ಮಂಗಳವಾರ, ಜೂನ್ 17, 2025
HomeCinemaShiva Rajkumar join politics : ರಾಜಕೀಯಕ್ಕೆ ಬರ್ತಾರಾ ಶಿವರಾಜ್ ಕುಮಾರ್ ? ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

Shiva Rajkumar join politics : ರಾಜಕೀಯಕ್ಕೆ ಬರ್ತಾರಾ ಶಿವರಾಜ್ ಕುಮಾರ್ ? ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

- Advertisement -

ಸಿನಿಮಾಕ್ಕೂ ರಾಜಕೀಯಕ್ಕೂ ನಂಟು ಇಂದು ನಿನ್ನೆಯದಲ್ಲ. ಬಹುತೇಕ ಯಶಸ್ವಿ ನಟರು ರಾಜಕೀಯಕ್ಕೆ ಕಾಲಿಟ್ಟಿದ್ದರೇ, ಒಂದಿಷ್ಟು ರಾಜಕಾರಣಿಗಳು ಕೂಡ ಬಣ್ಣ ಹಚ್ಚಿ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೂ ಸ್ಯಾಂಡಲ್ ವುಡ್ ನ ದೊಡ್ಮನೆ ಡಾ.ರಾಜ್ ಕುಟುಂಬವನ್ನು ರಾಜಕೀಯಕ್ಕೆ ಸೆಳೆಯೋ ಪ್ರಯತ್ನ ಮಾತ್ರ ನಿಂತಿಲ್ಲ. ಮೊನ್ನೆ ಮೊನ್ನೆ ಪುನೀತ್ ಪತ್ನಿ ಅಶ್ವಿನಿ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟ ಪಡಿಸಿದ ಬೆನ್ನಲ್ಲೇ ಈಗ ಶಿವಣ್ಣ (Shiva Rajkumar join politics) ಕೂಡ ರಾಜಕೀಯ ಎಂಟ್ರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋವಾಗಿ ಕನ್ನಡಿಗರ ಮನಗೆದ್ದಿದ್ದಾರೆ. 60ರ ಹರೆಯದಲ್ಲೂ ಸಕ್ರಿಯವಾಗಿ ಸಿನಿಮಾ ರಂಗದಲ್ಲಿ ನಾಯಕರಾಗಿ ಮಿಂಚ್ತಿರೋ ಶಿವಣ್ಣ ರಾಜಕೀಯಕ್ಕೆ ಬರ್ತಾರೆ ಎನ್ನಲಾಗ್ತಿದೆ. ಹಾಗೇ ನೋಡಿದ್ರೇ ಶಿವಣ್ಣ ಕುಟುಂಬಕ್ಕೆ ರಾಜಕೀಯದ ನಂಟು ಹೊಸದಲ್ಲ. ಶಿವಣ್ಣ ಮದುವೆಯಾಗಿರೋ ಗೀತಾ ಶಿವರಾಜ್ ಕುಮಾರ್ ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಸುಪುತ್ರಿ.

ಅಷ್ಟೇ ಅಲ್ಲ ಗೀತಾ ಶಿವರಾಜ್ ಕುಮಾರ್ ಇಬ್ಬರೂ ಸಹೋದರರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಇದೆಲ್ಲದಕ್ಕಿಂತ ಮುಖ್ಯವಾಗಿ ನಟ ಶಿವಣ್ಣ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ನಾಯಕರ ಜೊತೆಗೂ ಆತ್ಮೀಯವಾದ ಬಾಂಧವ್ಯ ಹೊಂದಿದ್ದಾರೆ. ಅಷ್ಟೇ ಅಲ್ಲ ಡಾ.ರಾಜ್ ಕುಟುಂಬದ ಸದಸ್ಯರು ರಾಜಕೀಯಕ್ಕೆ ಬರುತ್ತಾರೆ ಎಂದರೇ ಸ್ವಾಗತಿಸಲು ಎಲ್ಲಾ ರಾಜಕೀಯ ಪಕ್ಷಗಳು ಕಾದಿವೆ.

ಈಗಂತೂ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರೋದರಿಂದ ಶಿವರಾಜ್ ಕುಮಾರ್ ರಾಜಕೀಯಕ್ಕೆ ಪ್ರವೇಶಿಸುತ್ತಾರಾ ಅನ್ನೋ ಪ್ರಶ್ನೆ ಕುತೂಹಲ ಮೂಡಿಸಿದೆ. ಆದರೆ ಈ ಕುತೂಹಲಕ್ಕೆ ನಟ ಶಿವರಾಜ್ ಕುಮಾರ್ ತೆರೆ ಎಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ವೇದ್ ಇವೆಂಟ್ ವೇಳೆ ಮಾತನಾಡಿದ ಶಿವಣ್ಣ, ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರೋದಿಲ್ಲ ಎಂದಿದ್ದಾರೆ.

ಕೇವಲ ನಾನು ಮಾತ್ರವಲ್ಲ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ರಾಜಕೀಯಕ್ಕೆ ಬರೋದಿಲ್ಲ ಎಂದು ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಗೀತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಶ್ವಿನಿ ಪುನೀತ್ ರಾಜ್‍ಕುಮಾರ್ ಕೂಡ ತಾವು ಮಾವ ಹಾಗೂ ಪತಿಯಂತೆ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು. ಈಗ ಶಿವಣ್ಣ ಕೂಡ ತಮ್ಮ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ : Dowry Case: 20 ವರ್ಷದ ಹಳೆಯ ವರದಕ್ಷಿಣೆ ಕೇಸ್ ಗೆ ಮರುಜೀವ: ಕಿರುತೆರೆ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ

ಇದನ್ನೂ ಓದಿ : Puneeth Rajkumar dream : ಪುನೀತ್ ಕನಸು ನನಸಾಗಿಸಲು ಮುಂದಾದ ಗೀತಾ ಶಿವಣ್ಣ: ಪವರ್ ಹೆಸರಲ್ಲಿ ಸಿದ್ದವಾಗಲಿದೆ ಫುಡ್ ಪ್ರೊಡಕ್ಟ್

Sandalwood Famous Actor Shiva Rajkumar join politics Here are the exclusive details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular