Merry Christmas 2022 : ಮೇರಿ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು ? ಇಲ್ಲಿದೆ ವಿವರ

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಹಬ್ಬ (Merry Christmas 2022) ಇಷ್ಟಪಡುವ ಹಬ್ಬವಾಗಿದೆ. ಇನ್ನೇನೂ 2022 ಕ್ಯಾಲೆಂಡರ್‌ ವರ್ಷ ಮುಗಿಸಿ ಹೊಸವರ್ಷಕ್ಕೆ ಕಾಲಿಡುವ ಮೊದಲು ಕ್ರಿಸ್‌ಮಸ್‌ ಹಬ್ಬಕ್ಕೆ ತಯಾರಿಯನ್ನು ನಡೆಸುತ್ತಿದ್ದೇವೆ. ಹಾಗಾದರೆ ಈ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ ಹಾಗೂ ಇದರ ಹಿನ್ನಲೆಗಳನ್ನು ತಿಳಿದುಕೊಳ್ಳೋಣ.

ಈ ವರ್ಷ ಮುಗಿಯುವ ಹೊತ್ತಿನಲ್ಲಿ, ಕ್ರಿಸ್‌ಮಸ್‌ ಹಬ್ಬಕ್ಕೆ ಕೆಂಪು ಮತ್ತು ಬಿಳಿ ಬಣ್ಣದ ಅಲಂಕಾರದ ಹಬ್ಬಕ್ಕೆ ಈಗಾಗಲೇ ಕ್ರಿಶ್ಚಿಯನ್‌ ಸಮುದಾಯದವರು ತಯಾರಿ ನಡೆಸುತ್ತಿದ್ದಾರೆ. ಪ್ರತಿವರ್ಷವೂ ಡಿಸೆಂಬರ್‌ 25ಕ್ಕೆ ಕ್ರಿಸ್‌ಮಸ್‌ ಹಬ್ಬವು ಬರುತ್ತದೆ. ಜಗತ್ತಿನಾದ್ಯಂತ ಏಸುಕ್ರಿಸ್ತನ ಜನ್ಮದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ಬಣ್ಣ ಬಣ್ಣ ಬೆಳಕಿನ ಮೂಲಕ ಮನೆ ಹಾಗೂ ಕ್ರಿಸ್‌ಮಸ್‌ ಟ್ರೀಯನ್ನು ಅಲಂಕರಿಸುತ್ತಾರೆ. ಹಾಗೆ ಮನೆ ಮುಂದೆ ಏಸುಕ್ರಿಸ್ತ ಕೊಟ್ಟಿಗೆಯಲ್ಲಿ ಜನಿಸಿದ ರೀತಿಯಲ್ಲಿ ಗುಂದಲಿಗಳನ್ನು ನಿರ್ಮಾಣ ಮಾಡಿ ಅದರಲ್ಲಿ ಪ್ರಾಣಿ, ಪಕ್ಷಿಗಳ ಗೊಂಬೆಗಳನ್ನು ಇರಿಸಿ, ಸಣ್ಣ ಸಣ್ಣ ಬೆಳಕಿನಿಂದ ಬಹಳ ಸುಂದರವಾಗಿ ಅಲಂಕಾರ ಮಾಡುತ್ತಾರೆ. ಕ್ರಿಸ್‌ಮಸ್‌ ಹಬ್ಬದಂದು ಬಹಳ ವಿಶೇಷವಾಗಿ ಕೇಕ್‌, ವೈನ್‌ ಸೇರಿದಂತೆ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತಾರೆ.

ಕ್ರಿಸ್‌ಮಸ್‌ ಹಬ್ಬದ ಇತಿಹಾಸ :
ಏಸುಕ್ರಿಸ್ತನ ಜನ್ಮದಿನ ಕ್ರಿಶ್ಚಿಯನ್‌ರ ಸಾಮಾಹಿಕ ದಿನವಾಗಿದೆ. ಕ್ರಿಸ್‌ಮಸ್‌ ಎನ್ನುವ ಪದವನ್ನು ಇತ್ತೀಚೆಗೆ ಬಳಸುತ್ತಿರಯವ ಪದವಾಗಿರುತ್ತದೆ. ಕ್ರಿಸ್‌ಮಸ್‌ನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಜರ್ಮನಿಯಲ್ಲಿ ಯುಲೈಟೆಡ್‌, ಸ್ಪಾನಿಷ್‌ನಲ್ಲಿ ನ್ಯಾವಿಡೆಡ್‌, ಇಟಲಿಯಲ್ಲಿ ನಟಾಲ್, ಪ್ರಂಚ್‌ನಲ್ಲಿ ನೋಯಲ್‌ ಎಂದು ಕರೆಯುತ್ತಾರೆ. ಹಿಂದಿನ ಶತಮಾನಗಳ ಹಿಂದೆ ಯುರೋಪಿನಲ್ಲಿ ಚಳಿಗಾಲದ ಸಂದರ್ಭದಲ್ಲಿ ದಟ್ಟವಾದ ರಾತ್ರಿಯಲಿ ಏಸುವಿನ ಜನನವಾಗಿದೆ. ಜೀಸಸ್‌ ಕ್ರೈಸ್ಟ್‌ ಮೇರಿ ಮತ್ತು ಜೋಸೆಫ್‌ ದಂತಿಗೆ ಲೆಹಮ್‌ನ ಮ್ಯಾಂಗರ್‌ನಲ್ಲಿ ಏಸುವಿನ ಜನನವಾಗುತ್ತದೆ. ಆಗ ಗ್ರೆಗೋರಿಯನ್‌ ಕ್ಯಾಲೆಂಡರ್‌ ಬಳಸುತ್ತಿದ್ದು, ಡಿಸೆಂಬರ್‌ 25ಕ್ಕೆ ಏಸುವಿನ ಜನನವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳು ಇರುವುದಿಲ್ಲ.

ಬೈಬಲ್‌ನಲ್ಲಿ ಕೂಡ ಏಸುವಿನ ಜನ್ಮ ದಿನಾಂಕವನ್ನು ಎಲ್ಲೂ ಸಹ ಉಲ್ಲೇಖಿಸಿರುವುದಿಲ್ಲ. ಆದರೆ ಚಕ್ರವರ್ತಿ ಕಾನ್ಸ್ಟೈಲ್‌ ಮೊದಲ ಬಾರಿಗೆ ಡಿಸೆಂಬರ್‌ ೨೬ರಂದು ಕ್ರಿಸ್‌ಮಸ್‌ ಆಚರಿಸಬೇಕೆಂದು ಘೋಷಣೆ ಮಾಡಿದ್ದಾರೆ. ಪ್ರಾರಂಭದಲ್ಲಿ ಏಸು ಹುತಾತ್ಮನೆಂದು ನಂಬಿದ ಜನರು ಈ ಆಚರಣೆಯನ್ನು ವಿರೋಧಿಸಿದ್ದಾರೆ. ಆಮೇಳೆ ಉತಾತ್ಮರನ್ನು ಗೌರವಿಸುವ ಸಲುವಾಗಿ ಕ್ರಿಸ್‌ಮಸ್‌ನ್ನು ರಜಾದಿನವೆಂದು ಘೋಷಿಸಿ ಆಚರಣೆ ಮಾಡಲಾಗಿದೆ.

ಕ್ರಿಶ್ಚಿಯನ್‌ ಸಮುದಾಯಕ್ಕೆ ಕ್ರಿಸ್‌ಮಸ್‌ ಹಬ್ಬ ಬಹಳ ವಿಶೇಷವಾದ ದಿನವಾಗಿದೆ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನತೆಗೊಸ್ಕರ ಏಸು ತ್ಯಾಗ ಮಾಡಿ ಶಿಲುಬೆಗೆ ಏರಿದ್ದಾನೆ ಎಂದು ನಂಬಲಾಗುತ್ತದೆ. ಬರುಬರುತ್ತಾ ಆಧುನಿಕ ಪ್ರಪಂಚದಲ್ಲಿ ಸಾಂತಾಕ್ಲಾಸ್‌ ಎನ್ನುವ ವ್ಯಕ್ತಿಯ ಪರಿಕಲ್ಪನೆ ಇರುತ್ತದೆ. ಪ್ರತಿ ವರ್ಷ ಸಾಂತಾಕ್ಲಾಸ್‌ ಕ್ರಿಸ್‌ಮಸ್‌ ಹಬ್ಬದಂದು ಮಕ್ಕಳಿಗೆ ಉಡುಗೊರೆಯನ್ನು ತರುತ್ತಾರೆ. ಉತ್ತರ ಧ್ರುವದಲ್ಲಿ ವಾಸಿಸುವ ಸಾಂತಾಕ್ಲಾಸ್‌ ಜಗತ್ತಿನಲ್ಲಿರುವ ಎಲ್ಲಾ ಮಕ್ಕಳಿಗೆ ಹಿಂದಿನ ದಿನ ಉಡುಗೊರೆ ತರುತ್ತಾರೆ ಎನ್ನುವ ನಂಬಿಕೆ ಕೂಡ ಇದೆ.

ಇದನ್ನೂ ಓದಿ : Christmas Gifts For Children: ಮಕ್ಕಳಿಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕಾ; ಇಲ್ಲಿದೆ ಬೆಸ್ಟ್‌ ಐಡಿಯಾಗಳು

ಇದನ್ನೂ ಓದಿ : Christmas Cakes : ಈ ವರ್ಷದ ಕ್ರಿಸ್‌ಮಸ್‌ ಗೆ ಮನೆಯಲ್ಲಿಯೇ ಹೀಗೆ ಕೇಕ್‌ ತಯಾರಿಸಿ

ಕ್ರಿಸ್‌ಮಸ್‌ ಹಿಂದಿನ ದಿನ ರಾತ್ರಿ ಕ್ರಿಸ್‌ ಮಸ್‌ ಈವ್‌ ಎನ್ನುವ ಆಚರಣೆಯ ಸಲುವಾಗಿ ಕ್ರಿಶ್ಚಿಯನ್‌ ಸಮುದಾಯದ ಜನರೆಲ್ಲರೂ ಚರ್ಚ್‌ನಲ್ಲಿ ಸೇರುತ್ತಾರೆ. ಕ್ಯಾರೋಲೆಲ್‌ಗಳನ್ನು ಹಾಡುವ ಮೂಲಕ ಈ ವರ್ಷಕ್ಕೆ ಅಂತ್ಯ ಹಾಡಿ ಹೊಸವರ್ಷವನ್ನು ಬಹಳ ಸಂತೋಷದಿಂದ ಸ್ವಾಗತ ಮಾಡುತ್ತಾರೆ. ಒಬ್ಬರಿಗೊಬ್ಬರು ಆಶೀರ್ವಾದಿಸಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅದರಂತೆ ಈ ವರ್ಷವು ಕೂಡ ಕ್ರಿಸ್‌ಮಸ್‌ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿಯನ್ನು ನಡೆಸುತ್ತಿದ್ದಾರೆ.

Merry Christmas 2022 : How much do you know the history and significance of Merry Christmas celebration? Here is the detail

Comments are closed.