ಸ್ವದೇಶಿ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಲಾವಾ X3 (2022) (Lava X3) ಅನ್ನು ಬಿಡುಗಡೆ ಮಾಡಿದೆ. ಇದು ಎಂಟ್ರಿ ಲೆವಲ್ ಆಂಡ್ರಾಯ್ಡ್ ಫೋನ್ ಆಗಿದ್ದು, ಆಂಡ್ರಾಯ್ಡ್ 12 Go ನಿಂದ ಚಲಿಸಿದೆ. ಇದು ಮೀಡಿಯಾಟೆಕ್ ಹೀಲಿಯಂ A22 ಪ್ರೊಸೆಸ್ಸರ್‌ನಿಂದ ವೇಗವನ್ನು ಪಡೆಯುತ್ತದೆ. ಈ ಫೋನ್‌ನ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದರ ಪ್ರೈಮರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್‌ದ್ದಾಗಿದೆ. ಈ ಸ್ಮಾರ್ಟ್‌ಫೊನ್‌ನ ವೈಶಿಷ್ಟ್ಯತೆ, ಬೆಲೆ ಮತ್ತು ಲಭ್ಯತೆಗಳ ಬಗ್ಗೆ ಇಲ್ಲಿದೆ ಓದಿ.
ಲಾವಾ X3 ವೈಶಿಷ್ಟ್ಯತೆಗಳು :
ಈಗ ಬಿಡುಗಡೆಯಾಗಿರುವ ಲಾವಾ X3 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 Go ಎಡಿಷನ್‌ನಿಂದ ಚಲಿಸಲಿದೆ. ಇದು 6.3 ಇಂಚಿನ IPS LCD ಡಿಸ್ಪ್ಲೇ ಮತ್ತು HD+ ರೆಸಲ್ಯೂಷನ್ ಅನ್ನು ಹೊಂದಿದೆ. ಇದರ ರಿಫ್ರೆಶ್ ದರವು 60 Hzಗಳಾಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸ್ಸರ್ ನಿಂದ ವೇಗವನ್ನು ಪಡೆಯುತ್ತದೆ. ಇದು 3 GB RAM ಮತ್ತು 32 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇನ್ನು ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 8 MPಯದ್ದಾಗಿದ್ದು, VGA ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ LED ಫ್ಲಾಶ್‌ನ್ನ ಅಳವಡಿಸಲಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ನ ಬಹು ಮುಖ್ಯ ವಿಶೇಷತೆಯೆಂದರೆ ಇದರಲ್ಲಿ ಮೈಕ್ರೊ SD ಸ್ಲಾಟ್ ಅನ್ನು ಅಳವಡಿಸಲಾಗಿದ್ದು, 512 GB ವರೆಗೆ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.
ಲಾವಾ X3(2022) ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸುರಕ್ಷತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ ಮತ್ತು ಇದು ಫೇಸ್ ಲಾಕ್ ಅನ್ನು ಬೆಂಬಲಿಸುತ್ತದೆ. 3.5mm ಹೆಡ್‌ಫೋನ್ ಜಾಕ್ ಮತ್ತು USB ಟೈಪ್–C ಚಾರ್ಜಿಂಗ್ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಲಾವಾ X3 ಸ್ಮಾರ್ಟ್‌ಫೋನ್ 4,000mAh ಬ್ಯಾಟರಿ ಸೆಟಪ್‌ನೊಂದಿಗೆ ಬರಲಿದೆ.
ಬೆಲೆ ಮತ್ತು ಲಭ್ಯತೆ :
ಲಾವಾ X3 ಸ್ಮಾರ್ಟ್‌ಫೋನ್‌ನ ಬೆಲೆಯು 6,999 ರೂ. ಗಳಾಗಿದೆ. ಇದು ಆರ್ಟಿಕ್ ಬ್ಲೂ, ಚಾರ್‌ಕೋಲ್ ಬ್ಲಾಕ್ ಮತ್ತು ಲಸ್ಟರ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಈ ಫೋನ್‌ಗಾಗಿ ಡಿಸೆಂಬರ್ 20 ರಿಂದ ಪ್ರೀ–ಆರ್ಡರ್ ಕೂಡಾ ಮಾಡಬಹುದಾಗಿದೆ. ಕಂಪನಿಯು ಪ್ರೀ–ಆರ್ಡರ್ ಮಾಡುವ ಖರೀದಿದಾರರಿಗೆ 2,999 ರೂ.ಗಳ ಲಾವಾ ಪ್ರೊಬಡ್ಸ್ N11 ನೆಕ್‌ಬ್ಯಾಂಡ್ ಅನ್ನು ನೀಡಲಿದೆ. ಇದನ್ನು ಅಮೆಜಾನ್ ನಿಂದ ಪ್ರೀ–ಆರ್ಡರ್ ಮಾಡಬಹುದಾಗಿದೆ.
ಇದನ್ನೂ ಓದಿ : Smartphones: ಈ ವರ್ಷ ಕುತೂಹಲ ಹೆಚ್ಚಿಸಿದ್ದ 5 ಸ್ಮಾರ್ಟ್‌ಫೋನ್‌ಗಳು..
(Lava X3 2022 launched in India. Know the price and Specifications)