ಬೆಂಗಳೂರು : ಕರ್ನಾಟಕದಲ್ಲಿ ಚುನಾವಣೆಯ ಕಣ ವಿಧಾನಕ್ಕೆ ರಂಗೇರತೊಡಗಿದೆ. ಈ ಮಧ್ಯೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರೋ ಕನಸಿನಲ್ಲಿರೋ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಪಂಚರತ್ನ ಯಾತ್ರೆಗೆ (Pancharatna Yatra) ಸಿಗ್ತಿರೋ ಭರ್ಜರಿ ರೆಸ್ಪಾನ್ಸ್ ಮತ್ತಷ್ಟು ಬಲ ತಂದಿದೆ. ಈ ಮಧ್ಯೆ ನಾಡಿನ ಪ್ರಮುಖ ಮತದಾರರಾಗಿರೋ ರೈತರನ್ನು ಒಲೈಸಲು ಕುಮಾರಸ್ವಾಮಿ ಭರ್ಜರಿ ಪ್ಲ್ಯಾನ್ ವೊಂದನ್ನು ಸಿದ್ಧಪಡಿಸಿದ್ದಾರೆ.
ಹೌದು ಮತ್ತೊಮ್ಮೆ ಸಿಎಂ ರೇಸ್ ನಲ್ಲಿದ್ದಾರೆ ಮಾಜಿಸಿಎಂ ಕುಮಾರಣ್ಣ. ಇದಕ್ಕಾಗಿ ಸಾಕಷ್ಟು ಸರ್ಕಸ್ ನಡೆಸ್ತಿರೋ ಕುಮಾರಸ್ವಾಮಿ, ಈಗ ಎಮೋಶನಲ್ ಹಾಗೂ ಪ್ರಬಲ ಅಸ್ತ್ರವೊಂದನ್ನು ಬಳಸಲು ಸಿದ್ಧವಾಗಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ಸಾಲ ಮನ್ನಾ ಯೋಜನೆ ರೈತರನ್ನು ಅವರ ಕಷ್ಟದಿಂದ ಮೇಲಕ್ಕೆತ್ತಿತ್ತು. ಈಗ ಇದೇ ಫಲಾನುಭವಿಗಳನ್ನು ಸೆಳೆಯಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದರಿಂದ ಹತ್ತು ಸಾವಿರ ಮಂದಿ ಸಾಲ ಮನ್ನಾ ಯೋಜನೆ ಫಲಾನುಭವಿಗಳಿದ್ದು, ಅವರನ್ನು ಮತ್ತೊಮ್ಮೆ ಕುಮಾರಸ್ವಾಮಿಯವರತ್ತ ಸೆಳೆಯುವ ಉದ್ದೇಶದಿಂದ ರೈತರಿಗೆ ಭಾವನಾತ್ಮಕವಾಗಿ ಪತ್ರ ಬರೆದು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಲು ನಿರ್ಧಾರ ಮಾಡಿದೆ.ಮಾತು ಕೊಟ್ಟಂತೆ ರೈತರ ಬೆಳೆ ಸಾಲ ಮನ್ನಾ ಮಾಡಿದ್ದೇವೆ.ನುಡಿದಂತೆ ನಾವು ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ. ಈ ಬಾರಿಯೂ ಪಂಚರತ್ನ ಯೋಜನೆಗಳನ್ನ ಜಾರಿಗೆ ತರುತ್ತೇನೆ.
ಅಲ್ಲದೇ ಪಂಚರತ್ನ ಯೋಜನೆಗಳ ಮಹತ್ವವನ್ನ ವಿವರಿಸಿ ಭಾವನಾತ್ಮಕ ಪತ್ರ ಬರೆದು ತಮ್ಮನ್ನು ಬೆಂಬಲಿಸುವಂತೆ ಕೋರಲು ಕುಮಾರಸ್ವಾಮಿ ನಿರ್ಧರಿಸಿದ್ದಾರಂತೆ. ಕೇವಲ ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರವಲ್ಲ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂರಿಂದ ಜಂಟಿಯಾಗಿ ಪತ್ರ ಬರೆಯಲಿದ್ದು, ಆ ಮೂಲಕ ರೈತರಿಗೆ ಮತ್ತೊಮ್ಮೆ ಸಾಲಮನ್ನಾದಂತಹ ಯೋಜನೆಯ ಭರವಸೆ ನೀಡಿ ಜೆಡಿಎಸ್ ನತ್ತ ಸೆಳೆಯೋದು ಕುಮಾರಸ್ವಾಮಿ ಮತ್ತು ತಂಡದ ಮಾಸ್ಟರ್ ಪ್ಲ್ಯಾನ್.
ಇದನ್ನೂ ಓದಿ : Sonia Gandhi : ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : ಕರ್ನಾಟಕದಲ್ಲಿ ಜಾರಿಯಾಗುತ್ತಾ ಲಾಕ್ ಡೌನ್ : ಮಾರ್ಗಸೂಚಿ ಪ್ರಕಟ, ವಿದೇಶಿ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪಂಚ ರತ್ನ ಯಾತ್ರೆ ಯಶಸ್ವಿಯಾಗಿ ನಡೆದಿದ್ದು, ಜನರಿಂದಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹೀಗಾಗಿ ಈ ಜೆಡಿ ಎಸ್ ಪರ ಅಲೆ ಸೃಷ್ಟಿಯಾಗಿರುವಾಗಲೇ ಮತ್ತೊಮ್ಮೆ ಜನರನ್ನು ಸೆಳೆಯಲು ಈ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲು ದಳಪತಿಗಳ ತಂತ್ರ ಹೂಡಿದ್ದಾರೆ. ಈ ನಡುವೆ ಸಾಲ ಮನ್ನಾ ಯೋಜನೆ ಮೈತ್ರಿ ಸರ್ಕಾರದ ಕೊಡುಗೆ ಎಂದಿರೋ ಕಾಂಗ್ರೆಸ್ ತಮ್ಮ ಕ್ರೆಡಿಟ್ ಗಾಗಿ ಜನರ ಬಳಿ ಹೋಗಲು ಸಿದ್ಧವಾಗ್ತಿದೆ.
Pancharatna Yatra An emotional weapon is being prepared in the name of Loan waiver: HDK has sent a letter to the farmers.