ಲಕ್ನೋದಲ್ಲೊಂದು ದುರಂತ ಘಟನೆ: ಮಗುವಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯ ಖಾಸಗಿ ಅಂಗಕ್ಕೆ ಗಾಯಗೊಳಿಸಿದ ಪತಿ

ಲಕ್ನೋ : (Tragedy incident In Lucknow) ಉತ್ತರ ಪ್ರದೇಶದ ಲಕ್ನೋದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಮಗುವಾಗಿಲ್ಲ ಎನ್ನುವ ಕಾರಣಕ್ಕೆ ಚೂಪಾದ ಬ್ಲೇಡ್‌ ನಿಂದ ಆಕೆಯ ಖಾಸಗಿ ಭಾಗಗಳಿಗೆ ಗಾಯಗೊಳಿಸಿರುವ ಘಟನೆ ನಡೆದಿದೆ. ಮದುವೆಯಾಗಿ ಆರು ವರ್ಷ ಕಳೆದರೂ ದಂಪತಿಗಳಿಗೆ ಮದುವೆಯಾಗಿರಲಿಲ್ಲ ಇದೇ ಕಾರಣಕ್ಕೆ ವ್ಯಕ್ತಿ ಈ ರೀತಿಯ ಕೃತ್ಯವೆಸಗಿದ್ದಾನೆ.

ಆರೋಪಿ ರವೀಂದ್ರ ದಂಪತಿಗೆ ಆರು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ ಇಷ್ಟು ವರ್ಷವಾದರೂ ಮಗು ಆಗಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ್ಗೆ ಜಗಳ (Tragedy incident In Lucknow) ನಡೆಯುತ್ತಿತ್ತು. ಇದರಿಂದ ಮನನೊಂದು ಸಂತ್ರಸ್ತೆ ತನ್ನ ತಾಯಿಯ ಮನೆಗೆ ಹೋಗಿದ್ದಳು. ಕಳೆದ ಎಂಟು ತಿಂಗಳಿನಿಂದ ತಾಯಿಯ ಜೊತೆಗೆ ವಾಸವಾಗಿದ್ದಳು.

ಡಿ. 25 ರಂದು ಪತ್ನಿಗೆ ತನ್ನ ಮನೆಗೆ ಹಿಂದಿರುಗಿ ಬರುವಂತೆ ಮನವೊಲಿಸಿದ್ದನು. ಅದರಂತೆಯೇ ಆಕೆ ಅತನನ್ನು ನಂಬಿ ಮರಳಿ ಮನೆಗೆ ಬಂದಿದ್ದಳು. ಆಕೆ ಮನೆಗೆ ಬಂದಿದ್ದ ವೇಳೆ ಆರೋಪಿ ವ್ಯಕ್ತಿ ಆಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ಪ್ರಯತ್ನಿಸಿದ್ದಾನೆ. ಇದನ್ನು ಆಕೆ ವಿರೋಧಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ ಆಕೆಗೆ ಬ್ಲೇಡ್‌ ನಿಂದ ಕೋಯ್ದು ಖಾಸಗಿ ಅಂಗಗಳಿಗೆ ಗಾಯ(Tragedy incident In Lucknow)ಗೊಳಿಸಿದ್ದಾನೆ. ನಂತರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಗುವಾಗಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾನೆ.

ಇದನ್ನೂ ಓದಿ : Scooter collision: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿಗೆ ಬೈಕ್‌ ಢಿಕ್ಕಿ: ಸ್ಥಳದಲ್ಲೇ ಮಗು ಸಾವು

ಇದನ್ನೂ ಓದಿ : Ice collapse-3 died: ವಾಷಿಂಗ್ಟನ್‌ ಸರೋವರದಲ್ಲಿ ಮಂಜುಗಡ್ಡೆ ಕುಸಿತ : ಮೂವರು ಭಾರತೀಯರು ಸಾವು

ಇದನ್ನೂ ಓದಿ : Tourist bus collision: ಪ್ರವಾಸಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಗೆ ಮಿನಿ‌ ಬಸ್ ಮುಖಾಮುಖಿ ಢಿಕ್ಕಿ : 12 ವಿದ್ಯಾರ್ಥಿಗಳಿಗೆ ಗಾಯ

ಸದ್ಯ ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿಯ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

In Uttar Pradesh’s Lucknow, a man injured his wife’s private parts with a sharp blade because she was childless.

Comments are closed.