NOTA campaign: ಸೀಮೆಎಣ್ಣೆ ನೀಡದಿದ್ರೆ ನೋಟಾ ಅಭಿಯಾನ : ಮೀನುಗಾರರಿಂದ ಎಚ್ಚರಿಕೆ

ಕುಂದಾಪುರ: (NOTA campaign) ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯ ಹೊರತಾಗಿಯೂ ಸಾಂಪ್ರದಾಯಿಕ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆಯಾಗಿಲ್ಲ ಎಂದು ಆಕ್ರೋಶಗೊಂಡ ಮೀನುಗಾರರು ಮುಂದಿನ ಇಪ್ಪತ್ತು ದಿನದೊಳಗೆ ಸೀಮೆ ಎಣ್ಣೆ ವಿತರಣೆಯಾಗಿಲ್ಲ ಎಂದರೆ ನೋಟಾ ಅಭಿಯಾನ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಸಣ್ಣ ಯಾಂತ್ರೀಕೃತ ದೋಣಿ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸರಕಾರ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ಒದಗಿಸುತ್ತಿದ್ದು, ಕಳೆದ ನಾಲ್ಕೈದು ತಿಂಗಳಿಂದ ಮೀನುಗಾರರಿಗೆ ಸೀಮೆ ಎಣ್ಣೆ ವಿತರಣೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಭರವಸೆಯ ಹೊರತಾಗಿಯೂ ನಮಗೆ ಸೀಮೆಎಣ್ಣೆ ವಿತರಣೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾಂಪ್ರದಾಯಿಕ ಮೀನುಗಾರರು ಮುಂದಿನ ಇಪ್ಪತ್ತು ದಿನದೊಳಗೆ ಸೀಮೆಎಣ್ಣೆ ವಿತರಣೆಯಾಗದೇ ಇದ್ದಲ್ಲಿ ನೋಟಾ ಅಭಿಯಾನ (NOTA campaign) ನಡೆಸುವುದಾಗಿ ಎಚ್ಚರಿಸಿದ್ದಾರೆ.

ಗಂಗೊಳ್ಳಿ ವಲಯ ಸಾಂಪ್ರದಾಯಿಕ ಮೀನುಗಾರರ ಸಂಘವು ಈ ಎಚ್ಚರಿಕೆಯನ್ನು ನೀಡಿದ್ದು, ಸಂಘದ ಅಧ್ಯಕ್ಷ ಯಶವಂತ ಖಾರ್ವಿ ಮಾತನಾಡಿ, ” ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದರು ಹಾಗೂ ಎಲ್ಲಾ ಶಾಸಕರಿಗೆ ನಮ್ಮ ಸಂಕಷ್ಟದ ಬಗ್ಗೆ ವಿವರಿಸಿ ಮನವಿ ಪತ್ರ ಕಳುಹಿಸಿದ್ದೇವೆ. ಆದರೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ನಮಗೆ ಸೀಮೆಎಣ್ಣೆ ಬಿಡುಗಡೆ ಮಾಡಲು ಇಲ್ಲಿಯವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಮುಂದಿನ ಇಪ್ಪತ್ತು ದಿನದೊಳಗಾಗಿ ಸೀಮೆಎಣ್ಣೆ ವಿತರಣೆಯಾಗದೇ ಇದ್ದಲ್ಲಿ ನಾವು ನೋಟಾ ಅಭಿಯಾನ ನಡೆಸಲು ತೀರ್ಮಾನಿಸಿದ್ದೇವೆ. ಅಭಿಯಾನ ನಡೆಸುವ ಮೊದಲು ಕರಾವಳಿಯ ಎಲ್ಲಾ ಶಾಸಕರಿಗೆ ಪತ್ರ ರವಾನಿಸಿ ಅಭಿಯಾನವನ್ನು ವಿಸ್ತರಣೆ ಮಾಡಲಾಗುವುದು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ” ಎಂದು ಎಚ್ಚರಿಕೆಯ ಮಾತಗಳನ್ನಾಡಿದರು.

ಇದನ್ನೂ ಓದಿ : Kanthara’s real incident: ಕಾಂತಾರ ನೆನಪಿಸಿದ ನೈಜ ಘಟನೆ: ದೈವಕೋಲದ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲೇರಿದ ವ್ಯಕ್ತಿ ನಿಗೂಢ ಸಾವು

ಇದನ್ನೂ ಓದಿ : Anxiety among Shellfish lovers: ಕುಂದಾಪುರದ ಹಲವೆಡೆ ಕಪ್ಪೆಚಿಪ್ಪು ತಿಂದ ಜನರು ಅಸ್ವಸ್ಥ: ಮೀನು ಪ್ರಿಯರಲ್ಲಿ ಹೆಚ್ಚಿದ ಆತಂಕ

ಇದನ್ನೂ ಓದಿ : Kundapura fraud case: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಸಹಕಾರ ಸಂಘಕ್ಕೆ ವಂಚನೆ : ದೂರು ದಾಖಲು

The traditional fishermen have warned that they will launch a NOTA campaign if the kerosene is not delivered within the next twenty days.

Comments are closed.