Exclusive: ಬೆಂಗಳೂರಲ್ಲಿ ಕಿಚ್ಚ ಸುದೀಪ್ ಭೇಟಿ ಮಾಡಿದ ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಕಾರಣವೇನು ಗೊತ್ತೇ?

ಬೆಂಗಳೂರು: ಕೇರಳದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್, ರಾಜಸ್ಥಾನ್ ರಾಯಲ್ಸ್ (Rajastan Royals captain) ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson), ಸ್ಯಾಂಡಲ್’ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kichcha Sudeep) ಅವರನ್ನು ಭೇಟಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಜೆ.ಪಿ ನಗರದಲ್ಲಿರುವ ನಟ ಸುದೀಪ್ ಅವರ ಮನೆಯಲ್ಲಿಯೇ ಈ ಭೇಟಿ ನಡೆದಿದೆ.

ಕಳೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳೆ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಸಂಜು ಸ್ಯಾಮ್ಸನ್ ಅವರ ಕಾಲಿಗೆ ಗಾಯವಾಗಿತ್ತು. ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (National Cricket Academy- NCA) ಆಗಮಿಸಿದ್ದ ಸಂಜು ಸ್ಯಾಮ್ಸನ್ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು. ಇದೀಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಸ್ಯಾಮ್ಸನ್ NCAನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೇ ಇರುವ ಸಂಜು ಸ್ಯಾಮ್ಸನ್ ಸ್ನೇಹಿತರೊಬ್ಬರ ಜೊತೆ ನಟ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಅಂದ ಹಾಗೆ ಆ ಸ್ನೇಹಿತ ಬೇರಾರೂ ಅಲ್ಲ, ಕರ್ನಾಟಕದ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ಆಟಗಾರ ಕೆ.ಸಿ ಕಾರಿಯಪ್ಪ.

ಕೆ.ಸಿ ಕಾರಿಯಪ್ಪ ನಟ ಸುದೀಪ್ ಅವರಿಗೆ ಆತ್ಮೀಯ. ಹೀಗಾಗಿ ತನ್ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಸುದೀಪ್ ಅವರ ಮನೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ. ಕಳೆದ ಐಪಿಎಲ್ ಟೂರ್ನಿಯ ವೇಳೆ ರಾಯಲ್ಸ್ ಆಟಗಾರ ಇಂಗ್ಲೆಂಡ್’ನ ಜೋಸ್ ಬಟ್ಲರ್ ಅವರ ಆಟೋಗ್ರಾಫ್ ಮಾಡಿದ ಬ್ಯಾಟನ್ನು ಸುದೀಪ್ ಅವರಿಗೆ ಕಾರಿಯಪ್ಪ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ : Shaheen Shah Afridi Wedding : ಶಾಹೀದ್ ಅಫ್ರಿದಿ ಪುತ್ರಿಯನ್ನು ಮದುವೆಯಾದ ಶಾಹೀನ್ ಶಾ ಆಫ್ರಿದಿ

ಇದನ್ನೂ ಓದಿ : MS Dhoni: ಧೋನಿಗೆ ಸಂಕಷ್ಟ! ಮಹಿ ಶಾಲೇಲಿ ಓದೋಕೆ ಫೀಸ್ ಎಷ್ಟು ಗೊತ್ತೇ?

ಇದನ್ನೂ ಓದಿ : Exclusive: ಧೂಳು ತುಂಬಿದ ಬೆಂಗಳೂರು ಪಿಚ್’ನಲ್ಲಿ ಎಲ್ಲಿ ನೋಡಿದ್ರೂ ಕ್ರ್ಯಾಕ್, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಕಾಂಗರೂಗಳ ಅಭ್ಯಾಸ ಹೇಗಿದೆ ಗೊತ್ತಾ?

ನಟ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಮೇಲೆ ಇನ್ನಿಲ್ಲದ ಪ್ರೀತಿ. ನಟನೆಯ ಜೊತೆ ಹವ್ಯಾಸಕ್ಕಾಗಿ ಕ್ರಿಕೆಟ್ ಆಡುಲ ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್’ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕತ್ವ ವಹಿಸಿ ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಕರ್ನಾಟಕ ಚಲನಚಿತ್ರ ಕಪ್ (KCC) ಟೂರ್ನಿಯ ಸಂಸ್ಥಾಪಕರಾಗಿರುವ ಸುದೀಪ್ ಅಂತರಾಷ್ಟ್ರೀಯ ಆಟಗಾರರನ್ನು ಕರೆಸಿ ಕೆಸಿಸಿ ಟೂರ್ನಿಯಲ್ಲಿ ಆಡಿಸುತ್ತಿದ್ದಾರೆ. 3ನೇ ಆವೃತ್ತಿಯ ಕೆಸಿಸಿ ಟೂರ್ನಿಯಲ್ಲಿ ಕ್ರಿಸ್ ಗೇಲ್, ಸುರೇಶ್ ರೈನಾ, ಬ್ರಿಯಾನ್ ಲಾರಾ, ತಿಲಕರತ್ನೆ ದಿಲ್ಷಾನ್, ಹರ್ಷಲ್ ಗಿಬ್ಸ್ ಮತ್ತು ಸುಬ್ರಮಣ್ಯಮ್ ಬದ್ರಿನಾಥ್ ಆಡಲಿದ್ದಾರೆ.

Rajasthan Royals captain: Rajasthan captain Sanju Samson met Kichcha Sudeep in Bangalore, do you know the reason?

Comments are closed.