Vadiraja Swami: ಹಯವದನ ನಿರ್ದೇಶನದಲ್ಲಿ ಬೆಳ್ಳಿತೆರೆ ಮೇಲೆ ಬರಲಿದೆ ಶ್ರೀ ವಾದಿರಾಜ ಸ್ವಾಮಿಗಳ ಜೀವನಾಧಾರಿತ ಕಥೆ

(Vadiraja Swami) ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ನಿರ್ದೇಶಕ ಹಯವದನ ಇದೀಗ ಹೊಸದೊಂದು ಸಿನಿಮಾವನ್ನು ತೆರೆಗೆ ತರಲು ಸಿದ್ದವಾಗಿದ್ದು, ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಜೀವನಾಧಾರಿತ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಿದ್ದು, ವಾದಿರಾಜ ಗುರುಗಳ ಜಯಂತಿಯಂದೇ ಶ್ರೀ ವಾದಿರಾಜ ಸ್ವಾಮಿಗಳ ಮಠ ಹೂವಿನಕೆರೆ ಕುಂದಾಪುರದಲ್ಲಿ ಸಿನಿಮಾ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ನಿರ್ದೇಶಕ ಹಯವದನ ಮಾಹಿತಿ ಹಂಚಿಕೊಂಡಿದ್ದು, “ಸಿನಿಮಾದ ಸ್ಕ್ರಿಪ್ಟ್‌ ಹಾಗೂ ಇದರ ಬಗ್ಗೆ ರಿಸರ್ಚ್‌ ಕೆಲಸ ನಡೆಯುತ್ತಿದೆ. 15ನೇ ಶತಮಾನದಲ್ಲಿ ನಡೆದ ಕಥಾಯದಾರಿತ ಸಿನಿಮಾ ಇದಾಗಿದ್ದು, 120 ವರ್ಷಗಳ ಕಾಲ ಬದುಕಿದ್ದ ಶ್ರೀ ವಾದಿರಾಜ ಸ್ವಾಮಿಗಳ ಆ ಕಾಲಘಟ್ಟವನ್ನು ಸೃಷ್ಟಿ ಮಾಡುವುದೇ ಒಂದು ರೀತಿಯ ಚಾಲೆಂಜ್.‌ ಇದರಲ್ಲಿ ಸಿಜಿ, ಗ್ರಾಫಿಕ್ಸ್‌ ಹೆಚ್ಚಾಗಿರಲಿದ್ದು, ಭಕ್ತಿ ಗೌರವದಿಂದ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದೇನೆ. ಆದರೆ ಸಿನಿಮಾದ ತಾರಗಾಣ, ತಾಂತ್ರಿಕ ಬಳಗ ಇದ್ಯಾವುದು ಇನ್ನೂ ಫೈನಲ್‌ ಆಗಿಲ್ಲ” ಎಂದಿದ್ದಾರೆ. ಅಲ್ಲದೇ ” ಭಕ್ತಿ, ಸಮಾಜ ಸೇವೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಬಹಳಷ್ಟು ಹೇಳಿದ್ದಾರೆ. ಸಮಾಜ ಸುಧಾರಣೆಗಳನ್ನು ಮಾಡಿದ್ದಾರೆ. 15ನೇ ಶತಮಾನದಲ್ಲೇ ಕನ್ನಡದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರ.” ಎಂದು ತಿಳಿಸಿದ್ದಾರೆ.

ಇನ್ನೂ ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು, ” ವಾದಿರಾಜ ಗುರುಗಳು 15, 16 ನೇ ಶತಮಾನದಲ್ಲಿ ಬಂದ ಒಬ್ಬ ಮೇರು ವ್ಯಕ್ತಿಯಾಗಿದ್ದು, ಈ ಜಗತ್ತಿಗೆ ಹಲವು ಸಂದೇಶಗಳನ್ನು ನೀಡಿದವರಾಗಿದ್ದಾರೆ. ಅವರು 120 ವರ್ಷಗಳ ಬದುಕಿದ್ದು, 113 ವರ್ಷಗಳ ಕಾಲ ತಮ್ಮ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸೋದು ಅಷ್ಟೊಂದು ಸುಲಭವಲ್ಲ.” ಎಂದಿದ್ದಾರೆ.

“ಈ ಹಿಂದೆ ಹಲವು ಜನರು ವಾದಿರಾಜ ಗುರುಗಳ ಧಾರಾವಾಹಿ, ಸಿನಿಮಾ ಮಾಡೋದಾಗಿ ಬಂದಿದ್ದರು. ಆದರೆ ಇದಕ್ಕೆ ನಾವು ಒಪ್ಪಿಕೊಂಡಿರಲಿಲ್ಲ. ಅವರ ಬಗ್ಗೆ ಕಥೆ ಮಾಡಲು ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ದೆವು. ಆ ಸಮಯದಲ್ಲಿ ಬಂದವರೇ ನಿರ್ದೇಶಕರಾದ ಹಯವದನ. ಅವರು ವಾದಿರಾಜ ಗುರುಗಳ ಮಹಾನ್ ಭಕ್ತ ಕೂಡ ಹೌದು. ಅವರಲ್ಲಿ ಗುರುಗಳ ಬಗ್ಗೆ ಅಪಾರ ಶ್ರದ್ದೆ, ಭಕ್ತಿ ಇದೆ. ಸಮಾಜಕ್ಕೆ ವಾದಿರಾಜರು ಯಾವ ರೀತಿ ಸಂದೇಶ ನೀಡಿದ್ದರು ಅನ್ನೋದನ್ನು ಸಿನಿಮಾದಲ್ಲಿ ತರಬೇಕು ಎಂದು ನಾವು ಹೇಳಿದ್ದೇವೆ” ಎಂಬುದಾಗಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಇದನ್ನೂ ಓದಿ : Kiara- Siddharth wedding: ಬಾಲಿವುಡ್ ನಲ್ಲಿ ಮೊಳಗಿತು ಮಂಗಳವಾದ್ಯ: ಫೆಬ್ರವರಿ 6 ರಂದು ಕಿಯಾರಾ- ಸಿದ್ಧಾರ್ಥ್ ಕಲ್ಯಾಣ

ಇನ್ನೂ ಸಿನಿಮಾದ ಕೆಲಸವನ್ನು ಪ್ರಾರಂಭಿಸಿದ್ದು, ವಿಕ್ರಮ್ ಹತ್ವಾರ್ ಹಾಗೂ ನಿರ್ದೇಶಕ ಹಯವದನ ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದು, ಐದು ತಿಂಗಳಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಇನ್ನೂ ಸಿನಿಮಾ ಬಗ್ಗೆಯಾಗಲಿ ತಾರಾಗಣದ ಬಗ್ಗೆಯಾಗಲಿ ಮಾಹಿತಿ ಹಂಚಿಕೊಂಡಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದ್ದು, ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ಅಡಿಯಲ್ಲಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.

Story of Vadiraja Swami: The life story of Sri Vadiraja Swami is coming to the silver screen under the direction of Hayavadan.

Comments are closed.