IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು

News Next Kannada : ಇಂಡಿಯನ್ ಪ್ರೀಮಿಯರ್ ಲೀಗ್ 2023ಗೆ (IPL 2023 mini auction ) ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಮಿನಿ ಹರಾಜಿಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವಲ್ಲೇ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ತುದಿಗಾಲಲ್ಲಿ ನಿಂತಿವೆ. ಈ ಬಾರಿ ಹರಾಜು ಪ್ರಕ್ರಿಯೆಗೆ ಹಲವು ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅದ್ರಲ್ಲೂ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನೇ ಆಡದ ಐವರು ಸ್ವದೇಶಿ ಆಟಗಾರರು ಈ ಬಾರಿ ದುಬಾರಿ ಬೆಲೆಗೆ ಹರಾಜು ಆಗುವ ಸಾಧ್ಯತೆಯಿದೆ. ಅಷ್ಟಕ್ಕೂ ದೇಶೀಯ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿರುವ ಈ ಆಟಗಾರರು ಯಾರೂ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹಲವು ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದ್ರಲ್ಲೂ ಅನ್‌ಕ್ಯಾಪ್ಡ್ ಆಟಗಾರರ ಪೈಕಿ ಮುಂಚೂಣಿಯಲ್ಲಿ ಇರುವ ಆಟಗಾರ ಅಂದ್ರೆ ತಮಿಳುನಾಡು ಮೂಲದ ನಾರಾಯಣ ಜಗದೀಸನ್. ಹೌದು, ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿರುವ ನಾರಾಯಣ ಜಗದೀಸನ್ ಅವರನ್ನು ಚೆನ್ನೈ ತಂಡ ಐಪಿಎಲ್ ಹರಾಜಿಗೂ ಮೊದಲೇ ತಂಡದಿಂದ ಬಿಡುಗಡೆ ಮಾಡಿದೆ. ಆದರೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಗದೀಸನ್ ಸರಣಿ ಶತಕಗಳನ್ನು ಬಾರಿಸಿದ್ದರು. ಮಾತ್ರವಲ್ಲ ದೇಶೀಯ ಕ್ರಿಕೆಟ್ ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಈ ಆಟಗಾರನ ಮೇಲೆ ಎಲ್ಲಾ ತಂಡದ ಚಿತ್ತ ನೆಟ್ಟಿದೆ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಆಟಗಾರನನ್ನು 20 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಈ ಬಾರಿ ದುಬಾರಿ ಬೆಲೆ ಹರಾಜಾಗುವ ಸಾಧ್ಯತೆಯಿದೆ.

ಇನ್ನು ಮುಂಬೈನ ಶಮ್ಸ್ ಮುಲಾನಿ ಈಗಾಗಲೇ ಕೋಟಿಗಳ ಸುರಿಮಳೆಗೈದ ಅನ್‌ಕ್ಯಾಪ್ಡ್ ಆಟಗಾರರಲ್ಲಿ ಒಬ್ಬರು. ಮುಲಾನಿ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಟೂರ್ನಿಯಲ್ಲಿ 45 ವಿಕೆಟ್ ಪಡೆದಿದ್ದಾರೆ. ಇದಾದ ಬಳಿಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಮುಲಾನಿ 10 ವಿಕೆಟ್ ಪಡೆದು ಮಿಂಚಿದ್ದರು. ಈ ಬಾರಿಯೂ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆಯಿದೆ.

ಇನ್ನು ಕರ್ನಾಟಕದ ಬಲಗೈ ವೇಗದ ಬೌಲರ್ ವಿದ್ವತ್ ಕಾವೀರಪ್ಪ ಅತ್ಯಧಿಕ ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ. ಮಹಾರಾಜ ಟಿ20 ಟ್ರೋಫಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆಡಿದ್ದ ಕಾವೀರಪ್ಪ 13 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಅಲ್ಲದೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಎಂಟು ಪಂದ್ಯಗಳಲ್ಲಿ 6.36 ರ ಅತ್ಯುತ್ತಮ ಎಕಾನಮಿ ರೇಟ್‌ನೊಂದಿಗೆ 18 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಹಲವು ತಂಡಗಳಿಗೆ ವೇಗದ ಬೌಲರ್ ಅಗತ್ಯವಿದ್ದು, ಕಾವೀರಪ್ಪ ಭಾರೀ ಮೊತ್ತವನ್ನು ಪಡೆಯುವ ಸಾಧ್ಯತೆ ಇದೆ.

ದೇಶೀಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಸಮರ್ಥ್ ವ್ಯಾಸ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿವೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 10 ಪಂದ್ಯಗಳನ್ನು ಆಡಿರುವ ವ್ಯಾಸ್ 443 ರನ್ ಗಳಿಸಿದ್ದರು. ಇದರಲ್ಲಿ ದ್ವಿಶತಕವೂ ಸೇರಿದೆ. ಅಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಗ್ ಸಿಕ್ಸ್ ಸಿಡಿಸಿ ಹೆಸರುವಾಸಿಯಾಗಿದ್ದ ಸಮರ್ಥ್ ಐಪಿಎಲ್ ನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ.

19 ವರ್ಷದೊಳಗಿನವರ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದ್ದ ರವಿಕುಮಾರ್ 6 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಇದರ ನಂತರ, ರವಿ ಅವರು ಬಂಗಾಳಕ್ಕಾಗಿ ಸೈಯದ್ ಮುಷ್ತಾಕ್ ಟ್ರೋಫಿಗೆ ಪಾದಾರ್ಪಣೆ ಮಾಡಿದರು, ಅವರು ಆಡಿದ ಮೂರು ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದರು. ಹಾಗಾಗಿ ಐಪಿಎಲ್‌ನಲ್ಲಿ ಹೆಚ್ಚು ಹಣ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ : “ಡಿಯರ್ ಕ್ರಿಕೆಟ್.., ನನಗೊಂದು ಚಾನ್ಸ್ ಕೊಡು”.. ರಣಜಿ ತಂಡದಿಂದ ಹೊರ ಬಿದ್ದ ಕರುಣ್ ನಾಯರ್ ಭಾವುಕ ಸಂದೇಶ

ಇದನ್ನೂ ಓದಿ : Mayank-Ashita blessed with baby boy : ಗಂಡು ಮಗುವಿನ ತಂದೆಯಾದ ಮಯಾಂಕ್ ಅಗರ್ವಾಲ್

IPL 2023 Five uncapped players who will get high prices in mini auction

Comments are closed.