Cars to Stop selling in 2023 due to RDE : ಮುಂದಿನ ವರ್ಷ ಮಾರುತಿ ಸುಜುಕಿ, ಟಾಟಾ ಮುಂತಾದ ಕಂಪನಿಯ 17 ಕಾರುಗಳು ಸ್ಥಗಿತಗೊಳ್ಳಬಹುದು; ಕಾರಣ ಏನು ಗೊತ್ತಾ…

ಮುಂದಿನ (2023) ವರ್ಷ ಕಾರು ಖರೀದಿದಾರರಿಗೆ ಒಳ್ಳೆಯ ಸುದ್ದಿಯನ್ನು ಹೊತ್ತು ತರುತ್ತಿಲ್ಲ. ಏಕೆಂದರೆ ಪ್ರಮುಖ ಕಂಪನಿಗಳು ಜನವರಿ 2023 ರಿಂದ ಎಲ್ಲಾ ಮಾಡೆಲ್‌ಗಳ ಕಾರುಗಳ ಬೆಲೆ ಏರಿಕೆಯಾಗಲಿದೆ ಎಂಬುದನ್ನು ಘೋಷಿಸಿವೆ. ಈಗ ಮತ್ತೊಂದು ವರದಿಯ ಪ್ರಕಾರ ಏಪ್ರಿಲ್‌ 2023 ರಿಂದ ಪ್ರಮುಖ ವಾಹನ ತಯಾರಕರು ನೀಡುವ 17 ಕಾರುಗಳು ಸ್ಥಗಿತಗೊಳ್ಳಬಹುದು (Cars to Stop selling in 2023 due to RDE). ಏಕೆಂದರೆ ದೇಶದಲ್ಲಿ ಮುಂದಿನ ವರ್ಷ ಏಪ್ರಿಲ್‌ ನಿಂದ ಹೊಸದಾದ ಹೊಗೆ ಹೊರಸೂಸುವಿಕೆ ನಿಯಮಾವಳಿಗಳು ರಿಯಲ್‌ ಡ್ರೈವಿಂಗ್‌ ಎಮಿಷನ್‌ (RDE) ಪ್ರಾರಂಭವಾಗಲಿದೆ.

ರಿಯಲ್ ಡ್ರೈವಿಂಗ್ ಎಮಿಷನ್ (RDE) ಎಂದರೇನು ಮತ್ತು ಅದರ ಮಾನದಂಡಗಳು ಯಾವುವು?
ರಿಯಲ್‌–ಟೈಮ್‌ನಲ್ಲಿ, ಡ್ರೈವಿಂಗ್ ಎಮಿಷನ್ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ವಾಹನಗಳು ಆನ್‌ಬೋರ್ಡ್ ಸೆಲ್ಫ್–ಡೈಯಾಗ್ನೈಸ್‌ ಸಾಧನವನ್ನು ಅಳವಡಿಸಲು RDE ಅಗತ್ಯವಿದೆ. ಇದು ವಾಹನಗಳಿಂದ ಹೊರಸೂಸುವ ಹೊಗೆಯ ಮೇಲೆ ನಿಕಟ ನಿಗಾ ಇರಿಸುತ್ತದೆ. ಇದು ಕೆಟಲಿಟಿಕ್‌ ಕರ್ವರ್ಟರ್‌ ಮತ್ತು ಆಕ್ಸಿಜನ್‌ ಸೆನ್ಸಾರ್‌ಗಳಂತಹ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ಸಾಧನವು ಪ್ರಮುಖ ಭಾಗಗಳನ್ನು ನಿರಂತರವಾಗಿ ಮೇಲ್ವಿಚಾರಣೆಯನ್ನು ಮಾಡುತ್ತಿರುತ್ತದೆ. RDE ಪರೀಕ್ಷೆಯು ವಾಹನಗಳು ಹೊರಸೂಸುವ NOx ನಂತಹ ಮಾಲಿನ್ಯಕಾರಕಗಳನ್ನು ಕೇವಲ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಬದಲಿಗೆ ರಿಯಲ್‌–ಲೈಫ್‌ ಪರಿಸರದಲ್ಲಿ ಅಳೆಯುತ್ತದೆ. RDE ಅನ್ನು ಭಾರತದಲ್ಲಿ BS-VI ಹೊಗೆ ಹೊರಸೂಸುವಿಕೆಯ ಮಾನದಂಡಗಳ ಹಂತ 2 ಎಂದು ವಿವರಿಸಲಾಗಿದೆ. ಇದರ ಮೊದಲ ಹಂತವು 2020 ರಲ್ಲಿ ಪ್ರಾರಂಭವಾಗಿತ್ತು.

ಹೊಸ RDE ಯ ಪ್ರಕಾರ ಹೊಗೆ ಹೊರಸೂಸುವಿಕೆಯನ್ನು ಮೇಲ್ವಿಚಾರಿಸಲು ವಾಹನವು ಬಳಸುವ ಸೆಮಿಕಂಡಕ್ಟರ್‌ಗಳನ್ನು ಸಹ ನವೀಕರಿಸಬೇಕಾಗುತ್ತದೆ. ಇದು ಥ್ರೊಟಲ್, ಕ್ರ್ಯಾಂಕ್‌ಶಾಫ್ಟ್ ಸ್ಥಾನಗಳು, ಗಾಳಿಯ ಸೇವನೆಯ ಒತ್ತಡ, ಎಂಜಿನ್‌ನ ತಾಪಮಾನ ಮತ್ತು ಎಕ್ಸಾಸ್ಟ್‌ನಿಂದ ಹೊರಸೂಸುವ ವಸ್ತುಗಳಾದ ಪರ್ಟಿಕ್ಯುಲೇಟ್ ಮ್ಯಾಟರ್, ನೈಟ್ರೋಜನ್ ಆಕ್ಸೈಡ್, CO2, ಸಲ್ಫರ್ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಇದಕ್ಕಾಗಿ ಹೊಸ RDE ಯ ಪ್ರಕಾರ ಕಾರು ತಯಾರಕರು ತಮ್ಮ ಕಾರ್ ಇಂಜಿನ್‌ಗಳನ್ನು ನವೀಕರಿಸುವ ಅಗತ್ಯವಿರುತ್ತದೆ. ಅದು ಈಗಾಗಲೇ ಅಸ್ತಿತ್ವದಲ್ಲಿರುವ ಎಂಜಿನ್‌ಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಈ ಹೊಸ ಎಮಿಷನ್ ಮಾನದಂಡಗಳು ಹೆಚ್ಚು ಪರಿಣಾಮ ಬೀರುವುದು ಡೀಸೆಲ್ ಕಾರುಗಳಿಗೆ. ವರದಿಗಳ ಪ್ರಕಾರ ಕಂಪನಿಗಳು ಹೊಸ ನಿಯಮಗಳನ್ನು ಅನುಸರಿಸಲು ಕೆಲವು ಮಾದರಿಯ ಕಾರುಗಳನ್ನು ನಿಲ್ಲಿಸಲು ಬಯಸುತ್ತಿವೆ.

ಏಪ್ರಿಲ್‌ 2023 ರಿಂದ ಸ್ಥಗಿತಗೊಳ್ಳಬಹುದಾದ ಕಾರುಗಳ ಪಟ್ಟಿ :

  • ಟಾಟಾ ಆಲ್ಟ್ರೋಜ್ ಡೀಸೆಲ್
  • ಮಹೀಂದ್ರ ಮರಾಜ್ಜೊ
  • ಮಹೀಂದ್ರ ಅಲ್ಟುರಾಸ್ ಜಿ4
  • ಮಹೀಂದ್ರ KUV100
  • ಸ್ಕೋಡಾ ಆಕ್ಟೇವಿಯಾ
  • ಸ್ಕೋಡಾ ಸೂಪರ್ಬ್
  • ರೆನಾಲ್ಟ್ ಕ್ವಿಡ್ 800
  • ನಿಸ್ಸಾನ್ ಕಿಕ್ಸ್
  • ಮಾರುತಿ ಸುಜುಕಿ ಆಲ್ಟೊ 800
  • ಟೊಯೋಟಾ ಇನ್ನೋವಾ ಕ್ರಿಸ್ಟಾ ಪೆಟ್ರೋಲ್
  • ಹ್ಯುಂಡೈ i20 ಡೀಸೆಲ್
  • ಹ್ಯುಂಡೈ ವೆರ್ನಾ ಡೀಸೆಲ್
  • ಹೋಂಡಾ ಸಿಟಿ 4ನೇ ಜನರಲ್
  • ಹೋಂಡಾ ಸಿಟಿ 5ನೇ ಜನರಲ್ ಡೀಸೆಲ್
  • ಹೋಂಡಾ ಅಮೇಜ್ ಡೀಸೆಲ್
  • ಹೋಂಡಾ ಜಾಝ್
  • ಹೋಂಡಾ WR-V

ಇದನ್ನೂ ಓದಿ : New Cars Price : ಜನವರಿ 2023ರಿಂದ ಈ ಕಂಪನಿಗಳ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಇದನ್ನೂ ಓದಿ : Hyundai December Discounts : ಡಿಸೆಂಬರ್‌ ತಿಂಗಳಿನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡಿದ ಹುಂಡೈ

(These 17 Cars are to Stop selling in 2023 due to RDE. maruti suzuki, tata, hyundai i20 etc)

Comments are closed.