ಪಿಎಂ ಕಿಸಾನ್ ಯೋಜನೆ : ಇಕೆವೈಸಿ ಮಾಡದಿದ್ರೆ ಜಮೆಯಾಗಲ್ಲ ಹಣ

ಬೆಂಗಳೂರು : ರಾಜ್ಯ ಸರಕಾರದಿಂದ ರೈತ ಭಾಂದವರಿಗೆ ಗುಡ್‌ ನ್ಯೂಸ್‌ವೊಂದು ಕಾದಿದೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ರವರೊಂದಿಗೆ ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್‌ ರವರು ಪಿಎಂ ಕಿಸಾನ್‌ ಯೋಜನೆಯಡಿ ಆರ್ಥಿಕ ನೆರವು ವರ್ಗಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆಗ ವ್ಯವಸಾಯಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ, ಪಿಎಂ ಕಿಸಾನ್‌ ಯೋಜನೆಯಡಿ ರೈತ ಭಾಂದವರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ. ಈ ಯೋಜನೆಯಲ್ಲಿ ರೈತ ಭಾಂದವರು ಆರ್ಥಿಕ ನೆರವು ಪಡೆಯಲು (PM Kisan Scheme – E KYC) ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಇ-ಕೆವೈಸಿ ಬಾಕಿ ಇರುವ ರೈತ ಬಂಧುಗಳು ಕೂಡಲೇ ಇ ಕೆವೈಸಿ ಮಾಡಿಸಿಕೊಳ್ಳಲು ಮನವಿ ಮಾಡಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 13 ನೇ ಕಂತಿಗಾಗಿ ದೇಶದಾದ್ಯಂತ ಕೋಟಿಗಟ್ಟಲೆ ರೈತರು ಕೆಲವು ತಿಂಗಳುಗಳಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಕಂತಿನ ಹಣವನ್ನು ಬಿಡುಗಡೆ ಮಾಡಲು ಸರಕಾರ ತಯಾರಿ ನಡೆಸುತ್ತಿದೆ. ಹೀಗಾಗಿ ರೈತ ಬಂಧುಗಳನ್ನು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕಾಗಿದೆ.

ಪಿಎಂ ಕಿಸಾನ್‌ ಯೋಜನೆಯಡಿ ಇ-ಕೆವೈಸಿಯನ್ನು ಮಾಡಿಕೊಳ್ಳುವ ವಿಧಾನ :

  • ಕೇಂದ್ರ ಸರಕಾರದ ಪಿಎಂ ಕಿಸಾನ್‌ ಪೋರ್ಟಲ್‌ನ Farmers Corner ನಲ್ಲಿ ಓಟಿಪಿ ಆಧಾರಿತ ಇ-ಕೆವೈಸಿ ಮಾಡಬಹುದಾಗಿರುತ್ತದೆ.
  • ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಯನ್ನು ನಾಗರೀಕ ಸೇವಾ ಕೇಂದ್ರ/ ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.

ಇದನ್ನೂ ಓದಿ : ಪಿಎಮ್‌ ಕಿಸಾನ್‌ ಯೋಜನೆ : 2023ರ ಬಜೆಟ್‌ನಲ್ಲಿ ಸಿಗಲಿದೆ ಭರ್ಜರಿ ಗಿಫ್ಟ್

ಇದನ್ನೂ ಓದಿ : Kisan Credit Card : ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್

ಇದನ್ನೂ ಓದಿ : Pradhan Mantri Fasal Bima Yojana : ರೈತರಿಗೆ ಸಿಹಿ ಸುದ್ದಿ : ಬೆಳೆ ಹಾನಿಗೆ ಕೇಂದ್ರದಿಂದ ಸಿಗಲಿದೆ ಆರ್ಥಿಕ ನೆರವು

PM Kisan Scheme – E KYC : ಹೊಸ ರೈತರ ನೊಂದಣಿ ವಿವರ :

  • ಫೆಬ್ರವರಿ 1, 2023 ರ ನಂತರ ಪೌತಿ ಕಾರಣದಿಂದಾಗಿ ಭೂಹಿಡುವಳಿ ಮಾಲೀಕತ್ವ ಪಡೆದ ರೈತರು ಪಿಎಂ ಕಿಸಾನ್‌ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.
  • ಜಂಟಿ ಖಾತೆದಾರರಾಗಿದ್ದಲ್ಲಿ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ನಲ್ಲಿ ಎಲ್ಲಾ ಖಾತೆದಾರರು ತಮ್ಮ ಪಾಲಿನ ಜಮೀನಿನ ವಿಸ್ತೀರ್ನ ಸೇರ್ಪಡೆ ಮಾಡಿಸಲು ಕ್ರಮ ಕೈಗೊಂಡು ಪಿಎಂ ಕಿಸಾನ್‌ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾರೆ.
  • ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಸಮಸ್ಯೆಯಿಂದಾಗಿ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್‌ ಶಾಖೆಗಳನ್ನು ಸಂಪರ್ಕಿಸಿ ಆಧಾರ್‌ ಜೋಡಣೆ ಮಾಡಿಸಿಕೊಳ್ಳಲು ಕೋರಿದೆ.

PM Kisan Scheme – E KYC : PM Kisan Yojana: If EKYC is not done, money will not be collected

Comments are closed.