ಬುಧವಾರ, ಏಪ್ರಿಲ್ 30, 2025
HomeSportsCricketKL Rahul flies to Mumbai : ಮದುವೆ ತಯಾರಿಗೆ ಕೇರಳದಿಂದ ಮುಂಬೈಗೆ ಹಾರಿದ ರಾಹುಲ್,...

KL Rahul flies to Mumbai : ಮದುವೆ ತಯಾರಿಗೆ ಕೇರಳದಿಂದ ಮುಂಬೈಗೆ ಹಾರಿದ ರಾಹುಲ್, ಮುಂದಿನ ಸೋಮವಾರ ಪೀ ಪೀ ಡುಂ ಡುಂ

- Advertisement -

ಮುಂಬೈ: ಕನ್ನಡಿಗ ಕೆ.ಎಲ್ ರಾಹುಲ್ ಅವರ ಮದುವೆ (KL Rahul marriage) ಇದೇ ಜನವರಿ 23ಕ್ಕೆ ನಡೆಯಲಿದ್ದು, ಮದುವೆ ತಯಾರಿಗಾಗಿ ರಾಹುಲ್ ಕೇರಳದಿಂದ ಮುಂಬೈಗೆ (KL Rahul flies to Mumbai) ಹಾರಿದ್ದಾರೆ. ಕೇರಳದ ತಿರುವನಂತಪುರದಲ್ಲಿರುವ ಗ್ರೀನ್ ಫೀಲ್ಡ್ ಮೈದಾನದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಮುಗಿಸಿದ ರಾಹುಲ್ ಸೋಮವಾರ ತಿರುವನಂತಪುರದಿಂದ ನೇರವಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

ಕೆ.ಎಲ್ ರಾಹುಲ್ ಮತ್ತು ಬಾಲಿವುಡ್’ನ ಹಿರಿಯ ನಟ ಸುನಿಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿಯವರ ಮದುವೆ (KL Rahul Athiya Shetty marriage) ಜನವರಿ 22 ಮತ್ತು 23ರಂದು ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯ ಖಂಡಾಲ ಬಳಿ ಇರುವ ಸುನಿಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆಯಲಿದೆ. ಎರಡೂ ಕುಟುಂಬಗಳು ಈಗಾಗಲೇ ಮದುವೆ ಸಿದ್ಧತೆ ಆರಂಭಿಸಿವೆ. ಎರಡೂ ಕುಟುಂಬಗಳ ಹತ್ತಿರದ ಕುಟುಂಬ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರನ್ನಷ್ಟೇ ಮದುವೆಗೆ ಆಹ್ವಾನಿಸಲಾಗಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 103 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿ ಭಾರತಕ್ಕೆ ಸರಣಿ ಗೆಲುವು ತಂದು ಕೊಟ್ಟಿದ್ದರು.ಆದರೆ ತಿರುವನಂತಪುರದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ರಾಹುಲ್ ಕೇವಲ 7 ರನ್ ಗಳಿಸಿ ಔಟಾಗಿದ್ದರು. ಗುವಾಹಟಿಯಲ್ಲಿ ನಡೆದ ಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ರಾಹುಲ್ 29 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು.

ಇದನ್ನೂ ಓದಿ : Virat Kohli Century : 1021, 93, 31, 05 ವಿರಾಟ್ ಕೊಹ್ಲಿ ಮತ್ತು ನಾಲ್ಕು ಶತಕಗಳ ಹಿಂದೆ ನಂಬರ್ ಗೇಮ್

ಇದನ್ನೂ ಓದಿ : ಕೇರಳದ ಅನಂತಪದ್ಮನಾಭದ ದರ್ಶನ ಪಡೆದ ಟೀಮ್ ಇಂಡಿಯಾ ಆಟಗಾರರು

ಇದನ್ನೂ ಓದಿ : Rishabh Pant health update : ರಿಷಭ್ ಪಂತ್ ಆಪರೇಷನ್ ಸಕ್ಸಸ್, ಕ್ರಿಕೆಟ್ ಮೈದಾನಕ್ಕೆ ಮರಳುವ ಬಗ್ಗೆ ಡಾಕ್ಟರ್ ಹೇಳಿದ್ದೇನು?

ಮದುವೆಯ ಕಾರಣ ಕೆ.ಎಲ್ ರಾಹುಲ್ ಜನವರಿ 18ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ ಮೂಲಕ ರಾಹುಲ್ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಆಸೀಸ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಈಗಾಗ್ಲೇ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ರಾಹುಲ್ ಉಪನಾಯಕನಾಗಿ ಮುಂದುವರಿದಿದ್ದಾರೆ.

KL Rahul flies to Mumbai: Rahul flew from Kerala to Mumbai for wedding preparations, next Monday Pee Pee Dum Dum

RELATED ARTICLES

Most Popular