ಭಾನುವಾರ, ಜೂನ್ 15, 2025
HomeCorona UpdatesNasal Vaccine: ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ಹಾಕುವ ಲಸಿಕೆ ತೆಗೆದುಕೊಳ್ಳುವಂತಿಲ್ಲ; ತಜ್ಞ ವೈದ್ಯರ...

Nasal Vaccine: ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ಹಾಕುವ ಲಸಿಕೆ ತೆಗೆದುಕೊಳ್ಳುವಂತಿಲ್ಲ; ತಜ್ಞ ವೈದ್ಯರ ಸ್ಪಷ್ಟನೆ

- Advertisement -

ನವದೆಹಲಿ: ದೇಶದಲ್ಲಿ ದಿನೇದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಬೆನ್ನಲ್ಲೇ ನಿನ್ನೆಯಷ್ಟೆ Nasal Vaccine (ಮೂಗಿನ ಮೂಲಕ ಹಾಕುವ ಲಸಿಕೆ)ಯನ್ನು ಆರೋಗ್ಯ ಇಲಾಖೆ ಪರಿಚಯಿಸಿತ್ತು. ಅಲ್ಲದೇ ಅದಕ್ಕೆ ದರ ಕೂಡಾ ನಿಗದಿ ಮಾಡಿ ಆಗಿತ್ತು. ಆದರೆ ಈಗಾಗಲೇ ಕೋವಿಡ್ ಬೂಸ್ಟರ್ ಡೋಸ್ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಪಡೆಯುವಂತಿಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡುವ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಡಾ.ಎನ್.ಕೆ.ಅರೋರ, ಒಬ್ಬ ವ್ಯಕ್ತಿ ಈಗಾಗಲೇ ಬೂಸ್ಟರ್ ಡೋಸ್ ಪಡೆದಿದ್ದಲ್ಲಿ ಅವರು ಮೂಗಿನ ಮೂಲಕ ಹಾಕುವ ಲಸಿಕೆ ಪಡೆಯಬಾರದು ಎಂದು ಸಲಹೆ ನೀಡಿದ್ದಾರೆ. ಲಸಿಕಾಕರಣದ ಭಾಗವಾಗಿ ಕೋವಿನ್ ಪೋರ್ಟಲ್ ನಲ್ಲಿ 4ನೇ ಡೋಸ್ ಆಗಿ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ತೆಗೆದುಕೊಳ್ಳುವಂತಿಲ್ಲ. ಬೂಸ್ಟರ್ ಬಳಿಕ ಮತ್ತೊಂದು ಲಸಿಕೆ ಪಡೆದರೆ ವ್ಯಕ್ತಿಯ ದೇಹವು ಅದಕ್ಕೆ ಪೂರಕವಾಗಿ ಸ್ಪಂದಿಸುವುದಿಲ್ಲ. ಒಂದು ವೇಳೆ ತೆಗೆದುಕೊಂಡರೆ ಲಸಿಕೆಯ ಪ್ರಭಾವ ಕಡಿಮೆ ಆಗುತ್ತದೆ. ಇದೇ ಕಾರಣಕ್ಕೆ ಆರಂಭದಲ್ಲಿ ಎಂಆರ್ ಎನ್ ಎ ಲಸಿಕೆಯನ್ನು 6 ತಿಂಗಳ ಬಳಿಕ ನೀಡಲಾಗುತ್ತೆ. ಹೀಗಿದ್ದೂ ಅದು ನಿರೀಕ್ಷಿಸಿದಷ್ಟು ಪ್ರಭಾವ ಬೀರಿಲ್ಲ. ಹೀಗಾಗಿ ಸದ್ಯಕ್ಕೆ 4ನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಡಾ.ಎನ್.ಕೆ.ಅರೋರ ತಿಳಿಸಿದ್ದಾರೆ.

ಇದನ್ನೂ ಓದಿ: PIBFact Check : ವೈರಲ್ ಆಗುತ್ತಿದೆ ಕೋವಿಡ್ ಸುಳ್ಳು ಸಂದೇಶ : ಮೆಸೇಜ್ ಶೇರ್ ಮಾಡುವ ಮುನ್ನ ಹುಷಾರ್

ಮೂಗಿನ ಮೂಲಕ ಪಡೆಯುವ ಲಸಿಕೆ ತುಂಬಾ ಪರಿಣಾಮಕಾರಿಯಾದುದು. ಈ ಲಸಿಕೆಯು ನೇರವಾಗಿ ಉಸಿರಾಟ ವ್ಯವಸ್ಥೆಯ ಪ್ರವೇಶ ಬಿಂದುವನ್ನೇ ತಲುಪುತ್ತದೆ. ಈ ಲಸಿಕೆಯಿಂದ ಮೂಗು ಮತ್ತು ಬಾಯಿಯಲ್ಲಿ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಇದರಿಂದ ವೈರಸ್ ಸುಲಭವಾಗಿ ದೇಹ ಪ್ರವೇಶಿಸಲಾಗದು. ಈ ಲಸಿಕೆಯು ಕೋವಿಡ್ ಮಾತ್ರವಲ್ಲದೇ ಇತರ ವೈರಸ್ ಗಳಿಂದಲೂ ರಕ್ಷಣೆ ನೀಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮೂಗಿನ ಮೂಲಕ ಹಾಕುವ ಲಸಿಕೆ ಎಷ್ಟು ಸುರಕ್ಷಿತ..?

  • 18 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.
  • ಮೂಗಿನ ಎರಡೂ ಹೊಳ್ಳೆಗಳಿಗೆ ತಲಾ 4 ಡ್ರಾಪ್ (0.5 ಎಂ.ಎಲ್) ಹಾಕಲಾಗುತ್ತೆ.
  • ಸ್ವಲ್ಪ ಸಮಯಕ್ಕೆ ಮೂಗು ಬ್ಲಾಕ್ ಆದಂತೆ ಆಗುತ್ತೆ.
  • ಈ ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ. ಇದು ಅತ್ಯಂತ ಸುರಕ್ಷಿತವಾದುದು.

ಇದನ್ನೂ ಓದಿ: Nasal Vaccine‌ Rate : ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆಗೆ ಬೆಲೆ ನಿಗದಿ : ಸರಕಾರಿ ಆಸ್ಪತ್ರೆಗಳಲ್ಲಿ 325 ರೂ., ಖಾಸಗಿಯಲ್ಲಿ 800 ರೂ.

ನಾಸಲ್ ವ್ಯಾಕ್ಸಿನ್ ಅನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದ್ದು, ಸದ್ಯ ಕೋವಿನ್ ತಾಣದಲ್ಲಿ ಲಭ್ಯವಿದೆ. ಈ ಲಸಿಕೆಯನ್ನು ಮೊದಲ ಬೂಸ್ಟರ್ ಡೋಸ್ ಆಗಿ ಶಿಫಾರಸ್ಸು ಮಾಡಲಾಗಿದೆ. ನಿನ್ನೆಯಷ್ಟೆ ಈ ಲಸಿಕೆಗೆ ಭಾರತ್ ಬಯೋಟೆಕ್ ಕಂಪೆನಿ ದರ ನಿಗದಿಪಡಿಸಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ 800 ರೂ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 352 ರೂ. ದರ ನಿಗದಿಪಡಿಸಲಾಗಿದೆ.

Nasal Vaccine: Those who have received a booster dose cannot receive the nasal vaccine; Doctor clarified

RELATED ARTICLES

Most Popular