ಬಂಟ್ವಾಳ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (Arecanut price Increase) ಭರ್ಜರಿ ಏರಿಕೆ ಕಂಡಿದೆ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಳಿತದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯದ ಕೆಲವು ಮಾರುಕಟ್ಟೆಯ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಆದರೆ ಇಂದು (ಫೆಬ್ರವರಿ 1) ರಂದು ರಾಜ್ಯದ ಹೆಚ್ಚಿನ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ. ಕಳೆದ ಮೂರು ನಾಲ್ಕು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಿದ್ದು, ಇಂದು (ಜನವರಿ 30) ಕಾಣುತ್ತಿದ್ದರಿಂದ ಬೆಳೆಗಾರರಿಗೆ ಸಂತಸವನ್ನು ತಂದಿದೆ.
ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut)ಬೆಲೆಯಲ್ಲಿ ಸದ್ಯ ಭರ್ಜರಿ ಏರಿಕೆ ಕಂಡಿದ್ದು, ರೈತರಿಗೆ ನೆಮ್ಮದಿ ತಂದಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಇನ್ನಷ್ಟು ನಿರೀಕ್ಷೆಯಲ್ಲಿ ಕಾದಿದ್ದಾರೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಅಡಿಕೆಧಾರಣೆಯಲ್ಲಿ ರೂ. 53,629 ದರದಲ್ಲಿ ವಹಿವಾಟು ನಡೆಸುತ್ತಿದೆ. ಅಡಿಕೆ ಮಾರುಕಟ್ಟೆಯಲ್ಲಿ ಈ ಜಿಲ್ಲೆ ಪ್ರಮುಖ ಜಿಲ್ಲೆ ಆಗಿದ್ದು, ಇಂದು ಉತ್ತಮ ಬೆಲೆಯಲ್ಲಿ ಅಡಿಕೆ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.
Arecanut price Increase : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
- ಬಂಟ್ವಾಳ ಕೋಕಾ ರೂ. 12,500 ರೂ. 25,000
- ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
- ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
- ಬೆಂಗಳೂರು ಬೇರೆ ರೂ. 50,000 ರೂ. 55,000
- ಕಾರ್ಕಳ ಹೊಸ ವೆರೈಟಿ ರೂ. 30,000 ರೂ. 40,000
- ಕಾರ್ಕಳ ಹಳೆಯ ವೆರೈಟಿ ರೂ. 40,000 ರೂ. 54,500
- ಕುಮಟಾ ಚಿಪ್ಪು ರೂ. 27,019 ರೂ. 32,089
- ಕುಮಟಾ ಕೋಕಾ ರೂ. 17,509 ರೂ. 30,199
- ಕುಮಟಾ ಫ್ಯಾಕ್ಟರಿ ರೂ. 11,609 ರೂ. 19,749
- ಕುಮಟಾ ಹಳೆ ಚಾಲಿ ರೂ. 36,099 ರೂ. 39,299
- ಕುಮಟಾ ಹೊಸ ಚಾಲಿ ರೂ. 33,609 ರೂ. 35,917
- ಕುಂದಾಪುರ ಹಳೆ ಚಾಲಿ ರೂ. 40,000 ರೂ. 49,500
- ಕುಂದಾಪುರ ಹೊಸ ಚಾಲಿ ರೂ. 30,000 ರೂ. 37,500
- ಮಡಿಕೇರಿ ಕಚ್ಚಾ ರೂ. 43,911 ರೂ. 43,911
- ಪುತ್ತೂರು ಹೊಸ ವೆರೈಟಿ ರೂ. 33,000 ರೂ. 38,500
- ಶಿವಮೊಗ್ಗ ಬೆಟ್ಟೆ ರೂ. 40,000 ರೂ. 52,500
- ಶಿವಮೊಗ್ಗ ಗೊರಬಲು ರೂ. 19,009 ರೂ. 35,996
- ಶಿವಮೊಗ್ಗ ರಾಶಿ ರೂ. 35,100 ರೂ. 46,750
- ಶಿವಮೊಗ್ಗ ಸರಕು ರೂ. 54,640 ರೂ. 80,019
- ಸಿದ್ದಾಪುರ ಬಿಳೆ ಗೊಟು ರೂ. 27,500 ರೂ. 33,199
- ಸಿದ್ದಾಪುರ ಚಾಲಿ ರೂ. 38,299 ರೂ. 40,099
- ಸಿದ್ದಾಪುರ ಕೋಕಾ ರೂ. 26,099 ರೂ. 31,589
- ಸಿದ್ದಾಪುರ ಹೊಸ ಚಾಲಿ ರೂ. 31,669 ರೂ. 35,369
- ಸಿದ್ದಾಪುರ ಕೆಂಪು ಗೋಟು ರೂ. 28,199 ರೂ. 33,500
- ಸಿದ್ದಾಪುರ ರಾಶಿ ರೂ. 42,099 ರೂ. 45,799
- ಸಿದ್ದಾಪುರ ತಟ್ಟಿ ಬೆಟ್ಟೆ ರೂ. 38,009 ರೂ. 42,599
- ಯಲ್ಲಾಪುರ ಅಪಿ ರೂ. 54,779 ರೂ. 54,779
- ಯಲ್ಲಾಪುರ ಬಿಳೆ ಗೊಟು ರೂ. 23,899 ರೂ. 31,699
- ಯಲ್ಲಾಪುರ ಕೋಕಾ ರೂ. 16,899 ರೂ. 29,699
- ಯಲ್ಲಾಪುರ ಹಳೆ ಚಾಲಿ ರೂ. 35,799 ರೂ. 40,911
- ಯಲ್ಲಾಪುರ ಹೊಸ ಚಾಲಿ ರೂ. 31,699 ರೂ. 35,219
- ಯಲ್ಲಾಪುರ ಕೆಂಪು ಗೋಟು ರೂ. 24,899 ರೂ. 34,990
- ಯಲ್ಲಾಪುರ ರಾಶಿ ರೂ. 43,809 ರೂ. 53,629
- ಯಲ್ಲಾಪುರ ತಟ್ಟಿ ಬೆಟ್ಟೆ ರೂ. 38,030 ರೂ. 43,899
ಇದನ್ನೂ ಓದಿ : Arecanut price : ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆಧಾರಣೆ : ಬೆಳೆಗಾರರ ಮೊಗದಲ್ಲಿ ಸಂತಸ
ಇದನ್ನೂ ಓದಿ : ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಬೆಳೆಗಾರರು
ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಮತ್ತೆ ಇಳಿಕೆ : ಆತಂಕದಲ್ಲಿ ಬೆಳೆಗಾರರು
Arecanut price increase: Arecanut production has seen a huge increase again: Arecanut growers are happy