ನವದೆಹಲಿ: Twitter server down: ನಿನ್ನೆಯಷ್ಟೆ ವಿಶ್ವದಾದ್ಯಂತ ಜಿ-ಮೇಲ್ ಸರ್ವರ್ ಡೌನ್ ಆಗಿ ಕೋಟ್ಯಂತರ ಜನ ತೊಂದರೆ ಅನುಭವಿಸುವಂತಾಗಿತ್ತು. ಇಂದು ಟ್ವಟಿರ್ ಸರ್ವರ್ ಕೂಡಾ ಡೌನ್ ಆಗಿದ್ದು ಜನ ಪರದಾಡುವಂತಾಗಿದೆ.
ಇಂದು ರಾತ್ರಿ ಸುಮಾರು 7 ಗಂಟೆ ಹೊತ್ತಿಗೆ ಟ್ವಿಟರ್ ಬಳಕೆದಾರರಿಗೆ ಪೇಜ್ ಎರರ್ ಕಂಡುಬಂದಿದೆ. ಡೌನ್ ಡಿಟೆಕ್ಟರ್ ವರದಿ ಪ್ರಕಾರ, ಭಾರತದಲ್ಲಿ 2,838 ಬಳಕೆದಾರರು ಟ್ವಿಟರ್ ನಲ್ಲಿ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿಯಾಗಿದೆ. ಟ್ವಿಟರ್ ಬಳಕೆದಾರರು ತಮ್ಮ ಟ್ವಿಟರ್ ಖಾತೆಯನ್ನು ಬಳಸುವಾಗ ಸಮಸ್ಯೆ ಎದುರಿಸಿದ್ದಾರೆ. ಅಂದಹಾಗೆ ಅಪರೂಪದಲ್ಲಿ ಅಪರೂಪ ಎಂಬಂತೆ ಟ್ವಿಟರ್ ಸರ್ವರ್ ಡೌನ್ ಆಗಿದೆ. ಟ್ವಿಟರ್ ಸರ್ವರ್ ಡೌನ್ ಆಗುತ್ತಿದ್ದಂತೆ ಹಲವಾರು ಮಂದಿ ಬಳಕೆದಾರರು ರಿಪೋರ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಂಡೌಸ್ ಚಂಡಮಾರುತ ನಿರಂತರ ಮಳೆ : ಶಾಲೆಗಳಿಗೆ ರಜೆ ಘೋಷಣೆ
ಇತ್ತೀಚೆಗಷ್ಟೆ ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಕೆಲ ಸಾಮಾಜಿಕ ಮಾಧ್ಯಮಗಳ ಸರ್ವರ್ ಡೌನ್ ಆಗಿತ್ತು. ಆಗ ಜನರು ಟ್ವಿಟರ್ ಖಾತೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮಸ್ಕ್ ಒಡೆತನದ ಟ್ವಿಟರ್ ನಲ್ಲೂ ಕೆಲ ಬಳಕೆದಾರರಿಗೆ ಅಡಚಣೆ ಉಂಟಾಗಿದೆ.
ಬಳೆಕದಾರರು ತಮ್ಮ ಟ್ವಿಟರ್ ಖಾತೆ ತೆರೆದಾಗಬ ಪೇಜ್ ನಲ್ಲಿ ಏನೂ ಕಾಣಿಸಲಿಲ್ಲ. ರೀಫ್ರೆಶ್ ಮಾಡಲೂ ಯತ್ನಿಸಿದರೂ ಅವರ ಟೈಮ್ ಲೈನ್ ರೀಫ್ರೆಶ್ ಆಗಿಲ್ಲ. ಅಲ್ಲದೇ ಅನೇಕ ಖಾತೆಗಳು ಅಸ್ತಿತ್ವದಲ್ಲೇ ಇಲ್ಲ ಎಂದು ತೋರಿಸಿದೆ. ಟ್ವಿಟರ್ ಔಟೇಜ್ ಬಗ್ಗೆ ಸೋಶಿಯಲ್ ಮೀಡಿಯಾ ಕಂಪೆನಿಯಿಂದ ಮಾತ್ರ ಅಧಿಕೃತ ಹೇಳಿಕೆ ಬಂದಿಲ್ಲ ಎನ್ನಲಾಗಿದೆ.
ಆಂಡ್ರೋಯ್ಡ್ ಮೊಬೈಲ್ ಗಳಲ್ಲಿ ಮಾತ್ರ ಟ್ವಿಟರ್ ಡೌನ್ ಆಗಿದೆ ಎಂದು ಬಳಕೆದಾರರು ಹೇಳಿದ್ದಾರೆ. ಕೆಲವು ನೆಟ್ ವರ್ಕ್ನಲ್ಲಿ ಟ್ವಿಟರ್ ಆಪ್ ಸಕ್ರಿಯವಾಗಿದೆ. ಕೆಲವೊಂದರಲ್ಲಿ ಮಾತ್ರ ಸಮಸ್ಯೆ ಉಂಟಾಗಿದೆ ಎಂದು ಇನ್ನೂ ಕೆಲ ಬಳಕೆದಾರರು ದೂರಿದ್ದಾರೆ. ವಿಪಿಎನ್ ಸಂಪರ್ಕದೊಂದಿಗೆ ಟ್ವಿಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮತ್ತೆ ಕೆಲ ಬಳಕೆದಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು
Twitter server down: Twitter server down across the country: Thousands of users affected by page error