Virat Kohli Century : 1021, 93, 31, 05 ವಿರಾಟ್ ಕೊಹ್ಲಿ ಮತ್ತು ನಾಲ್ಕು ಶತಕಗಳ ಹಿಂದೆ ನಂಬರ್ ಗೇಮ್

ಬೆಂಗಳೂರು: ಕ್ರಿಕೆಟ್ ಜಗತ್ತಿನ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli 74th century) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 74ನೇ ಶತಕ ಬಾರಿಸಿದ್ದಾರೆ. ಕೇರಳದ ತಿರುವನಂತಪುರದಲ್ಲಿರುವ ಗ್ರೀನ್ ಫೀಲ್ಡ್ ಮೈದಾನದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿದ್ದರು. ಇದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕಿಂಗ್ ಕೊಹ್ಲಿ ಸಿಡಿಸಿದ್ದ 74ನೇ ಅಂತರಾಷ್ಟ್ರೀಯ ಶತಕ ಹಾಗೂ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಿಡಿಸಿದ 46ನೇ ಸೆಂಚುರಿ.

ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 110 ಎಸೆತಗಳನ್ನೆದುರಿಸಿದ ವಿರಾಟ್ ಕೊಹ್ಲಿ 13 ಬೌಂಡರಿ ಹಾಗೂ 8 ಸಿಕ್ಸರ್’ಗಳ ನೆರವಿನಿಂದ ಅಜೇಯ 166 ರನ್ ಗಳಿಸಿದ್ದರು. ಕೊಹ್ಲಿ ಮತ್ತು ಶುಭಮನ್ ಗಿಲ್ (116 ರನ್) ಅವರ ಶತಕಗಳ ನೆರವಿನಿಂದ ಭಾರತ 50 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಕಲೆ ಹಾಕಿತ್ತು. ನಂತರ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ 22 ಓವರ್’ಗಳಲ್ಲಿ ಕೇವಲ 73 ರನ್ನಿಗೆ ಆಲೌಟಾಗಿತ್ತು. ಈ ಮೂಲಕ ಭಾರತ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತೀ ದೊಡ್ಡ (317 ರನ್) ಅಂತರದ ಗೆಲುವು ದಾಖಲಿಸಿತ್ತು.ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ ಬಾರಿಸಿದ್ದು 1021 ದಿನಗಳ ನಂತರ. ಕಳೆದ ವರ್ಷದ ಸೆಪ್ಟೆಂಬರ್’ನಲ್ಲಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಅಜೇಯ 122 ರನ್ ಸಿಡಿಸಿದ್ದರು.

ಇದಾದ 93 ದಿನಗಳಲ್ಲಿ ಕೊಹ್ಲಿ 72ನೇ ಅಂತರಾಷ್ಟ್ರೀಯ ಶತಕ ಬಾರಿಸಿದ್ದರು. ಕಳೆದ ಬಾಂಗ್ಲಾದೇಶ ಪ್ರವಾಸದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದರು. ಆ ಶತಕ ಬಾರಿಸಿ 31 ದಿನಗಳ ನಂತರ 73ನೇ ಶತಕ, 5 ದಿನಗಳ ನಂತರ 74ನೇ ಅಂತರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 ಶತಕ ಬಾರಿಸಿರುವ ಕಿಂಗ್ ಕೊಹ್ಲಿ ಕಳೆದ 4 ಏಕದಿನ ಪಂದ್ಯಗಳಲ್ಲಿ 3 ಶತಕಗಳೊಂದಿಗೆ ಅಬ್ಬರಿಸಿದ್ದಾರೆ.

  • 71ನೇ ಶತಕ: 1021 ದಿನ
  • 72ನೇ ಶತಕ: 93 ದಿನ
  • 73ನೇ ಶತಕ: 31 ದಿನ:
  • 74ನೇ ಶತಕ: 5 ದಿನ

ಇದನ್ನೂ ಓದಿ : ಕೇರಳದ ಅನಂತಪದ್ಮನಾಭದ ದರ್ಶನ ಪಡೆದ ಟೀಮ್ ಇಂಡಿಯಾ ಆಟಗಾರರು

ಇದನ್ನೂ ಓದಿ : Rishabh Pant health update : ರಿಷಭ್ ಪಂತ್ ಆಪರೇಷನ್ ಸಕ್ಸಸ್, ಕ್ರಿಕೆಟ್ ಮೈದಾನಕ್ಕೆ ಮರಳುವ ಬಗ್ಗೆ ಡಾಕ್ಟರ್ ಹೇಳಿದ್ದೇನು?

ಇದನ್ನೂ ಓದಿ : KL Rahul marriage : “ಬ್ಯಾಚುಲರ್” ರಾಹುಲ್‌ಗೆ ಮದುವೆಗೂ ಮುನ್ನ ನಾಳೆ ಕೊನೆಯ ಕ್ರಿಕೆಟ್ ಮ್ಯಾಚ್

ಜನವರಿ 18ರಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ವಿರಾಟ್ ಕೊಹ್ಲಿ ಅವರ ಶತಕ ಬೇಟೆ ಮುಂದುವರಿಯುವ ಸಾಧ್ಯತೆಯಿದೆ.

Virat Kohli 74th century : Virat Kohli, the run machine of the cricket world, has scored his 74th century in international cricket.

Comments are closed.