಬಿಜೆಪಿ ಚುನಾವಣಾ ಸಭೆಗಳನ್ನು ನಡೆಸಲಿದ್ದಾರೆ.

ಆಂಬ್ಯುಲೆನ್ಸ್ ಗೆ ದಾರಿ : ಇಷ್ಟೊಂದು ದೊಡ್ಡ ಪ್ರಮಾಣದ ರೋಡ್, ಸುದೀರ್ಘ ರೋಡ್ ಶೋ ಗಾಗಿ ಸಾಲು ಸಾಲು ವಾಹನಗಳು ಮೋದಿ ವಾಹನದ ಹಿಂದೆ ಬರ್ತಿದ್ವು. ದಾರಿಯುದ್ಧಕ್ಕೂ ಸಾವಿರಾರು ಜನ ಮೋದಿ ನೋಡಲು ಬೀದಿಯ ಬದಿಯಲ್ಲಿ ಜಮಾಯಿಸಿದ್ರು. ಹೀಗೆ ಕಿಕ್ಕಿರಿದು ತುಂಬಿದ ಜನಗಳ ಮಧ್ಯೆ, ರೋಡ್ ಶೋ ನಡುವೆ ಪ್ರಧಾನಿ ಮೋದಿ ತಮ್ಮ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಜನರಿಂದ ಕಿರಿದಾದ ದಾರಿಯಲ್ಲಿ ಮೋದಿ ಸಾಗುತ್ತಿದ್ದ ವೇಳೆ ಇದೇ ದಾರಿಯಲ್ಲಿ ತುರ್ತು ಸೇವೆಯೊಂದಿಗೆ ಆ್ಯಂಬುಲೆನ್ಸ್ ಸಾಗಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮೋದಿ, ತಮ್ಮ ವಾಹನವನ್ನು ಬದಿಯಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ. ಬಳಿಕ ಮೋದಿ ಅಂಗರಕ್ಷಕರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.  ಆ್ಯಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟ ಘಟನೆ ರೋಡ್‌ಶೋನಲ್ಲಿ ನಡೆದಿದೆ.

ಇದನ್ನೂ ಓದಿ: Weather forecast: ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ : ಹವಾಮಾನ ಇಲಾಖೆ

ಇದನ್ನೂ ಓದಿ: Delhi Liquor Policy Scam: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಪುತ್ರಿಗೆ ಇಡಿ ಶಾಕ್; ತನಿಖೆಗೆ ಸಿದ್ಧ ಎಂದ ಕೆ.ಕವಿತಾ

MODI ROAD SHOW 50 Km, 16 Seats PM Modi Holds Longest Ever Roadshow In Gujarat

Comments are closed.