ಬುಧವಾರ, ಏಪ್ರಿಲ್ 30, 2025
HomeNationalAndhra-karnataka Bus: ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವೆ ಒಪ್ಪಂದ: ಸಂಚಾರ ಆರಂಭಿಸಲಿದೆ ಸಾವಿರಾರು ಬಸ್

Andhra-karnataka Bus: ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವೆ ಒಪ್ಪಂದ: ಸಂಚಾರ ಆರಂಭಿಸಲಿದೆ ಸಾವಿರಾರು ಬಸ್

- Advertisement -

ನವದೆಹಲಿ: (Andhra-karnataka Bus) ರಾಜ್ಯದಲ್ಲಿ ಕರೋನಾದ ಬಳಿಕ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಉದ್ಯಮ ನಷ್ಟದಲ್ಲಿತ್ತು. ಆದರೆ ಈಗ ಜನಜೀವನ ಸಹಜ ಸ್ಥಿತಿಗೆ ಮರಳಿದ ಬೆನ್ನಲ್ಲೇ ಬಸ್ ಉದ್ಯಮದಲ್ಲಿ ಚೇತರಿಕೆ ಕಾಣಲಾರಂಭಿಸಿದೆ. ಈ ಮಧ್ಯೆ ಕರ್ನಾಟಕ ಮತ್ತು ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮಗಳ ನಡುವೆ ಮಹತ್ವದ ಒಪ್ಪಂದ ನಡೆದಿದ್ದು ಇನ್ನು ಉಭಯ ರಾಜ್ಯಗಳ ನಡುವೆ ಬಸ ಸಂಚಾರ ಹೆಚ್ಚಲಿದೆ‌.

ಉಭಯ ರಾಜ್ಯಗಳಲ್ಲಿ ಸರ್ಕಾರಿ ಬಸ್​ಗಳ ಸಂಚಾರ ವ್ಯವಸ್ಥೆಯನ್ನು ಉತ್ತೇಜಿಸಲಿರುವ ಈ ಒಪ್ಪಂದಕ್ಕೆ ಕೆಎಸ್ಆರ್ಟಿಸಿ ನಿರ್ದೇಶಕ ಅನ್ಬುಕುಮಾರ್ ಸಹಿ ಹಾಕಿದ್ದಾರೆ. ಈ ತೀರ್ಮಾನದಂತೆ ಉಭಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್ ಓಡಿಸಲು ನಿರ್ಧರಿಸಲಾಗಿದೆ.

ಈ ಒಪ್ಪಂದಂತೆ ಪ್ರಕಾರ ರಾಜ್ಯದಲ್ಲಿ APSRTCಯ 1,32ಬಸ್​ಗಳ ಸಂಚಾರ ಮಾಡಲಿವೆ. ಈ ಮೂಲಕ ಸುಮಾರು 2 ಲಕ್ಷದ 34 ಸಾವಿರ ಕಿ.ಮೀ ನಷ್ಟು ದೂರ ರಾಜ್ಯದಲ್ಲಿ ಕ್ರಮಿಸಲಿವೆ. ಆಂಧ್ರಪ್ರದೇಶದಲ್ಲಿ KSRTCಯ 1,489 ಬಸ್​ಗಳು, 2.26 ಲಕ್ಷ ಕಿ.ಮೀ ಸಂಚಾರ ಮಾಡಲಿದೆ.ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತ್ವರಿತ ಕೈಗಾರಿಕಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಕೆಎಸ್ಸಾರ್ಟಿಸಿ ನಿರ್ದೇಶಕ ಅನ್ಬು ಕುಮಾರ್, ಮುಖ್ಯ ಸಂಚಾರ ವ್ಯವಸ್ಥಾಪಕ ಆಂಥೋನಿ ಜಾರ್ಜ್,ಎಸ್. ರಾಜೇಶ್ ಸಹಿ ಹಾಕಿದ್ದಾರೆ.

ಎರಡು ರಾಜ್ಯಗಳ ನಡುವೆ ಸದ್ಯ 8 ಅಂತರಾಜ್ಯ ಒಪ್ಪಂದಗಳು ನಡೆದಿದ್ದು, ಇದರಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ಅನ್ಬುಕುಮಾರ್ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ದ್ವಾರಕಾ ತಿರುಮಲ ರಾವ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ : Maharashtra crime: ಸ್ನೇಹಿತನನ್ನು ಕೊಲೆ ಮಾಡಿ ದೇಹವನ್ನು ಎಸೆಯಲು ಹೋದವ ತಾನೂ ಹೆಣವಾದ

ಇದನ್ನೂ ಓದಿ : Murder and suicide: ಬಾಲಕಿಯನ್ನು ಇರಿದು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಬಾಲಕ

ಇದನ್ನೂ ಓದಿ : Car fire accident: ಕಾರಿಗೆ ಬೆಂಕಿ ತಗುಲಿ ಗರ್ಭಿಣಿ, ಪತಿ ಸಜೀವ ದಹನ

Andhra-karnataka Bus: Agreement between Andhra Pradesh and Karnataka: Thousands of buses will start plying

RELATED ARTICLES

Most Popular