ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನಾಳೆಯಿಂದ (ಜೂನ್ 5) ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದ್ರೀಗ ಆದೇಶದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೊಂಚ ಬದಲಾವಣೆಯನ್ನು ಮಾಡಿದ್ದು ಜೂನ್ 5ರಂದು ಕೇವಲ ಶಾಲಾ ಮುಖ್ಯೋಪಾಧ್ಯಾಯರು ಮಾತ್ರವೇ ಶಾಲೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ.

ಬೇಸಿಗೆ ರಜೆಯಲ್ಲಿ ಶಿಕ್ಷಕರು ಈ ಬಾರಿ ಶಿಕ್ಷಕರು ಮಕ್ಕಳಿಗೆ ರೇಷನ್ ಹಂಚಿಕೆ, ಕೋವಿಡ್ ಚೆಕ್ ಪೋಸ್ಟ್ ಡ್ಯೂಟಿ, ಮಕ್ಕಳ ಆರೋಗ್ಯ ಸಮೀಕ್ಷೆ, ಮನೆ ಮನೆ ಸಮೀಕ್ಷೆ, ಸಂಪರ್ಕ ತಂಡದಲ್ಲಿ ಕಾರ್ಯನಿರ್ವಹಣೆ, ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆ, ಬಸ್ ಸ್ಟ್ಯಾಂಡ್ ಗಳಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಹಲವು ಕಾರ್ಯಗಳನ್ನು ನಡೆಸಿದ್ದಾರೆ.

ಹೀಗಾಗಿ ಶಾಲೆಗಳು ಪುನರಾರಂಭಕ್ಕೆ ಒಂದು ವಾರದ ಮೊದಲು ಶಾಲೆಗಳಿಗೆ ಶಿಕ್ಷಕರು ಹಾಜರಾಗುವಂತೆ ಸೂಚನೆ ನೀಡಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿಕೊಂಡಿತ್ತು. ಅಲ್ಲದೇ ದಾಖಲಾತಿ ಪ್ರಕ್ರಿಯೆ ಹಾಗೂ ಶಿಕ್ಷಕ ರಕ್ಷಕರ ಸಭೆ ನಡೆಸಲು ಕೇವಲ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂಧಿಗಳಷ್ಟೇ ಸಾಕಾಗುತ್ತದೆ. ಹೀಗಾಗಿ ಶಿಕ್ಷಕರಿಗೆ ಶಾಲಾಪುನರಾರಂಭಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.

ಶಿಕ್ಷಕರ ಸಂಘದ ಮನವಿಗೆ ಸ್ಪಂಧಿಸಿರುವ ಸಚಿವ ಸುರೇಶ್ ಕುಮಾರ್ ಜೂನ್ 5ರಂದು ಶಿಕ್ಷಕರಿಗೆ ಶಾಲೆಗೆ ಹಾಜರಾಗಲು ವಿನಾಯಿತಿ ನೀಡಲಾಗಿದೆ. ಕೇವಲ ಮುಖ್ಯೋಪಾಧ್ಯಾಯರು ಮಾತ್ರವೇ ಶಾಲೆಗೆ ಹಾಜರಾಗಿ ಶಾಲಾ ಪುನರಾರಂಭದ ಕುರಿತು ಶಿಕ್ಷಕರ ರಕ್ಷಕ ಸಂಘದ ಪೂರ್ವಭಾವಿ ಸಭೆಯ ಕುರಿತು ಕ್ರಮಗಳನ್ನು ಕೈಗೊಳ್ಳು ಸೂಚನೆಯನ್ನು ನೀಡಲಾಗಿದೆ. ಆದರೆ ಶಿಕ್ಷಕರು ಜೂನ್ 8 ರಿಂದ ಶಾಲೆಗೆ ಹಾಜರಾಗಬೇಕೆಂದು ಸೂಚನೆಯನ್ನು ನೀಡಿದ್ದಾರೆ. ಈ ಕುರಿತು ಅಧಿಕೃತ ಆದೇಶ ಇನ್ನಷ್ಟೇ ಹೊರಬರಬೇಕಿದೆ. ಆದರೆ ಶಾಲೆಗಳಿಗೆ ನಿತ್ಯವೂ ನೂರಾರು ಕಿ.ಮೀ. ದೂರದಿಂದ ಹೋಗಲು ಬಸ್ ವ್ಯವಸ್ಥೆಯಿಲ್ಲ. ಗ್ರಾಮೀಣ ಭಾಗದ ಶಿಕ್ಷಕರಿಗೆ ಶಾಲೆಗೆ ಹೋಗುವುದು ಅಸಾಧ್ಯವಾಗಿದೆ. ಅಲ್ಲದೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭವಾಗುವ ಒಂದು ವಾರದ ಮೊದಲು ಮಾತ್ರವೇ ಶಾಲೆಗೆ ಬರುವಂತೆ ಶಿಕ್ಷಕರಿಗೆ ಅವಕಾಶ ಕಲ್ಪಿಸುವಂತೆ ಶಿಕ್ಷಕ ಸಮೂಹ ಪಟ್ಟು ಹಿಡಿದಿದೆ.