ಮಂಗಳವಾರ, ಏಪ್ರಿಲ್ 29, 2025
HomeCinemaಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್

- Advertisement -

ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ, ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’ (Agent Movie) ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಹೌದು, ಟಾಲಿವುಡ್ ಅಂಗಳದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ ಏಪ್ರಿಲ್ 28ಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಎಂದು ತಿಳಿಸಿದ್ದ ಸಿನಿತಂಡ ಇದೀಗ ಬಿಡುಗಡೆಯ ದಿನಾಂಕವನ್ನು ರಿವೀಲ್ ಮಾಡಿದೆ.

ವೈಲ್ಡ್ ಆಕ್ಷನ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ ‘ಏಜೆಂಟ್’ ಸಿನಿಮಾದ ರಿಲೀಸ್ ಡೇಟ್ ರಿವೀಲ್ ಮಾಡಿದೆ ಸಿನಿತಂಡ. ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿಕ್ಸ್ ಪ್ಯಾಕ್ ನಲ್ಲಿ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ಸುರೇಂದರ್ ರೆಡ್ಡಿ ಈ ಸಿನಿಮಾವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಸಿನಿಮಾದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : Hoysala movie : ಧನಂಜಯ್ ಹೊಯ್ಸಳ ಸಿನಿಮಾಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

ಇದನ್ನೂ ಓದಿ : ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ರಾಮ್ ಚರಣ್ : ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್

ಇದನ್ನೂ ಓದಿ : Venkat Bharadwaj : ವೆಂಕಟ್ ಭಾರದ್ವಾಜ್ ನಿರ್ದೇಶನ ನಗುವಿನ ಹೂಗಳ ಮೇಲೆ ಸಿನಿಮಾದ ಮೊದಲ ಹಾಡು ರಿಲೀಸ್

ರಾಮಬ್ರಹ್ಮಂ ಸುಂಕರ ಎಕೆ ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಈ ಸಿನಿಮಾ ಸಂಕಲನ ಮಾಡಲಿದ್ದಾರೆ. ಇನ್ನು ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಸಿನಿಮಾಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಸಿನಿಂಾ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

Akhil Akkineni Agent Movie release date fixed

RELATED ARTICLES

Most Popular