Pro Kabaddi semifinals: ಬೆಂಗಳೂರು ಬುಲ್ಸ್ Vs ಪ್ಯಾಂಥರ್ಸ್, ಪಲ್ಟನ್ Vs ತಲೈವಾಸ್.. ಸೆಮಿಫೈನಲ್ ಪಂದ್ಯಗಳ ಕಂಪ್ಲೀಟ್ ಡೀಟೇಲ್ಸ್

ಮುಂಬೈ:(Pro Kabaddi semifinals) ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಸೆಮಿಫೈನಲ್ ಪಂದ್ಯಗಳು ಇಂದು ಮುಂಬೈನ ಡೋಮ್ NSCI ಸರ್ದಾರ್ ವಲ್ಲಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ರೊ ಕಬಡ್ಡಿ ಲೀಗ್’ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ತಂಡ, ಮೊದಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers) ತಂಡವನ್ನು ಎದುರಿಸಲಿದೆ. ಈ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಪುಣೇರಿ ಪಲ್ಟನ್ (Puneri Paltan) ಬಳಗ, ತಮಿಳ್ ತಲೈವಾಸ್ (Tamil Talaiwas) ತಂಡವನ್ನು ಎದುರಿಸಲಿದೆ.

(Pro Kabaddi semifinals)6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಮಂಗಳವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು 32 ಅಂಕಗಳ ಅಂತರದರಿಂದ (56-24) ಭರ್ಜರಿಯಾಗಿ ಬಗ್ಗು ಬಡಿದು ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.

2ನೇ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ಯೋಧಾ ತಂಡವನ್ನು ಟೈ ಬ್ರೇಕರ್’ನಲ್ಲಿ 6-4ರ ಅಂತರದಲ್ಲಿ ಸೋಲಿಸಿರುವ ತಮಿಳ್ ತಲೈವಾಸ್ ತಂಡ ಸೆಮಿಫೈನಲ್ ತಲುಪಿದೆ. ಯು.ಪಿ ಯೋಧಾ ಮತ್ತು ತಲೈವಾಸ್ ನಡುವಿನ ಪಂದ್ಯ ಪೂರ್ಣಾವಧಿಯಲ್ಲಿ 36-36ರಲ್ಲಿ ಟೈಗೊಂಡಿತ್ತು. ಹೀಗಾಗಿ ಫಲಿತಾಂಶಕ್ಕಾಗಿ ಟೈ ಬ್ರೇಕರ್ ಮೊರೆ ಹೋಗಲಾಗಿತ್ತು. ಟೈ ಬ್ರೇಕರ್’ನಲ್ಲಿ ಯು.ಪಿ ಯೋಧಾಗೆ ಶಾಕ್ ಕೊಟ್ಟಿದ್ದ ತಮಿಳ್ ತಲೈವಾಸ್ ಪಡೆ ಯಾರೂ ನಿರೀಕ್ಷೆಯನ್ನೇ ಮಾಡದ ರೀತಿಯಲ್ಲಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟಿದೆ.

ಲೀಗ್ ಹಂತದಲ್ಲಿ ಬೆಂಗಳೂರು ಬುಲ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಗೆದ್ದಿದ್ರೆ (37-31), 2ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ (45-25) ಗೆಲುವು ಸಾಧಿಸಿತ್ತು.ಮತ್ತೊಂದೆಡೆ ಪುಣೇರಿ ಪಲ್ಟನ್ ಹಾಗೂ ತಮಿಳ್ ತಲೈವಾಸ್ ನಡುವಿನ ಲೀಗ್ ಮುಖಾಮುಖಿಗಳ ಪೈಕಿ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಲ್ ಗೆದ್ದಿದ್ರೆ (35-34) 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ರೋಚಕ ಗೆಲುವು (35-34) ಸಾಧಿಸಿತ್ತು.

ಇದನ್ನೂ ಓದಿ:Shiva Rajkumar join politics : ರಾಜಕೀಯಕ್ಕೆ ಬರ್ತಾರಾ ಶಿವರಾಜ್ ಕುಮಾರ್ ? ಇಲ್ಲಿದೆ ಎಕ್ಸಕ್ಲೂಸಿವ್ ಡಿಟೇಲ್ಸ್

ಇದನ್ನೂ ಓದಿ:Arjun Tendulkar Ranaji Century : ಅಪ್ಪನಂತೆ ಮಗ.. ರಣಜಿ ಪದಾರ್ಪಣೆಯಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ

ಪ್ರೊ ಕಬಡ್ಡಿ ಲೀಗ್-9: ಸೆಮಿಫೈನಲ್ ಪಂದ್ಯಗಳು (Pro Kabaddi League semifinals)
ಸೆಮಿಫೈನಲ್-1: ಬೆಂಗಳೂರು ಬುಲ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್ (ರಾತ್ರಿ 7.30ಕ್ಕೆ)
ಸೆಮಿಫೈನಲ್-2: ಪುಣೇರಿ ಪಲ್ಟನ್ Vs ತಮಿಳ್ ತಲೈವಾಸ್ (ರಾತ್ರಿ 8.30ಕ್ಕೆ)

ಸ್ಥಳ: ಡೋಮ್, NSCI SVP ಸ್ಟೇಡಿಯಂ, ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi semifinals Bengaluru Bulls Vs Panthers, Paltan Vs Thalaivas.. Complete Details of Semi Final Matches

Comments are closed.